ದಾವಣಗೆರೆ: ‘ಕೃತಕ ಬುದ್ಧಿಮತ್ತೆ (ಎ.ಐ), ಸೆಮಿ ಕಂಡಕ್ಟರ್, ಹಸಿರು ಇಂಧನ, ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೇಶ ಅಸಾಧಾರಣ ಬದಲಾವಣೆಗಳಿಗೆ ಸಾಕ್ಷಿ ಆಗುತ್ತಿದೆ. ದೇಶ ಭವಿಷ್ಯದಲ್ಲಿ ಜಗತ್ತಿಗೆ ದಾರಿ ತೋರಲಿದೆ’ ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅಭಿಪ್ರಾಯಪಟ್ಟರು.

ಇಲ್ಲಿನ ವಿಶ್ವವಿದ್ಯಾಲಯ ಬಿಡಿಟಿ ಕಾಲೇಜಿಗೆ 75 ವರ್ಷ ತುಂಬಿದ ಅಂಗವಾಗಿ ಆಯೋಜಿಸಿರುವ ಅಮೃತ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಶುಕ್ರವಾರ ಮಾತನಾಡಿದರು.

‘2047ರ ವೇಳೆಗೆ ಅಭಿವೃದ್ಧಿ ರಾಷ್ಟ್ರಗಳ ಸಾಲಿಗೆ ಸೇರುವ ಆಶಯ ಈಡೇರಲು ಯುವ ಎಂಜಿನಿಯರ್ಗಳು, ವಿಜ್ಞಾನಿಗಳು, ಸಂಶೋಧಕರು ಮತ್ತು ಉದ್ಯಮಿಗಳ ಕೊಡುಗೆ ಅಗತ್ಯ. ಭಾರತವನ್ನು ತಾಂತ್ರಿಕವಾಗಿ ಸ್ವಾವಲಂಬಿ ಆಗಿಸಲು ಯುವಜನರು ಸಕ್ರಿಯವಾಗಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.

‘ಮೌಲ್ಯಾಧಾರಿತ ನಾಯಕರು, ನವೋದ್ಯಮಿಗಳ ರೂಪಿಸುವಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಇದೆ. ದೇಶ ತಾಂತ್ರಿಕ ಪ್ರಗತಿ ಮತ್ತು ಜಾಗತಿಕ ಜ್ಞಾನದ ನಾಯಕತ್ವದತ್ತ ಮುನ್ನಡೆಸುವ ನಿಟ್ಬಿನಲ್ಲಿ ಚಿಂತನೆ ಅಗತ್ಯ’ ಎಂದು ಹೇಳಿದರು.

‘ಆಧುನಿಕ ಶಿಕ್ಷಣದ ಜೊತೆಗೆ ಅಧ್ಯಾತ್ಮ ಬೋಧಿಸಿದರೆ ಪರಿಪೂರ್ಣ ವ್ಯಕ್ತಿತ್ವ ನಿರ್ಮಿಸಲು ಸಾಧ್ಯ, ವಿಜ್ಞಾನ ದೊಂದಿಗೆ ಆಧ್ಯಾತ್ಮಿಕ ಶಿಕ್ಷಣ ನೀಡಲು ವಿಶ್ವವಿದ್ಯಾಲಯಗಳು ಗಮನಹರಿಸಬೇಕು’ ಎಂದು ಆದಿಚುಂಚನಗಿರಿ ಕ್ಷೇತ್ರದ ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-51-1794770151

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.