ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾವೆಲ್ಲಾ ಸಿದ್ದರಾಮಯ್ಯರ ಮುಂದಾಳತ್ವದಲ್ಲಿ ಕೆಲಸ ಮಾಡೋಣ: ಡಿ.ಕೆ. ಶಿವಕುಮಾರ್‌

Last Updated 3 ಆಗಸ್ಟ್ 2022, 15:49 IST
ಅಕ್ಷರ ಗಾತ್ರ

ದಾವಣಗೆರೆ: ನಾವು ನೀವೆಲ್ಲಾ ಪುಣ್ಯವಂತರೂ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ. ಇದೇ ವೇಳೆ ನಮ್ಮ ನಿಮ್ಮೆಲ್ಲ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ ಮಾಡುತ್ತಿದ್ದೇವೆ. ದೇಶಕ್ಕೂ ಸಂಭ್ರಮ. ಕಾಂಗ್ರೆಸ್ಸಿಗೂ ಸಂಭ್ರಮ. ಸಿದ್ದರಾಮಯ್ಯರಿಗೂ ಸಂಭ್ರಮ. ನಿಮಗೂ ಸಂಭ್ರಮ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ದಾವಣಗೆರೆಯಲ್ಲಿ ಆಯೋಜಿಸಲಾಗಿರು ಸಿದ್ದರಾಮಯ್ಯರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ,
ದೇಶಕ್ಕೆ ನ್ಯಾಯ ಒದಗಿಸಿಸಕೊಡಬೇಕು. ಕಾಂಗ್ರೆಸ್ ಈ ದೇಶದ ಶಕ್ತಿ. 2013ರಂದು ಸಿದ್ದರಾಮಯ್ಯರನ್ನು ಎಐಸಿಸಿ ನಾಯಕರು ರಾಜ್ಯದ ಸಿಎಂ ಮಾಡಿದರು. ಸಿದ್ದರಾಮಯ್ಯ ಬಸವಣ್ಣ ಹುಟ್ಟಿದ ದಿನ ಅಧಿಕಾರಿ ವಹಿಸಿಕೊಂಡರು. ಬಸವಣ್ಣನವರ ತತ್ವವೇ ಕಾಂಗ್ರೆಸ್ ಅಳವಡಿಸಿಕೊಂಡಿದೆ. ಆ ತತ್ವದ ಆಧಾರದಲ್ಲೇ ನಾವು ರಾಜ್ಯದಲ್ಲಿ ಕೆಲಸ ಮಾಡಿದ್ದೇವೆ.ರಾಜ್ಯದ ಎಲ್ಲಾ ಮುಖಂಡರು, ಜನತೆ ಪರವಾಗಿ ನೀವು ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ಆಗಮಿಸಿದ್ದಕ್ಕಾಗಿ ನಿಮಗೆ ಧನ್ಯವಾದ ಹೇಳುತ್ತೇನೆ ಎಂದು ರಾಹುಲ್ ಗಾಂಧಿಗೆ ಹೇಳಿದರು.

ನಿಮ್ಮೆಲ್ಲರ ಆಸೆ ನೀವು ವಿಧಾನಸೌಧದ 3 ಮಹಡಿಯಲ್ಲಿ ಓಡಾಡಬೇಕು. ಕಾರಣ ಎಲ್ಲರೂ ರಾಜ್ಯದಲ್ಲಿ ಭ್ರಷ್ಠ ಸರ್ಕಾರ ತೆಗೆದು ಹಾಕಲು ಸಂಕಲ್ಪ ಮಾಡಬೇಕು. ಎಲ್ಲರೂ ಪ್ರತಿಜ್ಞೆ ಮಾಡಬೇಕು. ಸಿದ್ದರಾಮಯ್ಯ ಕಾಲದಲ್ಲಿ ನಾವೆಲ್ಲಾ ಸಚಿವರಾಗಿ ಕೆಲಸ ಮಾಡಿದ್ಧೇವೆ. ನಿಮ್ಮ ಶಕ್ತಿ ಪಕ್ಷದ ಕಾರ್ಯಕ್ರಮ ಈ ರಾಜ್ಯದ ಎಲ್ಲಾ ವರ್ಗದ ಜನರಿಗೆ ಕೊಡಲಾಗಿದೆ. ಅಧಿಕಾರ ತೆಗೆದುಕೊಂಡ ಒಂದು ಗಂಟೆಯಲ್ಲಿ ರಾಜ್ಯದ ಯಾವುದೇ ಜನ ಹಸಿವಿನಿಂದ ಇರಬಾರದು ಎಂದು ಯೋಜನೆ ರೂಪಿಸಿ ಅದನ್ನು ಅನುಷ್ಠಾನ ಮಾಡಿದ್ದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂದರು.

