ಬಂದ್‌: ದಾವಣಗೆರೆ ವಿವಿ ಪರೀಕ್ಷೆ ಮುಂದೂಡಿಕೆ

7

ಬಂದ್‌: ದಾವಣಗೆರೆ ವಿವಿ ಪರೀಕ್ಷೆ ಮುಂದೂಡಿಕೆ

Published:
Updated:

ದಾವಣಗೆರೆ: ಭಾರತ್‌ ಬಂದ್‌ ಹಿನ್ನೆಲೆಯಲ್ಲಿ ಜ.8 ಮತ್ತು 9ರಂದು ನಡೆಯುವ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವ (ಪರೀಕ್ಷಾಂಗ) ಡಾ.ಬಸವರಾಜ್ ಬಣಕಾರ ತಿಳಿಸಿದ್ದಾರೆ.

ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ಎಲ್ಲ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯದಲ್ಲಿ ಒಂದು ತಿಂಗಳಿನಿಂದ ಸ್ನಾತಕ ಮತ್ತು ಸ್ನಾತಕೋತ್ತರ ಪರೀಕ್ಷೆಗಳು ನಡೆಯುತ್ತಿವೆ. ಜ.8 ಮತ್ತು 9ರಂದು ಸ್ನಾತಕೋತ್ತರ ಮತ್ತು ಬಿ.ಇಡಿ. ಪರೀಕ್ಷೆಗಳಿದ್ದವು. ಜ.8ರ ಪರೀಕ್ಷೆಗಳು ಜ.10ರಂದು ಹಾಗೂ ಜ.9ರ ಪರೀಕ್ಷೆಗಳು ಜ.10ರಂದು ನಡೆಸಲು ನಿರ್ಧರಿಸಲಾಗಿದೆ. ಸಮಯದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !