ದಾವಣಗೆರೆ: ‘ನಾವು ಇಷ್ಟು ವರ್ಷ ಅಜ್ಜನವರ (ಶಾಮನೂರು ಶಿವಶಂಕರಪ್ಪ) ರಾಜಕಾರಣ ನೋಡಿದ್ದೇವೆ. ಅವರ ಅನಿರೀಕ್ಷಿತ ನಿರ್ಗಮನದಿಂದ ನಿರ್ವಾತ ಸೃಷ್ಟಿಯಾಗಿದೆ. ಅವರ ಕುಟುಂಬ ಸದಸ್ಯರೋ ಅಥವಾ ಹೊರಗಿನವರೋ ಎಂಬ ಗೊಂದಲ ಪಕ್ಷದಲ್ಲೇ ಬಗೆಹರಿದಿಲ್ಲ. ಹುರಿಯಾಳು ಯಾರೆಂದು ಗೊತ್ತಿಲ್ಲದಿದ್ದಾಗ ಮತ ಕೇಳಿ ಯಾರು ಬರುತ್ತಾರೆ? ಹೀಗಿದ್ದಾಗ ಸೋಲು–ಗೆಲುವಿನ ನಿರ್ಧಾರ ಆಮೇಲಿನ ಮಾತು’

ಯರಗುಂಟೆ ಗ್ರಾಮದ ಕಟ್ಟೆಯ ಮೇಲೆ ಕುಳಿತು ಊರನವರ ಜತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದ ಶೇಖರಪ್ಪ ಅವರನ್ನು ಮಾತಿಗೆಳೆದಾಗ, ಅವರ ಅಂತರಂಗ ತೆರೆದುಕೊಂಡಿದ್ದು ಹೀಗೆ..

‘ಅಂದಾಜು 250 ಕುಟುಂಬಗಳು ವಾಸಿಸುತ್ತಿರುವ ಈ ಊರಿನಲ್ಲಿ ಸಣ್ಣ ಹಿಡುವಳಿದಾರರ ಸಂಖ್ಯೆಯೇ ಅಧಿಕ. ದಾವಣಗೆರೆ ನಗರದ ಸೆರಗಿನಲ್ಲಿರುವ ಕಾರಣ ಮೂಲಸೌಕರ್ಯಕ್ಕೆ ತೊಂದರೆಯಿಲ್ಲ. ಆದರೆ ಅಭಿವೃದ್ಧಿಯ ಮತ್ತೊಂದು ಮಜಲನ್ನು ನಾವು ನೋಡಬಾರದೇ’ ಎನ್ನುತ್ತಾ ಸೂಕ್ಷ್ಮವೊಂದನ್ನು ಬಿಚ್ಚಿಟ್ಟವರು ಹಿರಿಯರಾದ ಗುರುಸಿದ್ದಪ್ಪ.

‘ಏಪ್ರಿಲ್ 9ಕ್ಕೆ ಎಲೆಕ್ಷನ್ ಇದೆ. ಏನು ಹೇಳ್ತೀರಿ’ ಎಂಬ ಪ್ರಶ್ನೆಯನ್ನು ಎಸ್.ಎಂ. ಕೃಷ್ಣ ನಗರದ ಫಾತಿಮಾ ಅವರ ಮುಂದಿಟ್ಟಾಗ, ‘ಏನೂ ಗೊತ್ತಿಲ್ರಿ.. ಇನ್ನೂ ಯಾವ ರಾಜಕಿಯದವ್ರೂ ಮನೆ ಹತ್ರ ಬಂದಿಲ್ಲ. ಏನು ಮಾಡಬೇಕು ಅಂತಾ ಯೋಚಿಸಿಲ್ಲ’ ಎನ್ನುತ್ತಾ ಮನೆಯೊಳಗೆ ನಡೆದರು. ಅಲ್ಲೇ ಇದ್ದ ಬಸಮ್ಮ ಅವರದ್ದೂ ಬಹುತೇಕ ಇದೇ ನಿಲುವು.

ಇನ್ನೂ ಕೆಲವರಿಗೆ ಚುನಾವಣೆ ಘೋಷಣೆಯಾಗಿರುವ ಮಾಹಿತಿ ಇಲ್ಲ. ‘ಯಾವ ಚುನಾವಣೆ, ನಮಗೇನೂ ಗೊತ್ತಿಲ್ಲ. ಎಲ್ಲ ಯಜಮಾನರೇ ನೋಡಿಕೊಳ್ತಾರೆ’ ಎಂದು ರೇಷ್ಮಾ ಸುಮ್ಮನಾದರು.

‘ಇಲ್ಲಿ ಹಿಂದೂ-ಮುಸ್ಲಿಂ ಎಂಬ ಭೇದ ಇಲ್ಲ. ಎಲ್ಲರೂ ಒಟ್ಟಾಗಿ ವಾಸಿಸುತ್ತಿದ್ದೇವೆ. ರಾಜಕೀಯದವ್ರು ಯಾರೂ ನಮ್ ಏರಿಯಾಗೆ ಬಂದಿಲ್ಲ. ಅವರು ಬಂದರೂ, ಬರದಿದ್ದರೂ ನಮ್ಮ ನಿರ್ಧಾರ ಅಚಲ’ ಎನ್ನುತ್ತಾರೆ ವಿಜಯನಗರದ ನಿವಾಸಿ, ಗೃಹಿಣಿ ಸುಮಾ.

ಪಕ್ಕದ ವಿನಾಯಕ ನಗರದ ನಿವಾಸಿ ಪ್ರಭು ಅವರನ್ನು ಮಾತನಾಡಿಸಿದಾಗ, ‘ಅವರು ಬಂದಾಗ ನೋಡೋಣ ಬಿಡ್ರಿ’ ಎಂಬ ಸರಳ ಉತ್ತರ ಸಿದ್ಧವಿತ್ತು.

ರಾಜ್ಯ, ಜಿಲ್ಲಾ ಮಟ್ಟದಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಲ್ಲಿಗಳಲ್ಲಿ ಓಡಾಡಿದರೆ ಅದರ ತೀವ್ರತೆ ಕಾಣುವುದಿಲ್ಲ. ಮತದಾನಕ್ಕೆ 18 ದಿನ ಬಾಕಿ ಇದ್ದರೂ, ಚುನಾವಣಾ ಪ್ರಚಾರಕ್ಕೆ ಮನೆಯ ಹೊಸ್ತಿಲನ್ನು ರಾಜಕೀಯ ಮುಖಂಡರೂ ಇನ್ನೂ ತುಳಿದಿಲ್ಲ ಎಂಬ ವಾಸ್ತವವನ್ನು ಮತದಾರರು ತೆರೆದಿಡುತ್ತಾರೆ.

ವಿಧಾನಸಭಾ ಕ್ಷೇತ್ರದ 284 ಬೂತ್ಗಳ ಪೈಕಿ 50 ಗ್ರಾಮೀಣ ಪ್ರದೇಶದಲ್ಲಿ ಚದುರಿವೆ. ಉಳಿದವು ನಗರದೊಳಗೆ ವಿಸ್ತರಿಸಿವೆ. ಬಿಜೆಪಿ ಮೊನ್ನೆತಾನೇ ಕಾರ್ಯಕರ್ತರ ಬೃಹತ್ ಸಭೆ ನಡೆಸಿದೆ. ಎರಡೂ ಪಕ್ಷಗಳು ಬೂತ್ ಮಟ್ಟದಲ್ಲಿ ಕೆಲಸ ಶುರು ಮಾಡುತ್ತಿರುವುದಾಗಿ ಹೇಳಿಕೊಂಡಿವೆ. ಆದರೆ ಇರುವ ಅಲ್ಪ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ಮತದಾರರ ಮನವೊಲಿಸುವ ಸವಾಲು ಪಕ್ಷಗಳ ಮುಂದಿದೆ.

ಉಳಿಯುವುದು ಎರಡು ವಾರ!

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಮತದಾನಕ್ಕೆ ಏಪ್ರಿಲ್ 9ರಂದು ಮುಹೂರ್ತ ನಿಗದಿಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಶ್ರೀನಿವಾಸ ದಾಸಕರಿಯಪ್ಪ ಕಣಕ್ಕಿಳಿದಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಯ್ಕೆ ಕಗ್ಗಂಟಾಗಿದೆ. ಯುಗಾದಿ ಈದ್–ಉಲ್– ಫಿತ್ರ್ ಹಬ್ಬಗಳು ಹಾಗೂ ವಾರಾಂತ್ಯದ ರಜೆ ಸಾಲುಗಟ್ಟಿವೆ. ನಾಮಪತ್ರ ಸಲ್ಲಿಸಲು ಮಾರ್ಚ್ 23 ಕೊನೆಯ ದಿನ. ನಾಮಪತ್ರ ಪರಿಶೀಲನೆ ಹಿಂತೆಗೆತ ಪ್ರಕ್ರಿಯೆಗಳು ಮುಗಿದ ಬಳಿಕ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಅಖೈರುಗೊಳ್ಳಲಿದ್ದಾರೆ. ಆ ನಂತರ ಮತದಾನಕ್ಕೆ ಉಳಿಯುವುದು ಅಂದಾಜು ಎರಡು ವಾರ.

ಸ್ವಾಮೀಜಿ ಮುಖಂಡರ ಭೇಟಿ

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರು ಶನಿವಾರದಿಂದ ಅಧಿಕೃತ ಚುನಾವಣಾ ಪ್ರಚಾರ ಶುರು ಮಾಡಿದ್ದಾರೆ. ಜಿಲ್ಲೆಯ ವಿವಿಧ ಸಮುದಾಯಗಳ ಸ್ವಾಮೀಜಿಗಳು ಹಾಗೂ ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದಾರೆ. ಹರಿಹರದ ಪಂಚಮಸಾಲಿ ಪೀಠ ಕನಕ ಗುರುಪೀಠ ದಾವಣಗೆರೆಯ ವಿರಕ್ತ ಮಠ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಮಠಕ್ಕೆ ತೆರೆಳಿ ಸ್ವಾಮೀಜಿಗಳ ಆಶೀರ್ವಾದ ಪಡೆದು ಬೆಂಬಲ ಕೋರಿದರು. ಮನೆಮನೆ ಪ್ರಚಾರ ಇನ್ನಷ್ಟೇ ಶುರುವಾಗಬೇಕಿದೆ.

ಬಿ–ಫಾರಂ ಸಿಕ್ಕ ಬಳಿಕ ಭೇಟಿ

ಉಮೇದುವಾರಿಕೆ ಸಲ್ಲಿಸಿರುವ ಕಾಂಗ್ರೆಸ್ ಮುಖಂಡ ಸಮರ್ಥ ಶಾಮನೂರು ಅವರು ಸ್ವಾಮೀಜಿಗಳು ಪಕ್ಷದ ಮುಖಂಡರ ಭೇಟಿಯಲ್ಲಿ ತೊಡಗಿದ್ದಾರೆ. ಶನಿವಾರವೂ ಅವರು ವಿವಿಧ ಮುಖಂಡರ ಮನೆಗಳಿಗೆ ತೆರೆಳಿ ಬೆಂಬಲ ನೀಡುವಂತೆ ಕೋರಿದರು. ‘ಪಕ್ಷದ ಕಾರ್ಯಕರ್ತರು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ‘ಬಿ’ ಫಾರಂ ಸಿಕ್ಕ ಬಳಿಕ ಸಮರ್ಥ ಸಹ ಮತದಾರರ ಮನೆಗಳಿಗೆ ತೆರಳಿ ಮತಯಾಚನೆ ಮಾಡಲಿದ್ದಾರೆ’ ಎಂದು ಬೆಂಬಲಿಗರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.