ದಾವಣಗೆರೆ: ಜಿಲ್ಲೆಯ ವಿವಿಧೆಡೆ ಗುರುವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ 12 ಮನೆಗಳು ಹಾಗೂ 79 ಎಕರೆ ಬೆಳೆ ಹಾನಿಯಾಗಿದೆ. ₹ 16 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಮಳೆಯ ಜೊತೆಗೆ ಬಿರುಗಾಳಿ ಬೀಸಿದ್ದರಿಂದ ಹರಿಹರ ತಾಲ್ಲೂಕಿನಲ್ಲಿ 70 ಎಕರೆಗೂ ಹೆಚ್ಚು ಪ್ರದೇಶದ ಭತ್ತದ ಬೆಳೆ ಚಾಪೆ ಹಾಸಿದೆ. ಅಡಿಕೆ, ಬಾಳೆ ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಚನ್ನಗಿರಿ ತಾಲ್ಲೂಕಿನ 7, ಹರಿಹರ ತಾಲ್ಲೂಕಿನ 1 ಪಕ್ಕ ಮನೆ, ದಾವಣಗೆರೆ ತಾಲ್ಲೂಕಿನ 3 ಕಚ್ಚಾ ಮನೆಗಳಿಗೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿಯ ಪ್ರಕಟಣೆ ತಿಳಿಸಿದೆ.

ಹರಿಹರ ತಾಲ್ಲೂಕಿನಲ್ಲಿ 12 ಮಿ.ಮೀ, ಹೊನ್ನಾಳಿ ತಾಲ್ಲೂಕಿನಲ್ಲಿ 9.5 ಮಿ.ಮೀ, ದಾವಣಗೆರೆ ತಾಲ್ಲೂಕಿನಲ್ಲಿ 7 ಮಿ.ಮೀ., ಚನ್ನಗಿರಿಯಲ್ಲಿ 6 ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ 5 ಮಿ.ಮೀ ಮಳೆ ಸುರಿದಿದೆ. ಉಳಿದೆಡೆ ಚದುರಿದಂತೆ ಅಲ್ಲಲ್ಲಿ ಮಳೆಯಾಗಿದೆ.

ನೆಲಕಚ್ಚಿದ ಅಪಾರ ಭತ್ತ (ಸಂತೇಬೆನ್ನೂರು ವರದಿ): ಸಮೀಪದ ಕೆಂಪನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಬೀಸಿದ ಬಿರುಗಾಳಿ ಹಾಗೂ ಮಳೆಗೆ ಅಪಾರ ಪ್ರಮಾಣದ ಭತ್ತ ನೆಲ ಕಚ್ಚಿದೆ. ಅಡಿಕೆ ಹಾಗೂ ತೆಂಗಿನ ಮರಗಳು ಉರುಳಿವೆ.

ಕೆಂಪನಹಳ್ಳಿ, ಈರಗನಹಳ್ಳಿ, ವೆಂಕಟೇಶ್ವರ ಕ್ಯಾಂಪ್, ಕಾಮನಹಳ್ಳಿ ಸುತ್ತಮುತ್ತಲಿನ ರೈತರ ಗದ್ದೆಗಳಲ್ಲಿ ಭತ್ತದ ಬೆಳೆ ಚಾಪೆ ಹಾಸಿದಂತಾಗಿದೆ.

‘ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳಿಂದ ಸಮೀಕ್ಷೆ ನಡೆಸಲು ಸೂಚಿಸಲಾಗಿದೆ. ರೈತರಿಗೆ ಸೂಕ್ತ ಪರಿಹಾರ ಕೊಡಿಸಲು ವರದಿ ಸಲ್ಲಿಸಲಾಗುವುದು’ ಎಂದು ತಹಶೀಲ್ದಾರ್ ಎನ್.ಜೆ.ನಾಗರಾಜ್ ತಿಳಿಸಿದರು.

ಕಂದಾಯ ನಿರೀಕ್ಷಕ ಶ್ರೀನಿವಾಸ್, ಕೃಷಿ ಅಧಿಕಾರಿ ಕುಮಾರ್, ಸಹಾಯಕ ತೋಟಗಾರಿಕೆ ಅಧಿಕಾರಿ ಏಕಾಂತ್ ಅವರು ಸ್ಥಳಕ್ಕೆ ಬೇಟಿ ನೀಡಿ ನಷ್ಟದ ಮಾಹಿತಿ ಸಂಗ್ರಹಿಸಿದರು.

ಹರಿಹರ ವರದಿ: ಮಳೆ ಹಾನಿಗೀಡಾದ ಸ್ಥಳಗಳಿಗೆ ಶಾಸಕ ಬಿ.ಪಿ. ಹರೀಶ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಷ್ಟ ಅನುಭವಿಸಿರುವ ರೈತರಿಗೆ ಹೆಚ್ಚಿನ ಪರಿಹಾರ ಸಿಗುವಂತೆ ಕೂಡಲೇ ಸಮಗ್ರ ವರದಿ ಸಿದ್ಧಪಡಿಸಿ ಮೇಲಧಿಕಾರಿಗಳಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತಹಶೀಲ್ದಾರ್ ಜಿ. ಸಂತೋಷ್ ಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಟರಾಜ್ ಇದ್ದರು.

ವ್ಯಾಪಕ ಹಾನಿ (ಕಡರನಾಯ್ಕನಹಳ್ಳಿ ವರದಿ): ಸಮೀಪದ ವಿವಿಧ ಗ್ರಾಮಗಳಲ್ಲಿ ಗಾಳಿ, ಬಿರು ಮಳೆಯಿಂದಾಗಿ ಮನೆಗಳು, ಅಡಿಕೆ ಹಾಗೂ ತೆಂಗಿನ ಮರಗಳು ನೆಲಕ್ಕುರುಳಿ ವ್ಯಾಪಕ ಹಾನಿಯಾಗಿದೆ. ಅಧಿಕಾರಿಗಳು ಹಾನಿಯ ಪರಿಶೀಲನೆ ಮಾಡಿದರು.

ಕೊಕ್ಕನೂರು, ಗೋವಿನ ಹಾಳು, ಹೊಳೆ ಸಿರಿಗೆರೆ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರಿಳಿದ್ದವು. ಅವುಗಳನ್ನು ಬದಲಾಯಿಸಿದ ಬೆಸ್ಕಾಂ ಸಿಬ್ಬಂದಿ, ವಿದ್ಯುತ್ ಸರಬರಾಜು ಪುನರ್ ಆರಂಭಿಸಿದರು.

ಕಡರನಾಯ್ಕನಹಳ್ಳಿ–ಕೊಕ್ಕನೂರು ಮಾರ್ಗ ಮಧ್ಯದಲ್ಲಿ ಮರವೊಂದು ನೆಲಕ್ಕುರುಳಿದೆ. ಇದನ್ನು ತೆರವುಗೊಳಿಸಲು ಯಾರೂ ಮುಂದೆ ಬಾರದ ಕಾರಣ, ದಿನಪೂರ್ತಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಹೊನ್ನಾಳಿ ವರದಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಗುರುವಾರ ತಡರಾತ್ರಿ ಉತ್ತಮ ಮಳೆಯಾಗಿದೆ. ಸಂಜೆ 7 ಗಂಟೆಗೆ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಮಳೆ, ಗಾಳಿ ಆರಂಭವಾಯಿತು. ರಾತ್ರಿ 12 ಗಂಟೆ ನಂತರ ಉತ್ತಮವಾಗಿ ಸುರಿಯಿತು.

ತುಂಗಭದ್ರಾ ನದಿನೀರಿನ ಮಟ್ಟ 5.2 ಮೀಟರ್ಗೆ ಏರಿಕೆಯಾಗಿದೆ.

ಯಾವುದೇ ಅನಾಹುತಗಳು ಸಂಭವಿಸಿಲ್ಲ ತಹಶೀಲ್ದಾರ್ ಸಿ. ರಾಜೇಶ್ಕುಮಾರ್ ಹೇಳಿದ್ದಾರೆ.

ಮಲೇಬೆನ್ನೂರು ವರದಿ: ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಸುರಿದ ಗಾಳಿ, ಮಳೆಗೆ ಕುಣಿಬೆಳೆಕೆರೆ, ಜಿಗಳಿ ಹೊರವಲಯದ ಯಲವಟ್ಟಿ ರಸ್ತೆ ಅಕ್ಕಪಕ್ಕದ ಜಮೀನುಗಳು, ಆದಾಪುರ, ನಿಟ್ಟೂರು, ಸಂಕ್ಲೀಪುರ, ಗುಳದಹಳ್ಳಿ, ಭಾಗದಲ್ಲಿ ಅಂದಾಜು 40 ಎಕರೆ ಭತ್ತ ಜಲಾವೃತವಾಗಿದೆ.

ಕಟಾವಿಗೆ ಸಿದ್ಧವಾಗಿದ್ದ ಭತ್ತದ ಗದ್ದೆಗಳಲ್ಲಿ ನೀರು ನಿಂತಿರುವ ಕಾರಣ, ಭತ್ತದ ಒಕ್ಕಲು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೊಸಳ್ಳಿ ಕರಿಬಸಪ್ಪ, ಸಂಕ್ಲೀಪುರದ ಚಂದ್ರು ಬೇಸರ ವ್ಯಕ್ತಪಡಿಸಿದರು.

ನಂದಿತಾವರೆ, ಕುಣಿಬೆಳಕೆರೆ ಭಾಗದಲ್ಲಿ ಬಿದ್ದಿದ್ದ ಕಂಬಗಳ ಬದಲಿಗೆ ಹೊಸದಾಗಿ ಅಳವಡಿಸಲಾಗುತ್ತಿದೆ. ತಂತಿ ಜೋಡಣೆ ಕಾರ್ಯ ಭರದಿಂದ ನಡೆಯಿತು.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಸಮರೋಪಾದಿಯಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎಂದು ಬೆಸ್ಕಾಂ ಶಾಖಾಧಿಖಾರಿ ಮೇಘರಾಜ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-43-648536700

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.