ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಗ್ರಾಸ ಚಂದ್ರ ಗ್ರಹಣ: ಕರಾವಳಿಯಲ್ಲಿ ಪುಳಕ

Last Updated 1 ಫೆಬ್ರುವರಿ 2018, 4:33 IST
ಅಕ್ಷರ ಗಾತ್ರ

ಮಂಗಳೂರು: ಖಗ್ರಾಸ ಚಂದ್ರಗ್ರಹಣ ಕಂಡು ಕರಾವಳಿಯ ಜನ ಬುಧವಾರ ರಾತ್ರಿ ಪುಳಕಿತರಾದರು. ಸಂಪ್ರದಾಯದ ಆಚರಣೆಗಳ ನಡುವೆಯೇ ನೂರಾರು ಮಂದಿ ಮನೆ, ಅಪಾರ್ಟ್‌ಮೆಂಟ್‌ಗಳ ತಾರಸಿ ಮೇಲೆ ನಿಂತು ಬಣ್ಣದ ಚಂದ್ರನನ್ನು ವೀಕ್ಷಿಸಿ ಸಂಭ್ರಮಿಸಿದರು.

ಡಾ.ಶಿವವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ವತಿಯಿಂದ ಕುಲಶೇಖರದ ಸ್ಪೂರ್ತಿ ಕಾಂಪ್ಲೆಕ್ಸ್‌ನಲ್ಲಿ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಖಗೋಳ ವೀಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಹಲವರು ಅಲ್ಲಿಗೆ ಬಂದು ದೀರ್ಘಕಾಲ ಗ್ರಹಣ ವೀಕ್ಷಿಸಿದರು. ನಗರದ ಹಲವು ಶಿಕ್ಷಣ ಸಂಸ್ಥೆಗಳಲ್ಲೂ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

ದೇವಸ್ಥಾನಗಳು ಬಂದ್: ಚಂದ್ರ ಗ್ರಹಣದ ಕಾರಣದಿಂದ ಕರಾವಳಿಯಾದ್ಯಂತ ಎಲ್ಲ ದೇವಸ್ಥಾನಗಳ ಬಾಗಿಲುಗಳನ್ನು ಬುಧವಾರ ಮಧ್ಯಾಹ್ನವೇ ಮುಚ್ಚಲಾಗಿತ್ತು. ಗುರುವಾರ ಬೆಳಿಗ್ಗೆಯ ಪೂಜೆ ವೇಳೆಗೆ ಮತ್ತೆ ದೇವಸ್ಥಾನಗಳ ಬಾಗಿಲು ತೆರೆಯಲಾಗುತ್ತದೆ.

ಹೆಚ್ಚಿನ ಜನರು ಗ್ರಹಣದ ಕಾರಣಕ್ಕೆ ಬಹುಬೇಗನೆ ಮನೆ ಸೇರಿಕೊಂಡಿದ್ದರು. ಇದರಿಂದಾಗಿ ಸಂಜೆಯ ವೇಳೆಗೆ ಮಂಗಳೂರಿನ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಿತ್ತು. ಮೌಢ್ಯವನ್ನು ವಿರೋಧಿಸುವ ವಿವಿಧ ಸಂಘಟನೆಗಳು ಮತ್ತು ಗುಂಪುಗಳ ಸದಸ್ಯರು ವಿಚಾರವಾದಿ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ ಪ್ರೊ.ನರೇಂದ್ರ ನಾಯಕ್‌ ನೇತೃತ್ವದಲ್ಲಿ ಗ್ರಹಣದ ನಡುವೆಯೇ ತಿಂಡಿ, ತಿನಿಸುಗಳನ್ನು ಸೇವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT