ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಬೇಡಿಕೆ ಈಡೇರಿಕೆಗೆ ಒತ್ತಾಯ: ನಾಯಕ ಸಮಾಜದ ಪ್ರತಿಭಟನೆ

Last Updated 26 ಮಾರ್ಚ್ 2023, 7:34 IST
ಅಕ್ಷರ ಗಾತ್ರ

ದಾವಣಗೆರೆ: ನಾಯಕ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಶನಿವಾರ ನಗರದ ರಾಜವೀರ ಮದಕರಿ ನಾಯಕ ವೃತ್ತದಲ್ಲಿ ನಾಯಕ ಸಮುದಾಯದವರು ಪ್ರತಿಭಟನೆ ನಡೆಸಿದರು.

ಕಿವಿಯಲ್ಲಿ ಕಮಲದ ಹೂವನ್ನು ಇಟ್ಟುಕೊಂಡು ‘ಬೇಡರ ಕಿವಿಯಲ್ಲಿ ಕಮಲ’ ಎಂದು ವಿನೂತನವಾಗಿ ಪ್ರತಿಭಟನೆ ನಡೆಸಿದರು.

‘ಅಯ್ಯೋಯ್ಯೋ ಅನ್ಯಾಯ, ಥೀಮ್ ಪಾರ್ಕ್ ಎಲ್ರಯ್ಯ, ಅಯ್ಯೋಯ್ಯೋ ಅನ್ಯಾಯ, ಡಿ.ಸಿ.ಎಂ. ಎಲ್ರಯ್ಯ’ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣಾ ಮುನ್ನ ಚಿತ್ರದುರ್ಗಕ್ಕೆ ಬಂದಿದ್ದ ಕೇಂದ್ರ ಗೃಹ ಸಚಿವ ಅಮಿತ್ ಷಾ ₹ 100 ಕೋಟಿ ವೆಚ್ಚದಲ್ಲಿ ಚಿತ್ರದುರ್ಗದಲ್ಲಿ ಥೀಮ್ ಪಾರ್ಕ್ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಕಳೆದ ವಿಧಾನಸಭಾ ಚುನಾವಣೆಯ ವೇಳೆ ನಾಯಕ ಸಮಾಜದ ಮುಖಂಡ ಬಿ. ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಯಾವುದೇ ಭರವಸೆ ಈಡೇರಿಸಲಿಲ್ಲ. ನಾಯಕ ಸಮಾಜದ ಯಾವುದೇ ಬೇಡಿಕೆಗೆ ಬಿಜೆಪಿ ಸ್ಪಂದಿಸಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದರು.

ಮುಂದೆಯೂ ಇದೇ ರೀತಿ ಭರವಸೆ ನೀಡಿ ಮತ್ತೆ ಕಿವಿಯಲ್ಲಿ ಹೂ ಇಡಬಹುದು ಎಂದು ನಾಯಕ ಸಮಾಜವನ್ನು ಎಂದು ಎಚ್ಚರಿಸುವುದಕ್ಕಾಗಿ ಪ್ರತಿಭಟನೆ ನಡೆಸಲಾಗಿದೆ ಎಂದು ಮುಖಂಡ ಪಿ.ಬಿ.ಅಂಜುಕುಮಾರ್ ತಿಳಿಸಿದರು.

ಬೇಡರಪಡೆ ರಾಜ್ಯ ಅಧ್ಯಕ್ಷ ಟಿ.ಎಸ್. ಕರಿಯಪ್ಪ, ನಾಯಕ ಸಮಾಜದ ಮುಖಂಡರಾದ ಬಿ. ವೀರಣ್ಣ, ಕೆ.ಎಂ. ಚನ್ನಬಸಪ್ಪ, ಆರ್.ದೇವೇಂದ್ರಪ್ಪ, ಕೆ.ಎಂ. ಚನ್ನಬಸಪ್ಪ, ದೇವರಾಜ ಕಾಟೇಹಳ್ಳಿ, ರಾಜು ಮದಕರಿ,
ಪಿ.ಅಜ್ಜಯ್ಯ, ಪ್ರವೀಣಕುಮಾರ್ ನಾಯಕ, ಆಂಜನೇಯ, ಗುರುರಾಜ್ ಎನ್. ಉಮೇಶ ಮದಕರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT