ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿದ ಉಮೇದುವಾರರಿಗೆ ಚುನಾವಣಾಧಿಕಾರಿ ಚಿಹ್ನೆ ಹಂಚಿಕೆ ಮಾಡಿದ್ದಾರೆ. ಕಲ್ಲಂಗಡಿ, ಬೆಂಕಿ ಪೊಟ್ಟಣ, ಸಿಲಿಂಡರ್, ಟಿವಿ, ಮೈಕ್ ಸೇರಿದಂತೆ ದಿನನಿತ್ಯದ ಬದುಕಿನಲ್ಲಿ ಬಳಕೆಯಾಗುವ ವಸ್ತುಗಳು ಅಭ್ಯರ್ಥಿಗಳ ಗುರುತುಗಳಾಗಿವೆ.

ಕಾಂಗ್ರೆಸ್ನ ಸಮರ್ಥ್ ಶಾಮನೂರು ಅವರಿಗೆ ‘ಹಸ್ತ’, ಬಿಜೆಪಿ ಹುರಿಯಾಳು ಟಿ.ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ‘ಕಮಲ’ ಹಾಗೂ ಆಮ್ ಆದ್ಮಿ ಪಾರ್ಟಿ (ಎಎಪಿ) ಅಭ್ಯರ್ಥಿ ಕೆ.ಎಸ್. ಶಿವಕುಮಾರಪ್ಪಗೆ ‘ಪೊರಕೆ’ ಚಿಹ್ನೆ ನೀಡಲಾಗಿದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಣದಿಂದ ಹಿಂದೆಸರಿದ ಸಾದಿಕ್ ಪೈಲ್ವಾನ್ ಅವರಿಗೆ ‘ಮೈಕ್’ ಚಿಹ್ನೆ ನೀಡಲಾಗಿದೆ.

ನೋಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ಎಸ್ಡಿಪಿಐನ ಅಪ್ಸರ್ ಕೊಡ್ಲಿಪೇಟೆಗೆ ಕುಕ್ಕರ್, ಇಂಡಿಯನ್ ಪೊಲಿಟಿಕಲ್ ಕಾಂಗ್ರೆಸ್ ಪಾರ್ಟಿಯ ಈರಣ್ಣಗೆ ವಿಜಲ್, ಉತ್ತಮ ಪ್ರಜಾಕೀಯ ಪಕ್ಷದ ಈಶ್ವರಗೆ ಅಂಚೆಪೆಟ್ಟಿಗೆ, ಬ್ಲೂ ಇಂಡಿಯಾ ಪಾರ್ಟಿಯ ಖಾಜಾಮೊಹಿದ್ದೀನ್ ಗುಡಗೇರಿಗೆ ಬ್ಯಾಟ್ಸ್ಮನ್, ಕಂಟ್ರಿ ಸಿಟಿಜನ್ ಪಾರ್ಟಿಯ ಎಂ.ಪಿ. ದಾದಾಖಲಂದರ್ನ ತೆಂಗಿನ ತೋಟದ ಗುರುತು ನೀಡಲಾಗಿದೆ.

ಜನತಾ ಚಳವಳಿ ಭಾರತದ ಜಿ.ಎನ್. ಪ್ರಶಾಂತ್ ಕುಮಾರ್ಗೆ ಬ್ರೀಫ್ ಕೇಸ್, ಯಂಗ್ಸ್ಟಾರ್ ಎಂಪವರ್ಮೆಂಟ್ ಪಾರ್ಟಿಯ ಸಿ.ಎಂ. ಶಾಬಾಜ್ ಖಾನ್ಗೆ ಗ್ಯಾಸ್ ಸಿಲಿಂಡರ್, ನವಭಾರತ ಸೇನಾದ ಎಂ.ಜಿ. ಶ್ರೀಕಾಂತ್ಗೆ ಗಣಕಯಂತ್ರ, ಭಾರತೀಯ ಪ್ರಜೆ ಗಳ ಕಲ್ಯಾಣ ಪಕ್ಷದ ದಲಿತ ಶ್ರೀನಿವಾಸ್ಗೆ ಲ್ಯಾಪ್ಟಾಪ್,ಜನಹಿತ ಪಕ್ಷದ ಸಯ್ಯದ್ ಇಮ್ತಿಯಾಜ್ಗೆ ದೂರದರ್ಶನ ಚಿಹ್ನೆ ಸಿಕ್ಕಿದೆ.

ಪಕ್ಷೇತರ ಅಭ್ಯರ್ಥಿಗಳಾದ ಖಾದರ ಆದಿಲ್ ಬಾಷಗೆ ವಜ್ರ, ಗೌತಮ್ ಜೈನ್ಗೆ ಬ್ಯಾಟು, ಟಿ.ಜಬೀನಗೆ ಕಲ್ಲಂಗಡಿ, ಮನ್ಸೂರ್ ಅಲಿ ಯು.ಎಂಗೆ ಬೆಂಕಿ ಪೊಟ್ಟಣ, ಕೆ.ಎಚ್. ಮಹಬೂಬ್ಗೆ ಅಲ ಮೇರ, ಅಖಂಡ ಸಿ.ಎಂ. ಮಂಜುನಾಥಯ್ಯಸ್ವಾಮಿಗೆ ಬ್ಯಾಟರಿ ಟಾರ್ಚ್, ಬಿ.ರಾಜಶೇಖರ್ಗೆ ತುತ್ತೂರಿ, ಸಾಜಿದ್ಗೆ ಕ್ಯಾಮೆರಾ, ಎಚ್. ಸುಬಾನ್ ಸಾಬ್ಗೆ ಮಿಕ್ಸಿ, ಸೈಯದ್ ಚಾಂದ್ ಪೀರ್ಗೆ ಕರಣೆ, ಡಿ. ಸೈಯದ್ ರಿಯಾಜ್ಗೆ ದೂರವಾಣಿ ಚಿಹ್ನೆ ಕೊಡಲಾಗಿದೆೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-43-1942810586

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.