ದಾವಣಗೆರೆ: ಪ್ರೇಮ ಪ್ರಕರಣ, ದುಶ್ಚಟ, ಮಕ್ಕಳ ಕಳ್ಳಸಾಗಣೆ, ಸಾಮಾಜಿಕ ಜಾಲತಾಣಗಳ ಪ್ರಭಾವ ಸೇರಿದಂತೆ ಮತ್ತಿತರ ಕಾರಣಗಳಿಂದ ರಾಜ್ಯದಲ್ಲಿ ಪ್ರತೀ ವರ್ಷ ನಾಪತ್ತೆಯಾಗುವ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದೆ. ದಿನವೊಂದಕ್ಕೆ ಸರಾಸರಿ ಐವರು ಮಕ್ಕಳು ನಾಪತ್ತೆಯಾಗುತ್ತಿದ್ದಾರೆ ಎಂದು ಈಚೆಗೆ ಬಿಡುಗಡೆಯಾದ ರಾಷ್ಟ್ರೀಯ ಅಪರಾಧಗಳ ಬ್ಯೂರೊ (ಎನ್ಸಿಆರ್ಬಿ) ವರದಿ–2024ರ ದತ್ತಾಂಶಗಳು ಹೇಳುತ್ತವೆ.

2024ರಲ್ಲಿ 18 ವರ್ಷದೊಳಗಿನ 1,879 ಮಕ್ಕಳು ನಾಪತ್ತೆಯಾಗಿದ್ದರು. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2022ರಲ್ಲಿ 1,110 ಹಾಗೂ 2023ರಲ್ಲಿ 1,349 ಮಕ್ಕಳ ನಾಪತ್ತೆ ಪ್ರಕರಣಗಳು ದಾಖಲಾಗಿದ್ದವು.

ನಾಪತ್ತೆಯಾಗುತ್ತಿರುವವರ ಪೈಕಿ ಬಾಲಕಿಯರ ಸಂಖ್ಯೆ ಅಧಿಕ ಎಂಬ ಅಂಶ ಪಾಲಕರಲ್ಲಿ ಆತಂಕ ಮೂಡಿಸಿದೆ. 2024ರಲ್ಲಿ 895 ಬಾಲಕರು ಹಾಗೂ 984 ಬಾಲಕಿಯರು ಕಾಣೆಯಾಗಿದ್ದರು. 2022ರಲ್ಲಿ 542ರಷ್ಟಿದ್ದ ನಾಪತ್ತೆಯಾದ ಬಾಲಕಿಯರ ಸಂಖ್ಯೆ 2023ರಲ್ಲಿ 406ಕ್ಕೆ ಏರಿಕೆಯಾಗಿದೆ. 2024ರಲ್ಲಿ ಅಂಥ ಪ್ರಕರಣಗಳು ಸಾವಿರದ ಸನಿಹಕ್ಕೆ (984) ತಲುಪಿವೆ.

ವಿವಿಧ ಠಾಣೆಗಳಲ್ಲಿ ದಾಖಲಾದ ನಾಪತ್ತೆ ಪ್ರಕರಣಗಳ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. 2024ರಲ್ಲಿ ಹಳೆಯವೂ ಸೇರಿದಂತೆ ಒಟ್ಟು 2,350 ಪ್ರಕರಣಗಳ ಪೈಕಿ 1,799 ಪ್ರಕರಣಗಳಲ್ಲಿ ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. ಆದರೆ, ಮಿಕ್ಕ 551 ಮಕ್ಕಳ ಸುಳಿವು ಸಿಕ್ಕಿಲ್ಲ ಎಂದು ವರದಿ ಉಲ್ಲೇಖಿಸಿದೆ.

ಮಹಿಳೆಯರ ಸಂಖ್ಯೆ ಅಧಿಕ: 2024ರಲ್ಲಿ ರಾಜ್ಯದಲ್ಲಿ ಮಕ್ಕಳೂ ಸೇರಿದಂತೆ ಎಲ್ಲ ವಯೋಮಾನದ ಒಟ್ಟು 24,390 ಜನರು ನಾಪತ್ತೆಯಾಗಿದ್ದಾರೆ. ದಿನವೂ ಸರಾಸರಿ 67 ಜನರು ನಾಪತ್ತೆಯಾಗುತ್ತಿದ್ದಾರೆ ಎಂದು ಅಂಕಿ–ಅಂಶಗಳು ಹೇಳುತ್ತವೆ.

ನಾಪತ್ತೆಯಾದವರ ಪೈಕಿ ಮಹಿಳೆಯರ ಪ್ರಮಾಣವೇ ಶೇ 65ರಷ್ಟಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಕರಣಗಳು ಏರಿಕೆಯ ಹಾದಿಯಲ್ಲಿವೆ. 2022ರಲ್ಲಿ 19,372 ಹಾಗೂ 2023ರಲ್ಲಿ 22,719 ಜನ ನಾಪತ್ತೆಯಾಗಿದ್ದರು. ಈ ಎರಡೂ ವರ್ಷಗಳಲ್ಲೂ ಮಹಿಳೆಯರು ಸಂಖ್ಯೆಯೇ ಅಧಿಕವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.