ದಾವಣಗೆರೆ: ನಗರದ ತರಳಬಾಳು ಬಡಾವಣೆಯ 15ನೇ ಕ್ರಾಸ್ನಲ್ಲಿರುವ ಉದ್ಯಾನವು ನಿರ್ವಹಣೆ ಸಮಸ್ಯೆಯಿಂದ ನಲುಗುತ್ತಿದೆ. ತಾಜ್ಯ ವಿಲೇವಾರಿ, ಪಾದಚಾರಿ ಮಾರ್ಗದ ಸ್ವಚ್ಛತೆ, ಗಿಡ ಮತ್ತು ಮರಗಳಿಗೆ ನೀರುಣಿಸುವುದು ಸೇರಿದಂತೆ ಯಾವುದೇ ಕೆಲಸಗಳು ಇಲ್ಲಿ ಆಗುತ್ತಿಲ್ಲ.

ಉದ್ಯಾನದಲ್ಲಿ ಜಿಮ್ ಪರಿಕರಗಳಿದ್ದು, ಕೆಲವು ಹಾಳಾಗಿವೆ. ಇದೇ ಸ್ಥಳದಲ್ಲಿ ಸತ್ತು ಬಿದ್ದ ಹೆಗ್ಗಣ ವಿಲೇವಾರಿ ಮಾಡದೇ ದುರ್ವಾಸನೆ ಹರಿಡಿದೆ. ಉದ್ಯಾನದಲ್ಲಿ ಪ್ಲಾಸ್ಟಿಕ್, ಬಟ್ಟೆ, ತಿನಿಸುಗಳನ್ನು ತಿಂದ ವಸ್ತುಗಳು ಎಲ್ಲೆಂದರಲ್ಲಿ ರಾಶಿ ಬಿದ್ದಿವೆ. ಬಡಾವಣೆಯ ನಿವಾಸಿಗಳು ನಿತ್ಯ ಮೂಗು ಮುಚ್ಚಿಕೊಂಡು ವಾಯುವಿಹಾರ ಮಾಡಬೇಕಾದ ಪರಿಸ್ಥಿತಿ ಇಲ್ಲಿದೆ.

ಹಲವು ಬಾರಿ ಮಹಾನಗರ ಪಾಲಿಕೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸ್ವಚ್ಛತೆ ಹಾಗೂ ನಿರ್ವಹಣೆಗೆ ಸಿಬ್ಬಂದಿ ನೇಮಕ ಮಾಡಿಲ್ಲ. ಬಡಾವಣೆಯಲ್ಲಿ ಉದ್ಯಾನವಿದ್ದರೂ ಪ್ರಯೋಜನ ಇಲ್ಲದಂತೆ ಆಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-43-1192050132

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.