ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ವಿಷಯವು ‘ಅಭಿವೃದ್ಧಿ’ಯನ್ನೇ ಕೇಂದ್ರಿಕರಿಸಿದೆ. ಕಾಂಗ್ರೆಸ್, ಬಿಜೆಪಿ, ಎಸ್ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳೂ ಈ ಬಾರಿಯ ಉಪಚುನಾವಣೆಯಲ್ಲಿ ಅಭಿವೃದ್ಧಿಯ ವಿಚಾರವನ್ನೇ ಮತದಾರರ ಮುಂದಿಡುತ್ತಿದ್ದಾರೆ.

ಸಿ.ಸಿ. ರಸ್ತೆಗಳ ನಿರ್ಮಾಣ, ಜಲಾವೃತ ವಾಗುತ್ತಿದ್ದ ಜನವಸತಿ ಪ್ರದೇಶಗಳಲ್ಲಿ ಮಾಡಿದ ಅಭಿವೃದ್ಧಿಯನ್ನು ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಪ್ರಸ್ತಾಪಿಸುತ್ತಿದೆಯಾದರೂ, ಹೊಸ ದಾವಣಗೆರೆಗೆ ಹೋಲಿಸಿದರೆ ಹಳೆ ದಾವಣಗೆರೆಯು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದನ್ನು ಒಪ್ಪಿಕೊಳ್ಳುತ್ತಿದೆ.

‘ದಕ್ಷಿಣ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲ. ಪದವಿ ಕಾಲೇಜುಗಳಿಲ್ಲ. ಕಾರ್ಮಿಕರ ಬದುಕನ್ನು ಹಸನುಗೊಳಿಸಲು ಯಾವುದೇ ಪ್ರಯತ್ನಗಳು ನಡೆದಿಲ್ಲ. ಇಷ್ಟು ವರ್ಷಗಳ ಕಾಲ ಬ್ಲಾಕ್ಮೇಲ್ ರಾಜಕಾರಣವೇ ವಿಜೃಂಭಿಸಿದೆ’ ಎಂದು ಬಿಜೆಪಿ ಹಾಗೂ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ದೂರುತ್ತಿವೆ. ಈ ವಿಷಯಗಳನ್ನೇ ಚುನಾವಣೆಯಲ್ಲಿ ಪ್ರಧಾನವಾಗಿ ಬಳಸಿಕೊಳ್ಳುತ್ತಿವೆ.

ಚುನಾವಣಾ ಪ್ರಚಾರದ ಭರಾಟೆಯಲ್ಲಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳ ನಡುವಿನ ಅಭಿವೃದ್ಧಿಯ ‘ಅಸಮತೋಲನ’ವೂ ಬಹು ಚರ್ಚಿತ ವಿಚಾರವಾಗುತ್ತಿದೆ. ದಕ್ಷಿಣ ಕ್ಷೇತ್ರದಲ್ಲಿ ಮಂಡಕ್ಕಿ ಬಟ್ಟಿ ಕಾರ್ಮಿಕರು, ಗ್ಯಾರೇಜ್ ಕಾರ್ಮಿಕರು, ಆಟೊ ಚಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ಶ್ರಮಿಕ ವರ್ಗವು ದೊಡ್ಡ ಸಂಖ್ಯೆಯಲ್ಲಿದೆ. ಈ ವರ್ಗದ ಜನರ ಅಭಿವೃದ್ಧಿಗೆ ದೊಡ್ಡಮಟ್ಟದಲ್ಲಿ ಯೋಜನೆಗಳನ್ನು ರೂಪಿಸಿಲ್ಲ ಎಂಬ ಆರೋಪವೂ ವ್ಯಕ್ತವಾಗುತ್ತಿದೆ.

