ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಹನ, ವೃತ್ತಿ ಕೌಶಲ ಬೆಳೆಸಿಕೊಳ್ಳಿ

ಶಿಕ್ಷಣ ತಜ್ಞ ಸುರೇಂದ್ರನಾಥ್ ಪಿ. ನಿಶಾನಿಮಠ ಸಲಹೆ
Last Updated 1 ಆಗಸ್ಟ್ 2019, 14:27 IST
ಅಕ್ಷರ ಗಾತ್ರ

ದಾವಣಗೆರೆ: ಶಿಕ್ಷಣದಲ್ಲಿ ಹಲವು ವಿಧಗಳಿವೆ. ನೀತಿ ಶಿಕ್ಷಣ, ದೈಹಿಕ ಶಿಕ್ಷಣ, ಎಂಜಿನಿಯರಿಂಗ್‌ ಹೀಗೆ ಹಲವು. ಎಲ್ಲದರ ಮೂಲ ಆಶಯ ಮಾನವೀಯ ಮೌಲ್ಯ ಹಾಗೂ ಅರಿವು ಮೂಡಿಸುವುದು ಎಂದು ಸಂವೇದಿ ತರಬೇತಿ ಸಂಶೋಧನಾ ಕೇಂದ್ರದ ಶಿಕ್ಷಣ ತಜ್ಞ ಸುರೇಂದ್ರನಾಥ್ ಪಿ. ನಿಶಾನಿಮಠ ಹೇಳಿದರು.

ಇಲ್ಲಿನ ಬಿಐಇಟಿ ಕಾಲೇಜಿನಲ್ಲಿ ಗುರುವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಮಾತನಾಡಿದರು.

ಶಿಕ್ಷಣ ತಪ್ಪು ಯಾವುದು ಸರಿ ಎಂಬುದರ ತಿಳಿವಳಿಕೆ ಮೂಡಿಸುತ್ತದೆ. ಆದರೆ ಇಂದಿನ ಶಿಕ್ಷಣ ಕೇವಲ ಅಂಕಗಳಿಕೆಯ ಮೇಲೆ ನಿಂತಿದೆ. ಜ್ಞಾನ, ಅರಿವು ಪಡೆಯುವುದರ ಮೇಲೆ ನಿಂತಿಲ್ಲ. ಇದರಿಂದ ಮಕ್ಕಳು ಉನ್ನತ ಶಿಕ್ಷಣದ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ವಿಷಾದಿಸಿದರು.

ಪ್ರಾಥಮಿಕ, ಪ್ರೌಢಶಾಲೆಯ ಹಂತದಲ್ಲಿ ಮಕ್ಕಳು ಪರಿಣಿತಿ ಸಾಧಿಸುತ್ತಿಲ್ಲ. ಇದರಿಂದ ಉನ್ನತ ಶಿಕ್ಷಣ ಕಷ್ಟವಾಗುತ್ತಿದೆ. ವಿದ್ಯಾರ್ಥಿಗಳು ಕೇವಲ ಕಲಿಯುತ್ತಾರೆ. ಉತ್ತಮ ಅಂಕ ಪಡೆಯುತ್ತಾರೆ. ಪ್ರಶ್ನೆಗೆ ಉತ್ತರ ಬರೆಯುತ್ತಾರೆ ವಿನಾ ಭಾಷಾ ಜ್ಞಾನದ ಮೇಲೆ ಹಿಡಿತ ಸಾಧಿಸುತ್ತಿಲ್ಲ. ಕಲಿತದ್ದನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಲು ಮುಂದಾಗುತ್ತಿಲ್ಲ. ನಿಜ ಜೀವನದ ಸವಾಲು ಎದುರಿಸಲು ಅವರು ಪಕ್ವವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲದಿದ್ದರೆ ಉದ್ಯೋಗದಲ್ಲಿ ಯಶಸ್ಸು ಸಾಧಿಸುವುದು ಕಷ್ಟ. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆಯುತ್ತಿದ್ದಾರೆ. ಆದರೆ ಏನನ್ನೂ ಸಂಶೋಧಿಸಲು ಶಕ್ತರಾಗಿಲ್ಲ. ಕೌಶಲ ಕಲಿಯಬೇಕು. ಉದ್ಯೋಗ ನೀಡುವ ಕಂಪನಿ ಎನು ಬಯುತ್ತದೆ ಎಂಬುದನ್ನು ತಿಳಿದು ಆ ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಸಂವಹನ, ವೃತ್ತಿ ಕೌಶಲ ಇಲ್ಲದ ಕಾರಣ ಎಷ್ಟೋ ಜನರು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದರು.

ಗ್ಲೋಬಲ್‌ ಎಡ್ಜ್‌ ಸಾಫ್ಟವೇರ್‌ ಕಂಪನಿಯ ನಾಗನಗೌಡ, ‘ನಿಮಗೆ ಎಲ್ಲ ಸೌಲಭ್ಯ ಇವೆ ಅದನ್ನು ಬಳಸಿಕೊಂಡು ಕಲಿಕೆ ಬಗ್ಗೆ ಗಮನಹರಿಸಬೇಕು. ಪೋಷಕರು ನಿಮ್ಮ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರ ನಿರೀಕ್ಷೆ ಹುಸಿಗೊಳಿಸಬಾರದು. ಅಂಕ ಗಳಿಕೆ ನಿಮ್ಮ ಕೌಶಲ ನಿರ್ಧರಿಸುವುದಿಲ್ಲ. ನಿಮಗೆ ನಿವೇ ಸ್ಟಾರ್‌ ಆಗಬೇಕು’ ಎಂದು ಸಲಹೆ ನೀಡಿದರು.

ಆತ್ಮವಿಶ್ವಾಸ, ಕಲಿಯುವುದರಲ್ಲಿ ತಾಳ್ಮೆ ಇರಲಿ. ಮಹಾತ್ವಾಕಾಂಕ್ಷೆ ಹೊಂದಿ. ದೇಶಕ್ಕೆ ಉತ್ತಮ ಭವಿಷ್ಯ ರೂಪಿಸುವ ಹೊಣೆ ನಿಮ್ಮ ಮೇಲಿದೆ. ಅದನ್ನು ಸಾಧಿಸಿ ತೋರಿಸಿ ಎಂದು ಕಿವಿಮಾತು ಹೇಳಿದರು.

ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ‘ಕಾಲೇಜಿನಲ್ಲಿ ಉತ್ತಮ ಸೌಲಭ್ಯಗಳಿದ್ದು, ಇಲ್ಲಿ ಉತ್ತಮ ಉದ್ಯೋಗವಾಕಾಶದ ಅವಕಾಶವೂ ಇದೆ. ಉತ್ತಮ ಕಂಪನಿಗಳು ಸಂದರ್ಶನಕ್ಕೆ ಬರುತ್ತವೆ. ಪರಿಶ್ರಮಪಟ್ಟು ಓದಿ ಸಾಧನೆ ಮಾಡಬೇಕು. ಯಾವುದೇ ಬಾಹ್ಯ ಒತ್ತಡಕ್ಕೆ ಒಳಗಾಗದೆ ಕಲಿತು ಜೀವನದಲ್ಲಿ ಯಶಸ್ಸು ಕಾಣಬೇಕು’ ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಸಂಚಾಲಕ ಡಾ.ಕೆ.ಎಸ್‌. ಬಸವರಾಜಪ್ಪ, ಪ್ರಾಚಾರ್ಯ ಡಾ.ಎಂ.ಸಿ. ನಟರಾಜ ಇದ್ದರು. ಕವಿತಾ ಪಿ.ಜೆ. ಪರಿಚಯಿಸಿದರು. ಪ್ರಥಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು, ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT