ದಾವಣಗೆರೆ: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಿಂದ ದುಬೈನಲ್ಲಿ ಸಿಲುಕಿದ್ದ ಜಗಳೂರಿನ 16 ಜನ ಸೇರಿದಂತೆ 48 ಕನ್ನಡಿಗರು ಗುರುವಾರ ವಿಶೇಷ ವಿಮಾನದಲ್ಲಿ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿದರು.

ಬುಧವಾರ ರಾತ್ರಿ 9.45 ಕ್ಕೆ ಶಾರ್ಜಾದಿಂದ ಹೊರಟ ‘ಏರ್ ಅರೇಬಿಯಾ’ ವಿಮಾನ ಗುರುವಾರ ನಸುಕಿನ 3.30ಕ್ಕೆ ಕೇರಳದ ಕೊಚ್ಚಿಗೆ ಬಂದಿಳಿಯಿತು. ಅಲ್ಲಿಂದ ‘ಏರ್ ಇಂಡಿಯಾ’ ವಿಮಾನದ ಮೂಲಕ ಬೆಂಗಳೂರಿಗೆ ಬಂದರು.
.ಹಗಲು ಸಾಮಾನ್ಯ, ರಾತ್ರಿ ನಂತರ ದಾಳಿ: ದುಬೈ ಚಿತ್ರಣ ಬಿಚ್ಚಿಟ್ಟ ಕನ್ನಡಿಗ.
ಜಗಳೂರು ತಾಲ್ಲೂಕಿನ ತೋರಣಗಟ್ಟ ಗ್ರಾಮದ 16 ಜನ ಸೇರಿದಂತೆ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯ 50 ಜನರು ಫೆ.23ರಂದು ದುಬೈ ಪ್ರವಾಸ ಕೈಗೊಂಡಿದ್ದರು. ಐದು ದಿನಗಳ ಪ್ರವಾಸ ಮುಗಿಸಿ ಫೆ.28ರಂದು ರಾತ್ರಿ ಅಲ್ಲಿಂದ ಹೊರಡುವಾಗ ಏಕಾಏಕಿ ವಿಮಾನ ಸಂಚಾರ ರದ್ಧಾಗಿತ್ತು.

ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿಗರ ವಾಸ್ತವ್ಯಕ್ಕೆ ದುಬೈ ಕನ್ನಡಿಗರು ವ್ಯವಸ್ಥೆ ಮಾಡಿದ್ದರು. ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಪ್ರವಾಸಿಗರು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿದ್ದರು.

ಬೆಳಿಗ್ಗೆ 6ಕ್ಕೆ ಬೆಂಗಳೂರಿಗೆ ಬಂದಿಳಿದ ಪ್ರವಾಸಿಗರನ್ನು ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಹಾಗೂ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಬರಮಾಡಿಕೊಂಡರು. ತಾಯ್ನಾಡಿಗೆ ಮರಳಲು ಸಹಕರಿಸಿದ ಸರ್ಕಾರಕ್ಕೆ ಪ್ರವಾಸಿಗರು ಕೃತಜ್ಞತೆ ಸಲ್ಲಿಸಿದರು.
.ದುಬೈ ಏರ್ಪೋರ್ಟ್ ಮೇಲೆ ಇರಾನ್ ದಾಳಿ: ಭೀತಿಯಲ್ಲಿ ರಾತ್ರಿ ಕಳೆದ ಜನ.
‘ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ದುಬೈ ಪ್ರವಾಸ ಕೈಗೊಂಡಿದ್ದೆವು. ಇರಾನ್ ಹಾಗೂ ಇಸ್ರೇಲ್, ಅಮೆರಿಕ ನಡುವೆ ಯುದ್ಧ ಆರಂಭವಾದ ಪರಿಣಾಮ ಮರಳಿ ಬರಲು ತೊಂದರೆ ಆಯಿತು. ದುಬೈ ಕನ್ನಡಿಗರು ಸೇರಿದಂತೆ ಸರ್ಕಾರದ ಪ್ರತಿನಿಧಿಗಳು ಧೈರ್ಯ ತುಂಬಿ ಸಹಕಾರ ನೀಡಿದರು’ ಎಂದು ಜಗಳೂರಿನ ಪ್ರೊ.ಚಂದ್ರಶೇಖರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಪ್ರವಾಸಕ್ಕೆ ಬಂದಿದ್ದ ಬಳ್ಳಾರಿಯ ಅನ್ನಪೂರ್ಣ ಎಂಬುವರು ಅನಾರೋಗ್ಯದಿಂದ ದುಬೈ ಆಸ್ಪತ್ರೆಗೆ ದಾಖಲಾದರು. ಅನ್ನಪೂರ್ಣ ಹಾಗೂ ಅವರ ಪತಿ ದುಬೈನಲ್ಲಿಯೇ ಉಳಿಯುವುದು ಅನಿವಾರ್ಯವಾಯಿತು. ಅವರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕಳುಹಿಸಿಕೊಡುವುದಾಗಿ ದುಬೈ ಕನ್ನಡಿಗರು ಭರವಸೆ ನೀಡಿದ್ದಾರೆ’ ಎಂದು ಚಂದ್ರಶೇಖರ್ ಮಾಹಿತಿ ನೀಡಿದ್ದಾರೆ.
.ದುಬೈ ಸೇರಿ ಗಲ್ಫ್ ದೇಶಗಳಲ್ಲಿನ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ: ರಾಯಭಾರ ಕಚೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.