ಕೇವಲ ವೇದಿಕೆಯಲ್ಲಿ ಇರುವ ಮುಖಂಡರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ತರಲು ಸಾಧ್ಯವಿಲ್ಲ. ಈ ರಾಜ್ಯದ ಜನತೆ ತೀರ್ಮಾನ ಮಾಡಬೇಕಾಗಿದೆ. ಮುಂದಿನ ವರ್ಷ ನಿಮ್ಮ ಕೈಲಿದೆ. ಮುಂದಿನ ವರ್ಷದಲ್ಲಿ ಕಾಂಗ್ರೆಸ್ ಪಕ್ಷವನ್ನು ವಿಧಾನ ಸೌಧದಲ್ಲಿ ಅಧಿಕಾರ ಹಿಡಿಯುವಂತೆ ಮಾಡಬೇಕು ಎಂದು ಕರೆ ನೀಡಿದರು.

ಎಲ್ಲಾ ವರ್ಗದ ನಾಯಕರು ಕಾಂಗ್ರೆಸ್ ಪಕ್ಷವನ್ನು ಬಲ ಪಡಿಸಬೇಕು. ಸಿದ್ದರಾಮಯ್ಯರನ್ನು ಕೇವಲ ಹಿಂದುಳಿದ ನಾಯಕ ಎಂದು ಬಿಂಬಿಸ ಬೇಡಿ. ಅವರು ಎಲ್ಲಾ ವರ್ಗದ ನಾಯಕರು. ಎಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿ. ರಾಜ್ಯದಲ್ಲಿನ ಕೆಟ್ಟ ಸರ್ಕಾರ ಎಲ್ಲಾ ವರ್ಗಕ್ಕೆ ಅನ್ಯಾಯ ಮಾಡಿದೆ. ಈ ಸರ್ಕಾರ ಕಿತ್ತೊಗೆದಾಗ ಮಾತ್ರ ರಾಜ್ಯದ ಅಭಿವೃದ್ದಿ ಆಗುತ್ತದೆ. ಅದಕ್ಕೆ ರಾಜ್ಯದ ಜನತೆ ಕಂಕಣ ತೊಡಬೇಕಾಗಿದೆ. ನಾವೆಲ್ಲಾ ಸಿದ್ದರಾಮಯ್ಯ ಅವರ ಮುಂದಾಳತ್ವದಲ್ಲಿ ಕೆಲಸ ಮಾಡೋಣ. ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡಬೇಕೆಂದು ತೀರ್ಮಾನಿಸಿದೆ. ಅದರಂತೆ ಎಲ್ಲರೂ ಕೆಲಸ ಮಾಡಿ ರಾಹುಲ್ ಗಾಂಧಿಯವರನ್ನು ಈ ದೇಶದ ಪ್ರಧಾನ ಮಂತ್ರಿ ಮಾಡೋಣ. ಎಲ್ಲರೂ ಪಕ್ಷದ, ಸಿದ್ದರಾಮಯ್ಯರ ಕೈ ಬಲಪಡಿಸೋಣ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT