ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಇದ್ದಲ್ಲೇ ಲಸಿಕೆ ನೀಡಲು ಆಗ್ರಹ

Last Updated 21 ಅಕ್ಟೋಬರ್ 2022, 6:48 IST
ಅಕ್ಷರ ಗಾತ್ರ

ದಾವಣಗೆರೆ: ಜಾನುವಾರುಗಳಲ್ಲಿ ಚರ್ಮಗಂಟು ರೋಗ ತೀವ್ರವಾಗಿ ಉಲ್ಬಣಗೊಳ್ಳುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಜಾನುವಾರುಗಳು ಇದ್ದಲ್ಲಿಗೇ ಹೋಗಿ ರೋಗ ನಿರೋಧಕ ಲಸಿಕೆ ನೀಡಬೇಕು ಎಂದು ರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು (ಹುಚ್ಚವ್ವನಹಳ್ಳಿ ಬಣ) ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್‌ ಸುಂಕದ ಅವರಿಗೆ ಮನವಿ ಸಲ್ಲಿಸಿದೆ.

ಸರ್ಕಾರದಿಂದ ಲಸಿಕೆ ಬಂದಿಲ್ಲ. ಖಾಸಗಿಯಾಗಿ ಖರೀದಿಸಿ ತನ್ನಿ ಎಂದು ರೈತರಿಗೆ ಅಧಿಕಾರಿಗಳು ಸೂಚಿಸುತ್ತಿದ್ದಾರೆ. ಚರ್ಮಗಂಟು ರೋಗ ಬಂದಿದೆ ಎಂದರೆ ಜಾನುವರನ್ನು ಆಸ್ಪತ್ರೆಗೆ ತನ್ನಿ ಎಂದು ಹೇಳುತ್ತಾರೆ. ರೋಗ ಬಂದ ಜಾನುವಾರುಗಳಿಗೆ ಚಿಕಿತ್ಸೆಯನ್ನೂ ಜಾನುವರು ಇದ್ದಲ್ಲಿಗೇ ಹೋಗಿ ನೀಡಬೇಕು. ಬೇರೆ ಜಾನುವಾರುಗಳಿಗೆ ಲಸಿಕೆಯನ್ನು ಕೂಡ ಅಲ್ಲೇ ಹೋಗಿ ನೀಡಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಆಗ್ರಹಿಸಿದರು.

ತಾಲ್ಲೂಕಿನ ಕೆಲವು ಹಾಲಿನ ಡೇರಿಗಳಲ್ಲಿ ಹಾಲು ವಾಪಸ್‌ ಕಳುಹಿಸಲಾಗುತ್ತಿದೆ. ರೈತರು ಹಾಲನ್ನು ತಿಪ್ಪೆಗೆ ಹಾಕಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಕಾರರು ತಿಳಿಸಿದರು. ಯಾವುದೇ ಹಾಲನ್ನು ನಿಷೇದಿಸುವ ಪತ್ರವನ್ನು ಬರೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಎಲ್ಲ ಜಾನುವರುಗಳಿಗೆ ಲಸಿಕೆ ನೀಡಬೇಕು. ಚರ್ಮ ಗಂಟು ರೋಗದಿಂದ ಸತ್ತ ಜಾನುವಾರಗಳ ಅಂತ್ಯ ಸಂಸ್ಕಾರಕ್ಕೆ ₹ 5, 000 ನೀಡಬೇಕು. ಪಶು ಆಸ್ಪತ್ರೆಗಳಲ್ಲಿ ಪಶು ವೈದ್ಯರು ಇರುವ ಹಾಗೆ ನೋಡಿಕೊಳ್ಳಬೇಕು. ರೈತರಲ್ಲಿ ಜಾಗೃತಿ ಮೂಡಿಸಿ ಆತ್ಮಸ್ಟೈರ್ಯವನ್ನು ಹೆಚ್ಚಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.


ನಿರ್ಥಡಿ ತಿಪ್ಪೇಶ್, ಆಲೂರು ಪರುಶುರಾಮ್, ಹುಚ್ಚನಹಳ್ಳಿ ಪ್ರಕಾಶ್, ಹೂವಿನಮಡು ನಾಗರಾಜ್, ಕುರ್ಕಿ ಹನುಮಂತ, ನಿರ್ಥಡಿ ಭೀಮಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT