ಮಂಗಳವಾರ, ಮಾರ್ಚ್ 28, 2023
32 °C
ಸಂಸದ ಜಿ.ಎಂ. ಸಿದ್ದೇಶ್ವರ ವ್ಯಂಗ್ಯ

‘ಸೈಕಲ್‌ನಲ್ಲಿ ವ್ಯಾಯಾಮ ಚೆನ್ನಾಗಿ ಆಗುತ್ತೇ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಜನರು ಸೈಕಲ್‌ನಲ್ಲಿ ಓಡಾಡಿದರೆ ವ್ಯಾಯಾಮ ಚೆನ್ನಾಗಿ ಆಗುತ್ತದೆ. ರೋಗ ಬರುವುದಿಲ್ಲ..’

ಪೆಟ್ರೋಲ್, ಡೀಸೆಲ್ ದರ ಹೆಚ್ಚುತ್ತಿರುವುದಕ್ಕೆ ಕಾಂಗ್ರೆಸ್‌ನವರ ಆರೋಪದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಮೇಲಿನಂತೆ ಉತ್ತರಿಸಿದರು.

‘ಹೊರ ದೇಶಗಳಲ್ಲೂ ಕಚ್ಚಾ ತೈಲದ ಬ್ಯಾರೆಲ್ ಹೆಚ್ಚಾಗಿದೆ. ಅಲ್ಲಿ ಕಡಿಮೆಯಾದರೆ ಇಲ್ಲೂ ಕಡಿಮೆಯಾಗುತ್ತದೆ. ಕೋವಿಡ್ ಇರುವುದರಿಂದ ಬೆಲೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತದೆ. ಪೆಟ್ರೋಲ್, ಡೀಸೆಲ್ ದರ ಕಡಿಮೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಕ್ರಮ ಕೈಗೊಳ್ಳುತ್ತಾರೆ’ ಎಂದು ಸಮರ್ಥಿಸಿಕೊಂಡರು.

ಜಿಎಸ್‌ಟಿ ಪಾಲು ರಾಜ್ಯಕ್ಕೆ ಸೂಕ್ತವಾಗಿ ಸಿಗುತ್ತಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ, ‘ಈ ಬಗ್ಗೆ ನನಗೇನು ಗೊತ್ತಿಲ್ಲ, ಹಣಕಾಸು ಸಚಿವರನ್ನು ಕೇಳಿ ಎಂದು ಉತ್ತರಿಸಿದ ಸಿದ್ದೇಶ್ವರ ‘ರಾಜ್ಯದಲ್ಲಿ ನಾಲ್ವರು ಸಚಿವರು ಇದ್ದು, ಅವರು ಕೇಳುತ್ತಾರೆ’ ಎಂದರು.

ಕಾಂಗ್ರೆಸ್‌ನಿಂದ ಈ ಹಿಂದೆ ಇದ್ದ 28 ಜನ ಸಂಸದರು ರಾಜ್ಯಕ್ಕೆ ಮಾಡಿರುವುದೇನು ಎಂದು ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು