ದಾವಣಗೆರೆ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ಪೂರ್ವ ತಯಾರಿಯ ಭಾಗವಾಗಿ ಜಿಲ್ಲೆಯ ಶೇ 91.66 ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು, ತೆಗೆದುಹಾಕಲು ಅಥವಾ ಪರಿಷ್ಕರಣೆಗೆ ಜೂನ್ 16ರವರೆಗೆ ಕಾಲಾವಕಾಶವಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದರು.

‘ಭಾರತೀಯ ಚುನಾವಣಾ ಆಯೋಗದ ಆದೇಶದ ಮೇರೆಗೆ ಈ ಪ್ರಕ್ರಿಯೆ ನಡೆಯುತ್ತಿದೆ. ಜೂನ್ 17ರ ಬಳಿಕ ಮತದಾರರ ಪಟ್ಟಿಯ ಪರಿಷ್ಕರಣೆಗೆ ಅವಕಾಶವಿಲ್ಲ. ಆ ನಂತರ ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

3 ಬಾರಿ ಬಿಎಲ್ಒ ಭೇಟಿ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಜೂನ್ 26ರಿಂದ 29ರವರೆಗೆ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುತ್ತದೆ. ಅಗತ್ಯ ಸಿದ್ಧತೆ ಮಾಡಿಕೊಂಡು ಮತಗಟ್ಟೆ ಅಧಿಕಾರಿಗಳು (ಬಿಎಲ್ಒ) ಮತದಾರರ ಮನೆಬಾಗಿಲಿಗೆ ತೆರಳಲಿದ್ದಾರೆ. ಜೂನ್ 30ರಿಂದ ಜುಲೈ 29ರವರೆಗೆ ಮತಗಟ್ಟೆ ಅಧಿಕಾರಿಗಳು ಮೂರು ಬಾರಿ ಮತದಾರರನ್ನು ಭೇಟಿಯಾಗಲಿದ್ದಾರೆ. ಮತದಾರರ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ದೃಢಪಡಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಆಗಸ್ಟ್ 5 ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಆಕ್ಷೇಪ ಸಲ್ಲಿಸಲು ಸೆ.4 ರವರೆಗೆ ಅವಕಾಶವಿದೆ. ತಕರಾರು, ಆಕ್ಷೇಪಗಳಿಗೆ ಸಂಬಂಧಿಸಿದ ವಿಚಾರಣೆಗಳನ್ನು ನಡೆಸಲು ಅ.3ರವರೆಗೆ ಕಾಲಾವಕಾಶವಿದೆ. ಕ್ಷೇತ್ರ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ. ಅಂತಿಮ ಮತದಾರರ ಪಟ್ಟಿ ಅ.7 ರಂದು ಪ್ರಕಟವಾಗಲಿದೆ’ ಎಂದು ವಿವರಿಸಿದರು.

ಅಗತ್ಯ ದಾಖಲೆ ಒದಗಿಸಿ: ‘ಎಸ್ಐಆರ್ ಪ್ರಕ್ರಿಯೆ ಇದೇ ಮೊದಲು ನಡೆಯುತ್ತಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆಗೆ ಇದೊಂದು ಸುಲಭ ವಿಧಾನವಾಗಿದೆ. 1987ರ ಜುಲೈ 1ಕ್ಕಿಂತ ಮೊದಲು ಜನಿಸಿದವರು ಜನ್ಮ ದಿನಾಂಕ, ಸ್ಥಳವನ್ನು ಗುರುತಿಸುವ 12 ದಾಖಲೆಗಳಲ್ಲಿ ಒಂದನ್ನು ನೀಡಬೇಕು. 1987–2004 ರ ಡಿ.2 ರ ವರೆಗೆ ಜನಿಸಿದವರು ಜನ್ಮ ದಿನಾಂಕ, ಸ್ಥಳವನ್ನು ದೃಢೀಕರಿಸುವ ದಾಖಲೆ, ತಂದೆ ಅಥವಾ ತಾಯಿ ಹುಟ್ಟಿದ ದಿನಾಂಕ ಮತ್ತು ಸ್ಥಳವನ್ನು ದೃಢಪಡಿಸುವ ದಾಖಲೆ ಒದಗಿಸಬೇಕು’ ಎಂದರು.

‘2004ರ ಡಿ.2 ರ ನಂತರ ಜನಿಸಿದವರು ಜನ್ಮ ದಿನಾಂಕ, ಸ್ಥಳ ದೃಢಪಡಿಸುವ ದಾಖಲೆ, ತಂದೆ ಹುಟ್ಟಿದ ದಿನಾಂಕ, ಸ್ಥಳ ದೃಢಪಡಿಸುವ ದಾಖಲೆ, ತಾಯಿ ಹುಟ್ಟಿದ ದಿನಾಂಕ, ಸ್ಥಳ ದೃಢಪಡಿಸುವ ದಾಖಲೆ, ಪಾಸ್ಪೋರ್ಟ್ ಮತ್ತು ವೀಸಾ ದಾಖಲೆ ನೀಡಬೇಕು. ಭಾರತದ ಹೊರಗೆ ಜನಿಸಿದವರು ನೋಂದಣಿ ದಾಖಲೆ ಅಥವಾ ಪೌರತ್ವ ನೋಂದಣಿ ಪ್ರಮಾಣ ಪತ್ರ ನೀಡಬೇಕು’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-43-225256096

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.