ಬುಧವಾರ, ಜೂಲೈ 8, 2020
28 °C

ದಾವಣಗೆರೆಯಲ್ಲಿ ಮತ್ತೆ ಹನ್ನೊಂದು ಜನರಿಗೆ ಕೋವಿಡ್‌ ಸೋಂಕು ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಒಂಬತ್ತು ವರ್ಷದ ಇಬ್ಬರು ಬಾಲಕರು ಹಾಗೂ ಆರು ಮಹಿಳೆ ಸೇರಿ ಹನ್ನೊಂದು ಜನರಿಗೆ ಮಂಗಳವಾರ ಸೋಂಕು ಪತ್ತೆಯಾಗಿದೆ.

ನಗರದ ವಿನಾಯಕ ನಗರದ ನಿವಾಸಿ 69 ವರ್ಷದ ವ್ಯಕ್ತಿಯಿಂದ (ಪಿ. 1378)  38 ವರ್ಷದ ವ್ಯಕ್ತಿ (ಪಿ.2275), 9 ಮತ್ತು 14 ವರ್ಷದ ಬಾಲಕರು (2276, 2278) ಹಾಗೂ 36 ವರ್ಷದ ಮಹಿಳೆಗೆ (2277) ಸೋಂಕು ತಗಲಿದೆ.

ಕಂಟೈಮೆಂಟ್ ಜೋನ್ ಸಂಪರ್ಕದಿಂದ ಮೇ 19 ರಂದು ಸೋಂಕು ಪತ್ತೆಯಾಗಿತ್ತು. ಈ ನಾಲ್ವರು ಅವರ ಪುತ್ರ ಹಾಗೂ ಸಂಬಂಧಿಕರು.
 ಜಾಲಿನಗರದ ಮಹಿಳೆಯಿಂದ (933)   9 ವರ್ಷದ ಬಾಲಕ (2281), 26 ವರ್ಷದ ಮಹಿಳೆ(2282) ಹಾಗೂ 22 ವರ್ಷದ ಯುವತಿಗೆ (2257) ವೈರಸ್ ಬಂದಿದೆ.

ಗುಜರಾತಿನಿಂದ ಬಂದ ಬಸವಾಪಟ್ಟಣದ 39 ವರ್ಷದ ವ್ಯಕ್ತಿಗೆ (2280) ಸೋಂಕು ಬಂದಿದೆ. (2279)ಗೆ ಭಾಷಾನಗರದ 33 ವರ್ಷದ ಪುರುಷನಿಂದ ಸೋಂಕು.

ತರಳಬಾಳು ಬಡಾವಣೆಯ 47 ವರ್ಷದ ಮಹಿಳೆ (2208), ಜಾಲಿನಗರದ  63 ವರ್ಷದ ಮಹಿಳೆ (2279) ಇಬ್ಬರು ಸಾರಿ ಹಾಗೂ ಐಎಲ್ ಐ ಕೇಸ್ ಆಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು