ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನ್‌ ಕೆಟ್ಟು ಸಂಪರ್ಕ ಕ್ರಾಂತಿ ರೈಲು 2 ತಾಸು ವಿಳಂಬ

Last Updated 19 ಆಗಸ್ಟ್ 2022, 6:22 IST
ಅಕ್ಷರ ಗಾತ್ರ

ದಾವಣಗೆರೆ: ಯಶವಂತಪುರದಿಂದ ದೆಹಲಿಗೆ ಹೋಗುತ್ತಿದ್ದ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ ರೈಲಿನ ಎಂಜಿನ್‌ ಕೆಟ್ಟಿದ್ದರಿಂದ ಚಿಕ್ಕಜಾಜೂರು–ದಾವಣಗೆರೆ ಮಧ್ಯೆ ಹನುಮನಹಳ್ಳಿಯಲ್ಲಿ 2 ಗಂಟೆಗೂ ಅಧಿಕ ಸಮಯ ನಿಂತಿತ್ತು. ಚಿಕ್ಕಜಾಜೂರು ರೈಲು ನಿಲ್ದಾಣದಿಂದ ಎಂಜಿನ್‌ ತರಿಸಿ ಕೆಟ್ಟಿರುವ ಎಂಜಿನ್‌ ಬದಲಾಯಿಸಿದ ಬಳಿಕ ರೈಲು ಪ್ರಯಾಣ ಮುಂದುವರಿಸಿತು.

12629 ಸಂಖ್ಯೆಯ ರೈಲು ಯಶವಂತಪುರದಿಂದ ಮಧ್ಯಾಹ್ನ 2.30ಕ್ಕೆ ಹೊರಟಿತ್ತು. 7 ಗಂಟೆಗೆ ದಾವಣಗೆರೆಗೆ ತಲುಪಬೇಕಿತ್ತು. 6.45ರ ಸುಮಾರಿಗೆ ದಾವಣಗೆರೆಗಿಂತ ಸುಮಾರು 15 ಕಿಲೋಮೀಟರ್‌ ಹಿಂದೆಯೇ ರೈಲು ಕೆಟ್ಟು ನಿಂತಿತು. ಚಲಿಸದ ರೈಲಿನಲ್ಲಿ ಕಾದು ಕುಳಿತು ಪ್ರಯಾಣಿಕರು ಸುಸ್ತಾದರು. ಎಂಜಿನ್‌ ಬದಲಾಯಿಸಿದ ಬಳಿಕ ರಾತ್ರಿ 9ಕ್ಕೆ ದಾವಣಗೆರೆಗೆ ತಲುಪಿತು.

ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ ಸಹಿತ ವಿವಿಧ ಪ್ರದೇಶಗಳ ಜನರು ತಡವಾಗಿ ಮನೆ ಸೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT