ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೇಲರ್‌ ಕಲ್ಯಾಣ ಮಂಡಳಿ ಸ್ಥಾಪಿಸಲು ಆಗ್ರಹ

ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ
Last Updated 25 ಸೆಪ್ಟೆಂಬರ್ 2022, 4:22 IST
ಅಕ್ಷರ ಗಾತ್ರ

ದಾವಣಗೆರೆ: ಟೇಲರ್ ಕಲ್ಯಾಣ ಮಂಡಳಿ ಸ್ಥಾಪಿಸುವ ಮೂಲಕ ಬಡ ಟೇಲರ್‌ಗಳ ಹಿತ ಕಾಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಹೊಲಿಗೆ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಟೇಲರ್‌ಗಳು ಇಲ್ಲಿನ ಜಯದೇವ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು. ಉಪ ವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಹೊಲಿಗೆ ಕೆಲಸದಿಂದ ಬರುವ ಅಲ್ಪಾದಾಯದಲ್ಲೇ ಬದುಕು ಕಟ್ಟಿಕೊಂಡವರ ಸಂಖ್ಯೆ ಬಹಳಷ್ಟಿದೆ. ಬದುಕಿಗಾಗಿ ಕಲಿತಿರುವ ಹೊಲಿಗೆ ಕೆಲಸದಿಂದ ಈಗ ಜೀವನ ನಿರ್ವಹಣೆ ಕಷ್ಟವಾಗಿದೆ. ಆದರೂ ಈವರೆಗೆ ಯಾವುದೇ ಸರ್ಕಾರಗಳು ಹೊಲಿಗೆ ಕೆಲಸಗಾರರಿಗೆ ಕನಿಷ್ಠ ಸೌಲಭ್ಯ ಒದಗಿಸದಿರುವುದು ದುರದೃಷ್ಟಕರ ಎಂದು ಸಂಘದ ರಾಜ್ಯಾಧ್ಯಕ್ಷಕೆ.ಜಿ. ಯಲ್ಲಪ್ಪ ಬೇಸರವ್ಯಕ್ತಪಡಿಸಿದರು.

ಕೋವಿಡ್ ಕಾರಣದಿಂದ ಎರಡು ವರ್ಷಗಳ ಕಾಲ ಅನೇಕ ದರ್ಜಿಗಳು ತೊಂದರೆ ಅನುಭವಿಸಿದ್ದಾರೆ. ಲಾಕ್‍ಡೌನ್‌ನಿಂದ ಉಂಟಾದ ಆರ್ಥಿಕ ಸಂಕಷ್ಟದಿಂದ ಕುಟುಂಬಗಳು ಇನ್ನೂ ಸುಧಾರಿಸಿಕೊಂಡಿಲ್ಲ. ಆಗ ಬೀದಿಗೆ ಬಿದ್ದ ಅನೇಕ ದರ್ಜಿಗಳ ಕುಟುಂಬಗಳಿಗೆ ಸರಿಯಾದ ನೆಲೆ ಇಲ್ಲವಾಗಿದೆ. ದರ್ಜಿಗಳಿಗೆ ಯಾವುದೇ ವಿಮೆ, ಭವಿಷ್ಯನಿಧಿ ಇಲ್ಲ. ಸೇವಾ ಭದ್ರತೆ ಇಲ್ಲದೆದುಡಿಯುವವರಿಗಾಗಿ ಪಕ್ಕದ ಕೇರಳ ರಾಜ್ಯದಲ್ಲಿ ಅಲ್ಲಿನ ಸರ್ಕಾರ ಅನೇಕ ವರ್ಷಗಳ ಹಿಂದೆಯೇ ಟೇಲರ್ ಕಲ್ಯಾಣ ಮಂಡಳಿ ಸ್ಥಾಪಿಸಿದೆ. ಆದರೆ ಕರ್ನಾಟಕದಲ್ಲಿ ಅಂತಹ ಯಾವುದೇ ಕೆಲಸವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ನಾರಾಯಣರಾವ್(ಬಾಬುರಾವ್), ಗೌರವಾಧ್ಯಕ್ಷ ಆನಂದ್ ಗುಜ್ಜಾರ್, ನಗರಾಧ್ಯಕ್ಷ ಚಂದ್ರಶೇಖರ ಕೆ.ಗಣಪಾ, ಮುಖಂಡರಾದ ಶ್ರೀಕಾಂತ್ ಪಟಿಗೆ, ಗಿರೀಶ ನವಲೆ, ಕೆ.ಪಿ.ರಂಗನಾಥ, ಮನೋಹರ್ ಪಟ್ಟಣ್, ರಮೇಶ ಜಿ.ಬಾಂಬೋರೆ, ನಿರ್ಮಲಮ್ಮ, ಶೋಭಾ ಮತ್ತಿತರರುಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT