ಸಾಸ್ವೆಹಳ್ಳಿ: ‘ಸಾರ್ವಜನಿಕರು ಸಕಾಲದಲ್ಲಿ ಕಂದಾಯ ಪಾವತಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಿ.ಜಿ. ಅಶೋಕ್ ಸಲಹೆ ನೀಡಿದರು.

ಗ್ರಾಮದಲ್ಲಿ ಈಚೆಗೆ ನಡೆದ ‘ಕಂದಾಯ ವಸೂಲಾತಿ ಆಂದೋಲನ’ದಲ್ಲಿ ಮಾತನಾಡಿದರು.

‘ಹೊನ್ನಾಳಿ ತಾಲ್ಲೂಕಿನಲ್ಲಿ ಕುಳಗಟ್ಟೆ, ರಾಂಪುರ, ಬೇಲಿಮಲ್ಲೂರು ಮತ್ತು ಕಮ್ಮಾರಘಟ್ಟೆ ಗ್ರಾಮ ಪಂಚಾಯಿತಿಗಳು ಶೇ 100ರಷ್ಟು ಕಂದಾಯ ವಸೂಲಾತಿ ಮಾಡಿವೆ. ಇನ್ನುಳಿದಂತೆ ಬೆನಕನಹಳ್ಳಿ, ಎಚ್.ಜಿ.ಹಳ್ಳಿ, ಬೀರಗೊಂಡನಹಳ್ಳಿ, ಕೂಲಂಬಿ ಮತ್ತು ಯಕ್ಕನಹಳ್ಳಿ ಪಂಚಾಯಿತಿಗಳು ಶೇ 80ರಿಂದ 90ರಷ್ಟು ಪ್ರಗತಿ ಸಾಧಿಸಿವೆ. ಆದರೆ, ಹನುಮಸಾಗರ ಮತ್ತು ಕುಂಬಳೂರು ಪಂಚಾಯಿತಿಗಳು ಶೇ 50ಕ್ಕಿಂತ ಕಡಿಮೆ ಸಾಧನೆ ಮಾಡಿದ್ದು, ಸುಧಾರಣೆ ಅಗತ್ಯವಿದೆ’ ಎಂದರು.

ಮಾರ್ಚ್ 31ರೊಳಗೆ ತೆರಿಗೆ ಪಾವತಿಸದಿದ್ದರೆ ನಿಯಮಾನುಸಾರ ಶೇ 5ರಷ್ಟು ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಸಾಸ್ವೆಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎ.ಕೆ ಧರ್ಮಣ್ಣ, ಕಾರ್ಯದರ್ಶಿ ಹನುಮಂತನಾಯ್ಕ, ದ್ವಿತೀಯ ದರ್ಜೆ ಸಹಾಯಕ ಕುಮಾರ್, ಬಿಲ್ ಕಲೆಕ್ಟರ್ ಪರಮೇಶ್ ಹಾಗೂ ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-43-1681664248

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.