‘ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಹಳೆ ದಾವಣಗೆರೆಯ ಕಿರಿದಾದ ಓಣಿಗಳಲ್ಲಿ ಎಲ್ಲೆಂದರಲ್ಲಿ ಚರಂಡಿ ನೀರು ಹರಿಯುತ್ತಿದೆ. ಇಂದಿಗೂ ಡಾಂಬರು ಕಾಣದ ಹಲವು ರಸ್ತೆಗಳಿವೆ. ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸರ್ಕಾರಿ ಆಸ್ಪತ್ರೆಗಳಿಲ್ಲ. ಸಣ್ಣಪುಟ್ಟ ಆಸ್ಪತ್ರೆಗಳಿದ್ದರೂ, ವೈದ್ಯರು, ಸಿಬ್ಬಂದಿ ಇಲ್ಲ. ಶೈಕ್ಷಣಿಕ ತರಬೇತಿ ಕೇಂದ್ರಗಳಿಲ್ಲ. ಮಂಡಕ್ಕಿ ಬಟ್ಟಿಗಳ ಸ್ಥಳಾಂತರವಾಗಿಲ್ಲ. ವಿವಿಧ ವಲಯಗಳ ಕಾರ್ಮಿಕರಿಗೆ ಕನಿಷ್ಠ ಮೂಲ ಸೌಲಭ್ಯ ಒದಗಿಸಿಲ್ಲ’ ಎನ್ನುತ್ತಾರೆ ಎಸ್ಡಿಪಿಐ ಮಾಧ್ಯಮ ಸಂಯೋಜಕ ಮಹಮ್ಮದ್ ಅಜರುದ್ದೀನ್.

ಮುಸ್ಲಿಂ ಮತ ಸೆಳೆಯುವ ಅನಿವಾರ್ಯತೆ: ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಯು ಹಿಂದುತ್ವ ಹಾಗೂ ರಾಷ್ಟ್ರೀಯತೆ ವಿಷಯಗಳನ್ನೇ ಮುಖ್ಯವಾಗಿಟ್ಟುಕೊಂಡು ಚುನಾವಣೆ ಎದುರಿಸುತ್ತದೆ. ಆದರೆ, ಸದ್ಯ ನಡೆದಿರುವ ಉಪ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ಮುಖಂಡರು ಅಪ್ಪಿತಪ್ಪಿಯೂ ‘ಹಿಂದುತ್ವ’ದ ಭಾಷಣ ಮಾಡುತ್ತಿಲ್ಲ. ಪಕ್ಷದ ಗೆಲುವಿಗೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಮತದಾರರನ್ನು ಸೆಳೆಯುವುದು ಬಿಜೆಪಿಗೆ ಅನಿವಾರ್ಯವಾಗಿದೆ.

‘ಒಂದು ವೇಳೆ ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದರೆ ಬಿಜೆಪಿಯು ಹಿಂದುತ್ವ ಹಾಗೂ ರಾಷ್ಟ್ರೀಯತೆಯನ್ನೇ ಪ್ರಚಾರದ ಮುಖ್ಯ ವಿಷಯವನ್ನಾಗಿಸುತ್ತಿತ್ತು. ಹಿಂದುತ್ವದ ಬಗ್ಗೆ ಗಟ್ಟಿಯಾಗಿ ಧ್ವನಿಯೆತ್ತುವವರನ್ನೇ ಸ್ಟಾರ್ ಪ್ರಚಾರಕರನ್ನಾಗಿ ಕರೆಸುವ ಉದ್ದೇಶ ಹೊಂದಲಾಗಿತ್ತು. ಶಾಮನೂರು ಕುಟುಂಬದವರಿಗೇ ಕಾಂಗ್ರೆಸ್ ಮಣೆ ಹಾಕಿದ್ದರಿಂದ ಕುಟುಂಬ ರಾಜಕಾರಣವನ್ನೇ ಪ್ರಧಾನ ವಿಷಯವಾಗಿಸಿಕೊಳ್ಳಲಾಗಿದೆ’ ಎನ್ನುತ್ತಾರೆ ಬಿಜೆಪಿ ಮುಖಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.