ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ದಾವಣಗೆರೆಯಲ್ಲಿ ಬ್ಯಾಂಕ್ ನೌಕರರ ಮುಷ್ಕರ
Last Updated 31 ಜನವರಿ 2020, 12:56 IST
ಅಕ್ಷರ ಗಾತ್ರ

ದಾವಣಗೆರೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್ ಕಾರ್ಮಿಕ ಸಂಘಟನೆಗಳ ಸಂಯುಕ್ತ ವೇದಿಕೆಯಿಂದ 2 ದಿನಗಳ ಅಖಿಲ ಭಾರತ ಬ್ಯಾಂಕ್ ಮುಷ್ಕರದ ಹಿನ್ನೆಯಲ್ಲಿ ದಾವಣಗೆರೆಯ ಮಂಡಿಪೇಟೆಯ ಕೆನರಾ ಬ್ಯಾಂಕ್‌ನ ಆವರಣದಲ್ಲಿ ಪ್ರತಿಭಟನೆ ನಡೆಯಿತು.

2017ರ ನವೆಂಬರ್ 1ರಿಂದ ಜಾರಿಗೆ ಬರಬೇಕಾಗಿದ್ದ ಬ್ಯಾಂಕ್ ಉದ್ಯೋಗಿಗಳ 11ನೇ ದ್ವೀ ಪಕ್ಷೀಯ ವೇತನ ಪರಿಷ್ಕರಣೆಯ ಒಪ್ಪಂದವೂ ಇದುವರೆಗೂ ಜಾರಿಗೆ ಬಂದಿಲ್ಲ. ಇದಕ್ಕೆ ಕೇಂದ್ರ ಸರಕಾರ ಮತ್ತು ಐಬಿಎನ ಉದಾಸೀನ ಹಾಗೂ ನಿರ್ಲಕ್ಷ್ಯತನವೇ ಎಂದು ಪ್ರತಿಭಟನಕಾರು ದೂರಿದರು.

ಯು.ಎಫ್‌.ಬಿ.ಯು ಸಂಘಟನೆಗಳು ಹಾಗೂ ಐಬಿಎನ ಪ್ರತಿನಿಧಿಗಳ ನಡುವೆ ಇಲ್ಲಿಯವರೆಗೆ ಸುಮಾರು 20ಕ್ಕೂ ಹೆಚ್ಚಿನ ಮಾತುಕತೆ ಸಭೆಗಳು ನಡೆದಿವೆ. ಆದರೆ ಆಡಳಿತ ಮಂಡಳಿಗಳ ಹಠಮಾರಿತನದಿಂದಾಗಿ ಇದುವರೆಗೂ ನ್ಯಾಯಯುತ ವೇತನ ಪರಿಷ್ಕರಣೆ ಜಾರಿಗೆ ಬಂದಿಲ್ಲ. ಜ.27ರಂದು ಕೇಂದ್ರ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯೂ ವಿಫಲವಾಗಿರುವ ಹಿನ್ನೆಲೆಯಲ್ಲಿ ಮುಷ್ಕರ ಅನಿವಾರ್ಯವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ವೇತನ ಪರಿಷ್ಕರಣೆ ಬೇಡಿಕೆಯ ಜೊತೆಗೆ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯ ಜಾರಿಯಾಗಬೇಕು. ವಿಶೇಷ ಭತ್ಯೆಯನ್ನು ಮೂಲವೇತನದೊಂದಿಗೆ ವಿಲೀನಗೊಳಿಸಬೇಕು. ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಮೊದಲಿದ್ದ ಪಿಂಚಣಿ ಸೌಲಭ್ಯವನ್ನು ವಿಸ್ತರಿಸಬೇಕು. 25 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಪಿಂಚಣಿ ಹಾಗೂ ಕುಟುಂಬ ಪಿಂಚಣಿಯನ್ನು ಪರಿಷ್ಕರಿಸಬೇಕು ಎಂದು ಒತ್ತಾಯಿಸಿದರು.

ಸಿಬ್ಬಂದಿ ಕಲ್ಯಾಣ ನಿಧಿಯನ್ನು ಬ್ಯಾಂಕುಗಳ ಒಟ್ಟಾರೆ ನಿರ್ವಹಣಾ ಲಾಭದ ಆಧಾರದ ಮೇಲೆ ನಿಗದಿಗೊಳಿಸಬೇಕು. ನಿವೃತ್ತಿ ಸಮಯದಲ್ಲಿ ಬರುವ ಹಣವನ್ನು ಸಂಪೂರ್ಣವಾಗಿ ತೆರಿಗೆಮುಕ್ತಗೊಳಿಸಬೇಕು. ಬ್ಯಾಂಕ್ ಶಾಖೆಗಳ ಕೆಲಸದ ವೇಳೆಯನ್ನು ಏಕರೂಪವಾಗಿ ನಿಗದಿಗೊಳಿಸಬೇಕು. ರಜಾ ನಿಧಿಯನ್ನು ಆರಂಭಿಸಬೇಕು. ಅಧಿಕಾರಿಗಳಿಗೆ ಏಕರೂಪ ಕೆಲಸದ ವೇಳೆಯನ್ನು ನಿರ್ಧರಿಸಬೇಕು ಗುತ್ತಿಗೆ ನೌಕರರಿಗೆ ಹಾಗೂ ಬ್ಯಾಂಕ್ ಮಿತ್ರರಿಗೆ ‘ಸಮಾನ ಕೆಲಸ - ಸಮಾನ ವೇತನ’ ನೀಡಬೇಕು ಎಂದು ಆಗ್ರಹಿಸಿದರು.

ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮಾರ್ಚ್ ತಿಂಗಳಲ್ಲೂ 2 ದಿನಗಳು ಹಾಗೂ ಏಪ್ರಿಲ್‌ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಷ್ಕರದ ನೇತೃತ್ವ ವಹಿಸಿದ್ದ ಕೆ.ರಾಘವೇಂದ್ರ ನಾಯರಿ, ಕೆ.ಎನ್. ಗಿರಿರಾಜ್, ಆರ್‍.ಶ್ರೀನಿವಾಸ್, ವಾಗೀಶ್, ಪಿ.ಆರ್‍. ಪುರುಷೋತ್ತಮ್, ಜಿ.ರಂಗಸ್ವಾಮಿ, ಎಂ.ಆರ್.ರಾಘವೇಂದ್ರ, ಕಾರ್ಮಿಕ ಮುಖಂಡರಾದ ಕೆ.ಎಲ್.ಭಟ್ ಮಾತನಾಡಿದರು.

ದಾವಣಗೆರೆ ಚಿತ್ರದುರ್ಗ ಜಿಲ್ಲಾ ಬ್ಯಾಂಕ್ ನಿವೃತ್ತರ ಒಕ್ಕೂಟ, ಮೈಸೂರು ಬ್ಯಾಂಕ್ ಪೆನ್ಶನರ್ಸ್ ಕಮ್ಯೂನ್, ಕೆನರಾ ಬ್ಯಾಂಕ್ ನಿವೃತ್ ಅಧಿಕಾರಿಗಳ ಸಂಘಟನೆಗಳು, ಪಿಗ್ಮಿ ಸಂಗ್ರಹದಾರರ ಸಂಘಟನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದವು. ನಿವೃತ್ತ ಬ್ಯಾಂಕ್ ನೌಕರರ ಸಂಘಟನೆಗಳ ಜಿ. ರಂಗಸ್ವಾಮಿ, ಅಜಿತ್ ಕುಮಾರ್ ನ್ಯಾಮತಿ, ಎಚ್.ನಾಗರಾಜ್, ಎನ್.ಟಿ.ಯರ್ರಿಸ್ವಾಮಿ, ಸಿಂಡಿಕೇಟ್ ಬ್ಯಾಂಕ್ ಪಿಗ್ಮಿ ಸಂಗ್ರಹಕಾರ ಸೋಮಶೇಖರ್ ಉಪಸ್ಥಿತರಿದ್ದರು.

ಬಿ.ಆನಂದ ಮೂರ್ತಿ, ಆರ್.ಶ್ರೀನಿವಾಸ್, ಕೆ.ಬಿ.ಮಂಜುನಾಥ, ವಾಗೀಶ್, ಎನ್.ರಾಮಮೂರ್ತಿ, ವಿಶ್ವನಾಥ ಬಿಲ್ಲವ, ವಿಜಯ ಬ್ಯಾಂಕ್ ಆನಂದ ಮೂರ್ತಿ, ಆರ್‍.ಆಂಜನೇಯ, ಎಚ್.ಎಸ್. ತಿಪ್ಪೇಸ್ವಾಮಿ, ಕೃಷ್ಣಪ್ಪ, ಎಚ್.ಜಿ.ಸುರೇಶ್, ರಾಮಕೃಷ್ಣ, ಎಂ.ಪಿ. ಕಿರಣ ಕುಮಾರ್,‍ ಜಗಳೂರು ತಿಪ್ಪೇಸ್ವಾಮಿ ಮುಷ್ಕರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT