ಬುಧವಾರ, ಜುಲೈ 15, 2020
25 °C

ಜೂಜಾಟ: ಶಿಕ್ಷಣ ಇಲಾಖೆಯ 7 ಸಿಬ್ಬಂದಿ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ತಿಂಗಳ ಹಿಂದೆ ಜೂಜಾಟವಾಡಿ ಸಿಕ್ಕಿ ಬಿದ್ದಿದ್ದ ದಾವಣಗೆರೆ ಉತ್ತರ ವಲಯದ ಬಿಇಒ ಕಚೇರಿಯ ಏಳು ಜನ ಸಿಬ್ಬಂದಿಯನ್ನು ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್‌ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಉತ್ತರ ವಲಯದ ಅಧೀಕ್ಷಕ ಎಚ್‌.ಎಸ್‌. ಬಸವರಾಜ್‌, ಪ್ರಥಮದರ್ಜೆ ಸಹಾಯಕ ಎಂ.ಸುಧಾಕರ್‌, ದ್ವಿತೀಯದರ್ಜೆ ಸಹಾಯಕ ಕೊಟ್ರೇಶ್‌, ದ್ವಿತೀಯ ದರ್ಜೆ ಸಹಾಯಕ ಮಲ್ಲಿಕಾರ್ಜುನ್‌ ಮಠದ, ಶಿಕ್ಷಣ ಸಂಯೋಜಕ ಎಸ್‌. ಸೋಮಶೇಖರಪ್ಪ, ಡಿ.ಗ್ರೂಪ್‌ ನೌಕರ ಹರ್ಷವರ್ಧನ್‌, ಗುಮ್ಮನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಕೆ.ಎಂ. ವೃಷಬೇಂದ್ರಪ್ಪ ಅಮಾನತುಗೊಂಡವರು.

ಲಾಕ್‌ಡೌನ್‌ ಸಮಯದಲ್ಲಿ ಪಿಬಿ ರಸ್ತೆಯಲ್ಲಿನ ಬಿಲಾಲ್‌ ಕಾಂಪೌಂಡ್‌ ಆವರಣದಲ್ಲಿ ಈ ಸಿಬ್ಬಂದಿ ನಿಷೇಧಾಜ್ಞೆ ಉಲ್ಲಂಘಿಸಿ ಇಸ್ಪೀಟದ ಆಡುತ್ತಿದ್ದರು. ಈ ಸಂಬಂಧ ಕೆಟಿಜೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು