ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಪಾಲಿಕೆ ಫಲಿತಾಂಶ ಅತಂತ್ರ: ಯಾರಿಗೆ ಸಿಗಲಿದೆ ಅಧಿಕಾರ?

Last Updated 14 ನವೆಂಬರ್ 2019, 7:14 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದುಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿಗೆ17 ಸ್ಥಾನ ದೊರೆತದ್ದು , ಜೆಡಿಎಸ್‌ 1 ಸ್ಥಾನದಲ್ಲಿ ಜಯಗಳಿಸಿದೆ.5 ಸ್ಥಾನಗಳು ಪಕ್ಷೇತರರ ಪಾಲಾಗಿದ್ದು ಪಾಲಿಕೆಯಲ್ಲಿಅತಂತ್ರ ಸ್ಥಿತಿ ನಿರ್ಮಾಣವಾಗಿದೆ.

ಯಾರಿಗೆ ಎಷ್ಟು ಸ್ಥಾನ?

ಪಕ್ಷ ಸ್ಥಾನ
ಕಾಂಗ್ರೆಸ್ 22
ಬಿಜೆಪಿ 17
ಜೆಡಿಎಸ್ 1
ಪಕ್ಷೇತರರು 5
ಶಾಸಕರು (ಬಿಜೆಪಿ 1, ಕಾಂಗ್ರೆಸ್ 2) 3
ಸಂಸದರು (ಬಿಜೆಪಿ) 1
ಒಟ್ಟು 49

ಮೇಯರ್‌ ಆಯ್ಕೆ ಮಾಡುವಾಗ ಮೂವರು ಶಾಸಕರ ಹಾಗೂ ಒಬ್ಬ ಸಂಸದರ ಮತ ಸೇರಿ 49 ಮತಗಳಾಗಲಿದ್ದು, 25 ಮತಗಳು ಲಭಿಸಿದ ಪಕ್ಷಕ್ಕೆ ಮೇಯರ್ ಪಟ್ಟ ಸಿಗಲಿದೆ. ಬಿಜೆಪಿಯ ಒಬ್ಬರು ಶಾಸಕರು, ಸಂಸದರ ಮತ ಸೇರಿ ಬಿಜೆಪಿಗೆ ಒಟ್ಟು 19 ಸಂಖ್ಯಾಬಲ ಆಗಲಿದೆ. ಇಬ್ಬರು ಶಾಸಕರ ಬಲದೊಂದಿಗೆ ಕಾಂಗ್ರೆಸ್‌ ಸಖ್ಯಾಬಲ 24ಕ್ಕೆ ಏರಲಿದೆ. ಪಕ್ಷೇತರರಾಗಿ ಗೆದ್ದ ಒಬ್ಬ ಬಂಡಾಯ ಅಭ್ಯರ್ಥಿ ಮತ ಸೇರಿದರೆ ಕಾಂಗ್ರೆಸ್‌ನ ಸಂಖ್ಯಾಬಲ 25 ಆಗಲಿದೆ. ಹೀಗಾಗಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ಗೆ ಹೆಚ್ಚಿನ ಅವಕಾಶ ಇದೆ.

45 ಕ್ಷೇತ್ರಗಳಿಗೆ ಒಟ್ಟು208 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 377 ಮತಗಟ್ಟೆಗಳಲ್ಲಿ ಮತದಾನ ನಡೆದಿತ್ತು.

ಹೀಗಿದೆ ಲೆಕ್ಕಾಚಾರ

ದಾವಣಗೆರೆಯ ಒಟ್ಟು ವಾರ್ಡ್‌ಗಳ ಸಂಖ್ಯೆ45. ಈ ಪೈಕಿಕಾಂಗ್ರೆಸ್ 22,ಬಿಜೆಪಿ 17,ಜೆಡಿಎಸ್ 1 ಮತ್ತುಪಕ್ಷೇತರರು 5 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.

ಮೂವರು ಶಾಸಕರ ಹಾಗೂ ಒಬ್ಬ ಸಂಸದರ ಮತ ಸೇರಿಮೇಯರ್‌ ಆಯ್ಕೆಗೆ ಒಟ್ಟು 49 ಮತಗಳಿರಲಿವೆ. ಕಾಂಗ್ರೆಸ್‌ನ ಇಬ್ಬರು ಶಾಸಕರಿದ್ದಾರೆ. ಬಿಜೆಪಿಯಿಂದ ತಲಾ ಒಬ್ಬ ಶಾಸಕರು, ಸಂಸದರು ಇದ್ದಾರೆ.

ಐವರು ಪಕ್ಷೇತರ ಪೈಕಿ ಒಬ್ಬರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡ ಇಬ್ಬರು ಪಕ್ಷೇತರು ಗೆದ್ದಿದ್ದಾರೆ. ಮೇಲ್ನೋಟಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಸಾಧ್ಯತೆಯೇ ಹೆಚ್ಚಿದೆ.

ಗೆದ್ದ ಪತಿ, ಪತ್ನಿ

28ನೇ ವಾರ್ಡ್‌ನಲ್ಲಿಸ್ಪರ್ಧಿಸಿದ್ದ ಜೆ.ಎನ್. ಶ್ರೀನಿವಾಸ ಹಾಗೂ 37ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದ ಶ್ರೀನಿವಾಸ ಅವರ ಪತ್ನಿ ಶ್ವೇತಾ ಜಯಗಳಿಸಿದ್ದಾರೆ. ದಾವಣಗೆರೆ ಪಾಲಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪತಿ, ಪತ್ನಿ ಗೆದ್ದಿದ್ದಾರೆ.

ಜೆ.ಎನ್. ಶ್ರೀನಿವಾಸ ಮತ್ತು ಶ್ವೇತಾ
ಜೆ.ಎನ್. ಶ್ರೀನಿವಾಸ ಮತ್ತು ಶ್ವೇತಾ

ಫಲಿತಾಂಶ ವಿವರ

ಗಣೇಶ್
ಗಣೇಶ್

10ನೇ ವಾರ್ಡ್‌ (ಗಣೇಶಪೇಟೆ): ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಅವರ ಪುತ್ರ ರಾಕೇಶ್‌ ಜಾಧವ್‌ ಅವರು ಗೆಲುವು ಸಾಧಿಸಿದರು. ಬಿಬಿಎಂ ಓದಿರುವ ರಾಕೇಶ್‌ಗೆ 26 ವರ್ಷವಾಗಿದ್ದು, ಅತ್ಯಂತ ಕಿರಿಯ ಸದಸ್ಯರಾಗಿದ್ದಾರೆ.

25ನೇ ವಾರ್ಡ್: ಬಿಜೆಪಿ ಅಭ್ಯರ್ಥಿ ಎಸ್.ಟಿ.ವೀರೇಶ್ ಗೆಲುವು.

ದಾವಣಗೆರೆಯ 25 ನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಎಸ್.ಟಿ.ವೀರೇಶ್ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು
ದಾವಣಗೆರೆಯ 25 ನೇ ವಾರ್ಡ್‌ನಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಎಸ್.ಟಿ.ವೀರೇಶ್ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು

32ನೇ ವಾರ್ಡ್‌: ಬಿಜೆಪಿ ಬಂಡಾಯ ಅಭ್ಯರ್ಥಿ, ಮಾಜಿ ಮೇಯರ್ ಉಮಾ ಪ್ರಕಾಶ್‌ಗೆ ಜಯ.

39ನೇ ವಾರ್ಡ್:ಬಿಜೆಪಿಯ ಗೀತಾ ದಿಳ್ಯಪ್ಪ 901 ಮತಗಳ ಅಂತರದಿಂದ ಗೆದ್ದರು.

40ನೇ ವಾರ್ಡ್‌:ಬಿಜೆಪಿ ಅಭ್ಯರ್ಥಿಯಾದ ಶಾಸಕ ಎಸ್.ಎ. ರವೀಂದ್ರನಾಥ ಅವರ ಪುತ್ರಿ ವೀಣಾ ನಂಜಣ್ಣ ಕಾಂಗ್ರೆಸ್‌ನ ನಾಗರತ್ನಮ್ಮ ವಿರುದ್ಧ 1301 ಮತಗಳ ಅಂತರದಿಂದ ಗೆಲುವು.

ಗೌರಮ್ಮ
ಗೌರಮ್ಮ

42ನೇ ವಾರ್ಡ್‌: ಬಿಜೆಪಿಯ ಅಭ್ಯರ್ಥಿ ಗೌರಮ್ಮ 26 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಉದಯಕುಮಾರ
ಉದಯಕುಮಾರ

45ನೇ ವಾರ್ಡ್‌: ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಉದಯಕುಮಾರ ಪಕ್ಷೇತರರಾಗಿ ಸ್ಪರ್ಧಿಸಿ ಕೇವಲ 4 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ವಾರ್ಡ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡಿತ್ತು. ಕಾಂಗ್ರೆಸ್‌ ಬೆಂಬಲಿತ ಪಕ್ಷೇತರ ಅಭ್ಯರ್ಥಿ ವೆಂಕಟೇಶ 556 ಮತ ಪಡೆದರು. ಸಮೀಪ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ 1563 ಮತಗಳನ್ನು ಪಡೆದರೆ, ಉದಯಕುಮಾರ್ ಅವರು 1567 ಮತಗಳನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT