ಸೋಮವಾರ, ಅಕ್ಟೋಬರ್ 21, 2019
21 °C

ಬಾಲಭವನದಲ್ಲಿ ಜಿಲ್ಲಾ ಮಟ್ಟದ ಚಿತ್ರಕಲೆ, ಪ್ರಬಂಧ ಸ್ಪರ್ಧೆ

Published:
Updated:
Prajavani

ದಾವಣಗೆರೆ: ಗಾಂಧೀಜಿಯ ವಿಚಾರಧಾರೆಗಳನ್ನು ಮಕ್ಕಳು ತಿಳಿದುಕೊಳ್ಳಬೇಕು. ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದು ಕುಂದೂರು ಕಾಲೇಜಿನ ಉಪನ್ಯಾಸಕಿ ಸುಮತಿ ಜಯಪ್ಪ ಸಲಹೆ ನೀಡಿದರು.

ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾ ಬಾಲಭವನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿ ಅವರು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್, ‘ಮಕ್ಕಳಿಗೆ ಗಾಂಧೀಜಿಯವರ ದೇಶಾಭಿಮಾನ ಹಾಗೂ ಅವರ ತತ್ವಾದರ್ಶಗಳ ಕುರಿತು ಇನ್ನಷ್ಟು ತಿಳಿಸಲು ಈ ಸ್ಫರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನದ ಜತೆಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು’ ಎಂದು ಹೇಳಿದರು.

ಬಾಲಭವನದಲ್ಲಿ 6ರಿಂದ 18 ವರ್ಷದ ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಮಾಡಿಸಲಾಗುತ್ತಿದೆ. ಹಾಗೂ ಇಂದಿನಿಂದ ಮೂರು ತಿಂಗಳು ಪ್ರತಿ ಶನಿವಾರ ವಿವಿಧ ಬಾಲವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಿಲಾಗುವುದು ಎಂದರು.

ಸ್ಪರ್ಧಾ ಫಲಿತಾಂಶ

ಪ್ರಬಂಧ ಸ್ಪರ್ಧೆ: 12 ವರ್ಷದೊಳಗಿನ ವಿಭಾಗದಲ್ಲಿ ಸಿ.ಪಿ.ಸಿದ್ದಾರ್ಥ ಪ್ರಥಮ, ಖದೀಜಾ ಖಾನಂ ದ್ವಿತೀಯ, ರಾಮ್‌ಪ್ರಸಾದ್ ದೊಡ್ಡಮನಿ ತೃತೀಯ, 16 ವರ್ಷದೊಳಗಿನ ವಿಭಾಗದಲ್ಲಿ ಎಸ್.ವಿ. ಚಿನ್ಮಯಿ ಪ್ರಥಮ, ಆರ್.ಎನ್. ಚೇತನ್ ದ್ವಿತೀಯ, ಎನ್.ಪಿ.ಪೂಜಾ ತೃತೀಯ ಸ್ಥಾನ ಪಡೆದರು.

ಚಿತ್ರಕಲೆ ಸ್ಪರ್ಧೆ: 8 ವರ್ಷದೊಳಗಿನವ ವಿಭಾಗ: ಜೆ.ಎಸ್. ಗೌತಮಿ ಪ್ರಥಮ, ಫೈಸಲ್‌ಖಾನ್ ದ್ವಿತೀಯ, ಖಾಲಿದಾ ಖಾನಂ ತೃತೀಯ. 12 ವರ್ಷದೊಳಗಿನ ವಿಭಾಗದಲ್ಲಿ ಜಿ.ಎಸ್. ದಿಜಾ ಪ್ರಥಮ, ಫರ್ಣಿಕಾ ಜೆ. ಅಂಗಡಿ ದ್ವಿತೀಯ, ಎಸ್.ಲಿಖಿತ ತೃತೀಯ. 16 ವರ್ಷದೊಳಗಿನ ವಿಭಾಗದಲ್ಲಿ ಜಿ. ಲಿಂಗರಾಜು ಪ್ರಥಮ, ಎಸ್. ನೂತನ್ ದ್ವಿತೀಯ, ಎನ್.ಆರ್. ಗಗನ್ ತೃತೀಯ ಸ್ಥಾನ ಪಡೆದರು.

ಬಾಲಕರ ಬಾಲಮಂದಿರದ ಅಧೀಕ್ಷಕ ಮಹಾಂತಸ್ವಾಮಿ ಪೂಜಾರ್, ತೀರ್ಪುಗಾರ ಶಾಂತರಾಜ್ ಕರಡಿಮಠ್, ಚಿತ್ರಕಲಾ ತಂಡದ ಅಧ್ಯಕ್ಷ ನಾಗಭೂಷಣ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಎಚ್.ಎನ್. ಶ್ರುತಿ ಇದ್ದರು.

Post Comments (+)