ತ್ಯಾವಣಿಗೆ: ಗ್ರಾಮದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಾರ್ಚ್ 30ರಂದು ಸೋಮವಾರ ಮಹಾರಥೋತ್ಸವ ಜರುಗಲಿದೆ.

ಮುಂಜಾನೆ ಗಂಗಾಪೂಜೆಯೊಂದಿಗೆ ಸ್ವಾಮಿಗೆ ರುದ್ರಾಭಿಷೇಕ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಗ್ರಾಮದ ಕೆರೆ ಮುಂಭಾಗದಿಂದ ಗುಗ್ಗಳ ಆರಂಭವಾಯಿತು. ಹರಕೆ ಹೊತ್ತ ಭಕ್ತರು ಉಪವಾಸದಿಂದ ಗುಗ್ಗಳದ ಕುಂಭ ಹೊತ್ತು ದೇವಸ್ಥಾನದ ಸಮೀಪ ಸಾಗಿದರು.

ಗುಗ್ಗಳ ಸಾಗುತ್ತಿದ್ದಂತೆ ಭಕ್ತರು ಜಯಘೋಷ ಕೂಗಿದರು. ನಂತರ ಗುಗ್ಗಳದ ಕುಂಭಗಳನ್ನು ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ್ದ ಕಬ್ಬಿಣದ ಕಂಬಗಳ ಮೇಲೆ ಇರಿಸಲಾಯಿತು. ನಂತರ ಮಹಿಳೆಯರು, ಪುರುಷರು ಗುಗ್ಗಳದ ಕೆಳಗೆ ಸಾಗಿ ಹರಕೆ ಸಲ್ಲಿಸಿದರು.

ಗುಗ್ಗಳ ಸಾಗುವ ಮಾರ್ಗವನ್ನು ತಳಿರು ತೋರಣ ಕಟ್ಟಿ ಸಿಂಗರಿಸಲಾಗಿತ್ತು. ವೀರಗಾಸೆ ಕುಣಿತ ಮಹೋತ್ಸವಕ್ಕೆ ಮೆರುಗು ನೀಡಿತು.

ಗುಗ್ಗಳ ನಂತರ ವೀರಭದ್ರೇಶ್ವರ ಸ್ವಾಮಿಯ ಸಣ್ಣ ರಥೋತ್ಸವ ಜರುಗಿತು. ಭಕ್ತರು ಗ್ರಾಮದ ಆಂಜನೇಯ ಸ್ವಾಮಿ ಬೀರಲಿಂಗೇಶ್ವರ ಸ್ವಾಮಿಯ ಉತ್ಸವ ಮೂರ್ತಿಗಳನ್ನು ಹೊತ್ತು ರಥೋತ್ಸವದ ಜೊತೆ ಸಾಗಿದರು.

ನಂತರ ವೀರಭದ್ರೇಶ್ವರ ಸ್ವಾಮಿ ಹಾಗೂ ಕಾಳಿಕಾ ದೇವಿಗೂ ಕಲ್ಯಾಣಧಾರಣೆ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-43-1331239699

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.