ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ 1ರಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನ

ಕೊರೊನಾ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೊಟಕು
Last Updated 25 ಫೆಬ್ರುವರಿ 2021, 4:04 IST
ಅಕ್ಷರ ಗಾತ್ರ

ದಾವಣಗೆರೆ: ಮಾರ್ಚ್ 1 ಹಾಗೂ 2ರಂದು ಲೀಡ್ ಬ್ಯಾಂಕ್‌ನ ನಿವೃತ್ತ ಅಧಿಕಾರಿ, ಸಾಹಿತಿ ಎನ್.ಟಿ. ಯರ್‍ರಿಸ್ವಾಮಿ ಅಧ್ಯಕ್ಷತೆಯಲ್ಲಿಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದ್ದು,ವಿಚಾರ ಗೋಷ್ಠಿಗಳು, ಸಂವಾದ ಗೋಷ್ಠಿ, ವಿಶೇಷ ಉಪನ್ಯಾಸಗಳು, ಬಹಿರಂಗ ಅಧಿವೇಶನಗಳು ನಡೆಯಲಿವೆ.

‘ಕೊರೊನಾ ಕಾರಣದಿಂದಾಗಿ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೊಟಕುಗೊಳಿಸಲಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್.ಎಸ್‌. ಮಂಜುನಾಥ ಕುರ್ಕಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮಾರ್ಚ್ 1ರಂದು ಬೆಳಿಗ್ಗೆ 8ಗಂಟೆಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಧ್ವಜಾರೋಹಣ ನೆರವೇರಿಸುವರು. ಬೆಳಿಗ್ಗೆ 9ಕ್ಕೆ ನಡೆಯುವ ಸಮ್ಮೇಳನ ಅಧ್ಯಕ್ಷರ ಮೆರವಣಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಚಾಲನೆ ನೀಡುವರು. ಮೆರವಣಿಗೆ ವಿದ್ಯಾನಗರದ ಆಂಜನೇಯ ಸ್ವಾಮಿ ದೇವಾಲಯದಿಂದ ಹೊರಟು ಈಶ್ವರ ಪಾರ್ವತಿ ದೇವಾಲಯ, ವಿದ್ಯಾನಗರದ ಉದ್ಯಾನ, ಮಹಾತ್ಮಗಾಂಧಿ ವೃತ್ತದ ಮೂಲಕ ಕುವೆಂಪು ಕನ್ನಡ ಭವನ ತಲುಪುವುದು. ಡೊಳ್ಳು ಕುಣಿತ, ವೀರಗಾಸೆ, ಪೋತರಾಜರ ಕುಣಿತಗಳು ಮೆರವಣಿಗೆಗೆ ಮೆರುಗು ನೀಡಲಿವೆ’ ಎಂದರು.

‘ಅಂದು ಬೆಳಿಗ್ಗೆ 10ಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮನು ಬಳಿಗಾರ್ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ಶಾಸಕ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು. ಡಾ.ಜಿ.ಎಸ್. ಶಿವರುದ್ರಪ್ಪ ವೇದಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಉದ್ಘಾಟಿಸುವರು. ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಕೃತಿಗಳನ್ನು ಬಿಡುಗಡೆ ಮಾಡುವರು. ಡಾ.ಲೋಕೇಶ್ ಅಗಸನಕಟ್ಟೆ ಕನ್ನಡ ಧ್ವಜ ಹಸ್ತಾಂತರಿಸುವರು’ ಎಂದು ತಿಳಿಸಿದರು.

ಮಧ್ಯಾಹ್ನ 2ಕ್ಕೆ ನಡೆಯುವ ಗೋಷ್ಠಿ 1ರಲ್ಲಿ ‘ಕನ್ನಡ ಕಾವ್ಯ ಮತ್ತು ವಿಶ್ವ ಮಾನವ ಪ್ರಜ್ಞೆ’ ಕುರಿತು ನಡೆಯುವ ಉಪನ್ಯಾಸದಲ್ಲಿ ‘ಡಾ.ಎಂ.ಜಿ.ಈಶ್ವರಪ್ಪ, ದಾದಾಪೀರ್‌ ನವಿಲೇಹಾಳ್,ಡಾ.ಎ.ಬಿ.ರಾಮಚಂದ್ರಪ್ಪ, ಪ್ರೊ.ಸಿ.ವಿ.ಪಾಟೀಲ್ ವಿಷಯ ಮಂಡಿಸುವರು’ ಎಂದು ಮಾಹಿತಿ ನೀಡಿದರು.

ಮಧ್ಯಾಹ್ನ 3.30ಕ್ಕೆ ನಡೆಯುವ ‘ಸಾಹಿತ್ಯ ಮತ್ತು ಸಾಂಸ್ಕೃತಿಕ ನೆಲೆಗಳು’ ಕುರಿತ ಎರಡನೇ ಗೋಷ್ಠಿಯಲ್ಲಿ ಪ್ರೊ.ಭಿಕ್ಷಾವರ್ತಿ ಮಠ, ಡಾ.ಆನಂದ್ ಋಗ್ವೇದಿ, ಡಾ.ಎಚ್.ಎಲ್. ಪುಷ್ಪ ವಿಷಯ ಮಂಡಿಸುವರು.

‘ಮಾರ್ಚ್ 2ರಂದು ನಡೆಯುವ ಕೊರೊನಾ ಕವಿಗೋಷ್ಠಿಯಲ್ಲಿ ಬಿ.ಎನ್. ಮಲ್ಲೇಶ್ ಅಧ್ಯಕ್ಷತೆ ವಹಿಸಲಿದ್ದು, ಸೈಯದ್ ಫೈಜುಲ್ಲಾ ಸಂತೇಬೆನ್ನೂರು ಆಶಯ ನುಡಿಗಳನ್ನಾಡುವರು. ಗೋಷ್ಠಿ 4ರಲ್ಲಿ ‘ದೇಶಿ ಭಾಷೆಯ ಮುಂದಿರುವ ಸವಾಲುಗಳು’ ಕುರಿತು ಪತ್ರಕರ್ತ ಡಾ.ಪದ್ಮರಾಜ ದಂಡಾವತಿ ವಿಷಯ ಮಂಡಿಸುವರು’ ಎಂದು ಹೇಳಿದರು.

‘ನೂತನ ಕೃಷಿ ಕಾಯ್ದೆ ನಿಜಕ್ಕೂ ಹಿತತ್ರುವೇ’ ವಿಷಯ ಕುರಿತುಮಧ್ಯಾಹ್ನ ನಡೆಯುವ ಸಂವಾದ ಗೋಷ್ಠಿಯಲ್ಲಿ ಮಾಜಿ ಶಾಸಕ ವೈ.ಎಸ್‌.ವಿ.ದತ್ತ ವಿಷಯ ಮಂಡನೆ ಮಾಡಲಿದ್ದು, ಕೃಷಿ ಹಾಗೂ ನೀರಾವರಿ ತಜ್ಞ ಪ್ರೊ.ಸಿ.ನರಸಿಂಹಪ್ಪ ಅಧ್ಯಕ್ಷತೆ ವಹಿಸುವರು. ರೈತ ಮುಖಂಡರಾದ ತೇಜಸ್ವಿ ಪಟೇಲ್, ಬಲ್ಲೂರು ರವಿಕುಮಾರ್ ಮೊದಲಾದವರು ಭಾಗವಹಿಸುವರು ಎಂದು ಹೇಳಿದರು.

ಮಾರ್ಚ್ 2ರಂದು ಸಂಜೆ 4ಕ್ಕೆ ನಡೆಯುವ ಬಹಿರಂಗ ಅಧಿವೇಶನದಲ್ಲಿ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಬುರುಡೇಕಟ್ಟ ಮಂಜಪ್ಪ ನಿರ್ಣಯ ಮಂಡಿಸುವರು. ಸಂಜೆ 4.30ಕ್ಕೆ ಸಮಾರೋಪ ನಡೆಯಲಿದ್ದು, ಖ್ಯಾತ ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಸಮಾರೋಪ ನುಡಿಗಳನ್ನಾಡುವರು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಎ.ಆರ್,ಉಜಿನಪ್ಪ, ಎನ್.ಎಸ್.ರಾಜು, ಬಿ.ದಿಳ್ಯಪ್ಪ, ಬುರುಡೇಕಟ್ಟೆ ಮಂಜಪ್ಪ, ಷಣ್ಮುಖಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT