ದಾವಣಗೆರೆ: ಸಾಮಾಜಿಕ ಜಾಲತಾಣದಲ್ಲಿ ಪರಿಚಿತಳಾದ ಗೆಳತಿ ನೀಡಿದ ಸಲಹೆ ನಂಬಿದ ಉಪನ್ಯಾಸಕರೊಬ್ಬರು ಆನ್ಲೈನ್ ಮೂಲಕ ₹ 77 ಲಕ್ಷ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ.

ಇಲ್ಲಿನ ಬಾಲಾಜಿ ನಗರದ ಉಪನ್ಯಾಸಕ ಮೋಸ ಹೋದವರು. ಈ ಸಂಬಂಧ ಅವರು ಮಧುಶ್ರೀ ಎಂಬುವರ ವಿರುದ್ಧ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ಫೇಸ್ಬುಕ್ನಲ್ಲಿ ಪರಿಚಿತಳಾದ ಮಧುಶ್ರೀ, ಉಪನ್ಯಾಸಕರಿಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಲಹೆ ನೀಡಿದ್ದಾರೆ. ಇದನ್ನು ನಂಬಿದ ಅವರು ಆರಂಭದಲ್ಲಿ ₹ 20,000 ಹೂಡಿಕೆ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ₹ 22,800 ಅವರ ಬ್ಯಾಂಕ್ ಖಾತೆಗೆ ಜಮೆ ಆಗಿದೆ. ಹೆಚ್ಚಿನ ಲಾಭಾಂಶ ನೋಡಿದ ಅವರು ಅಧಿಕ ಹಣ ಹೂಡಿಕೆ ಮಾಡಿದ್ದಾರೆ.

ವಾಟ್ಸ್ಆ್ಯಪ್ ಮೂಲಕ ಸಂಪರ್ಕ ಸಾಧಿಸಿದ ವಂಚಕರು ಗ್ರೂಪ್ವೊಂದನ್ನು ಸೃಷ್ಟಿಸಿ ಹೆಚ್ಚಿನ ಹಣ ಹೂಡಿಕೆಗೆ ಸಲಹೆ ನೀಡಿದ್ದಾರೆ. ಹಂತಹಂತವಾಗಿ ₹ 77.06 ಲಕ್ಷವನ್ನು ಉಪನ್ಯಾಸಕ ಹೂಡಿಕೆ ಮಾಡಿದ್ದಾರೆ. ಅವರ ಷೇರು ಮಾರುಕಟ್ಟೆಯ ಖಾತೆಯಲ್ಲಿ ₹1.56 ಕೋಟಿ ಇರುವುದಾಗಿ ತೋರಿಸಿದೆ. ಇದನ್ನು ನಗದೀಕರಿಸಲು ಮುಂದಾದಾಗ ಹಣ ಬಂದಿಲ್ಲ. ಹೂಡಿಕೆ ನೀಡಿದ ಸಲಹೆಗಾರರು ಕೂಡ ದೂರವಾಣಿ ಸಂಪರ್ಕಕ್ಕೆ ಸಿಕ್ಕಿಲ್ಲ. ಅನುಮಾನಗೊಂಡ ಅವರು ಸೈಬರ್ ಸಹಾಯವಾಣಿ ಸಂಪರ್ಕಿಸಿದಾಗ ಮೋಸ ಹೋಗಿದ್ದು ಖಚಿತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-43-1776376007

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.