ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ ಪಿಎಚ್.ಡಿ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇತಿಹಾಸ ವಿಭಾಗಕ್ಕೆ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

‘ಕುಲಪತಿ ಪ್ರೊ.ಬಿ.ಡಿ. ಕುಂಬಾರ ಅವರ ನಿರ್ದೇಶನದಂತೆ ಏಪ್ರಿಲ್ 28ರಂದು ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಸಿ.ಕೆ. ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿದ್ಯಾರ್ಥಿಗಳಿಂದ ಯಾವುದೇ ದೂರು ಬಂದಿರಲಿಲ್ಲ. ಆದರೂ, ಸಂಶಯಗಳಿಗೆ ಎಡೆಮಾಡಿಕೊಡಬಾರದು ಎಂಬ ಉದ್ದೇಶದಿಂದ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮರುಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಹೇಳಿದರು.

‘ವಾಣಿಜ್ಯ ಹಾಗೂ ನಿರ್ವಹಣಾಶಾಸ್ತ್ರ ವಿಭಾಗದ ಪ್ರಶ್ನೆಪತ್ರಿಕೆಯ ಬಹು ಆಯ್ಕೆಯ ಉತ್ತರದ ಮಾದರಿಯ ಬಗ್ಗೆಯ ಯಾವುದೇ ಗೊಂದಲ ಇಲ್ಲ. ಹೀಗಾಗಿ ಈ ವಿಭಾಗಗಳಿಗೆ ಮರುಪರೀಕ್ಷೆ ನಡೆಸುತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

ದಾವಣಗೆರೆ ವಿಶ್ವವಿದ್ಯಾಲಯವು 177 ಪಿಎಚ್.ಡಿ ಸೀಟುಗಳಿಗೆ ಪ್ರವೇಶ ಪರೀಕ್ಷೆಯನ್ನು ಮಾರ್ಚ್ 27ರಂದು ನಡೆಸಿತ್ತು. ಉತ್ತರಗಳ ಆಯ್ಕೆ ಏಕ ಪ್ರಕಾರದಲ್ಲಿದ್ದು, 20 ಪ್ರಶ್ನೆಗಳ ಉತ್ತರಗಳ ಆಯ್ಕೆ ‘ಎ’ ಎಂದಾಗಿದ್ದರೆ, ಇನ್ನೂ 20 ಉತ್ತರಗಳ ಆಯ್ಕೆಯು ‘ಬಿ’ ಎಂದಾಗಿತ್ತು. ‘ಕೀ’ ಉತ್ತರ ಪ್ರಕಟಗೊಂಡ ಬಳಿಕ ಅಕ್ರಮದ ಶಂಕೆ ವ್ಯಕ್ತವಾಗಿತ್ತು.

ಇತಿಹಾಸ ವಿಭಾಗದ ಸಂಯೋಜನಾಧಿಕಾರಿ ಹಾಗೂ ಬಾಹ್ಯ ಪರೀಕ್ಷಾಧಿಕಾರಿಗೆ ವಿಶ್ವವಿದ್ಯಾಲಯ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.