ಹರಿಹರ: ರಾಜ್ಯ ಸರ್ಕಾರದ ಸಾಮಾಜಿಕ, ಆರ್ಥಿಕ ಸಮೀಕ್ಷಾ (ಜಾತಿ ಗಣತಿ) ವರದಿಯನ್ನು ಪುನರ್ ಪರಿಶೀಲಿಸಬೇಕು ಎಂದು ಆಗ್ರಹಿಸಿ ನೇಕಾರ ಸಮುದಾಯದ ಮುಖಂಡರು ಶುಕ್ರವಾರ ಗ್ರೇಡ್-2 ತಹಶೀಲ್ದಾರ್ ಪುಷ್ಪಾವತಿ ಅವರಿಗೆ ಮನವಿ ಸಲ್ಲಿಸಿದರು.

ನೇಕಾರ ಸಮುದಾಯದ ಕುರುಹಿನ ಶೆಟ್ಟಿ, ಪದ್ಮಶಾಲಿ, ದೇವಾಂಗ, ಸ್ವಕುಳಸಾಲಿ, ಪಟ್ಟಸಾಲಿ ಹಾಗೂ ತೊಗಟವೀರ ಸಮಾಜಗಳ ಪ್ರತಿನಿಧಿಗಳು ತಾಲ್ಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ಬಳಿಕ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ನೇಕಾರ ಸಮುದಾಯಗಳಲ್ಲಿ ಒಟ್ಟು 29 ಒಳಪಂಗಡಗಳ 60 ಲಕ್ಷ ಜನಸಂಖ್ಯೆ ಇದೆ. ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ಕೇವಲ 9.20 ಲಕ್ಷ ಎಂದು ಗುರುತಿಸಲಾಗಿದ್ದು, ಇದರಿಂದ ನೇಕಾರ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಮುಖಂಡರು ದೂರಿದರು.

ಜನಗಣತಿ ಹಾಗೂ ಜಾತಿಗಣತಿ ಮಾಡಲು ತೀರ್ಮಾನಿಸಿರುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಒಕ್ಕೂಟವು ಸ್ವಾಗತಿಸುತ್ತದೆ, ಇದಕ್ಕೆ ಕಾಲ ಮಿತಿ ನಿಗದಿಪಡಿಸಿ, ಸೂಕ್ತ ಅನುದಾನವನ್ನು ಮೀಸಲಿಟ್ಟು ಕೂಡಲೇ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಜಾತಿ ಗಣತಿಯಿಂದ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸಹಕಾರಿಯಾಗಬೇಕೇ ವಿನಾ ಮಾರಕವಾಗಬಾರದು. ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಆಗಿರುವ ವರದಿ ಬಗ್ಗೆ ರಾಜ್ಯ ಸರ್ಕಾರ ಆತುರದ ನಿರ್ಧಾರ ತೆಗೆದುಕೊಳ್ಳದೆ ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಎಚ್.ಕೆ.ಕೊಟ್ರಪ್ಪ, ರಾಜು ರೋಖಡೆ, ಪಿ.ಗೋಪಿ, ಪ್ರಕಾಶ್ ಕೋಳೂರು, ಮಾಲತೇಶ್ ಜಿ. ಭಂಡಾರಿ, ಷಣ್ಮುಖ, ಕೇಶವ ಮುದಗಲ್, ಯಮುನೇಶ್ ರೋಖಡೆ, ನಾಗರಾಜ್ ಬ್ಯಾಟಗಿ, ಶಂಕ್ರಪ್ಪ ವಿಭೂತಿ, ಗಂಗಾಧರ್ ಕೊಟಗಿ, ಅಣ್ಣಪ್ಪ ಶ್ಯಾವಿ, ಜ್ಞಾನ ದೇವ್ ಶ್ಯಾವಿ, ಕೃಷ್ಣಮೂರ್ತಿ ಹಿಂಡಿ, ಮಂಜುನಾಥ್ ಅಗಡಿ, ಸುನಿಲ್ ರೋಖಡೆ, ಕೆ,ಆರ್.ಪ್ರಭು, ಮಹೇಶ್ ಭಂಡಾರಿ, ಮಂಜುನಾಥ್ ಗೋಟುರ್, ಗೋಪಾಲ್ ಕೃಷ್ಣ, ವಿಜಯ್ ದಡತ್ತಿನಹಳ್ಳಿ, ಬೆನಕಪ್ಪ, ರಾಮಣ್ಣ ಮ್ಯಾಳ, ನಾಗರಾಜ್ ಗೋಟುರು, ಮಾರುತಿ ಅಂಗಡಿ, ವೈಭವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.