ವೈಜ್ಞಾನಿಕ ಬೆಲೆಗೆ ಸೂಕ್ತ ಮಾರುಕಟ್ಟೆ

7
ಕೃಷಿ ಸಚಿವ ಎನ್.ಎಚ್. ಶಿವಶಂಕರೆಡ್ಡಿ ಭರವಸೆ

ವೈಜ್ಞಾನಿಕ ಬೆಲೆಗೆ ಸೂಕ್ತ ಮಾರುಕಟ್ಟೆ

Published:
Updated:
Deccan Herald

ಉಚ್ಚಂಗಿದುರ್ಗ: ರಾಜ್ಯ ಸಮ್ಮಿಶ್ರ ಸರ್ಕಾರ ರೈತರ ಪರವಾಗಿದ್ದು, ₹2 ಲಕ್ಷದವರೆಗಿನ ಸಾಲ ಮನ್ನಾ ಮಾಡಿದೆ. ಈ ಹಿಂದೆ ಸಿದ್ದರಾಮಯ್ಯನವರು ₹8,500 ಕೋಟಿ ಸಾಲ ಮನ್ನಾ ಮಾಡಿದ್ದರು. ರೈತರಿಗೆ ಇಷ್ಟೆಲ್ಲಾ ಅನುಕೂಲ ಮಾಡಿದ್ದರೂ ಕೆಲವರು ರೈತರಿಗೆ ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಮೊಸರಲ್ಲಿ ಕಲ್ಲು ಹುಡುಕುವವರಿಗೆ ಅಭಿವೃದ್ಧಿ ಕೆಲಸಗಳ ಮೂಲಕವೇ ಉತ್ತರ ಕೊಡುತ್ತಿದ್ದೇವೆ ಎಂದು ಕೃಷಿ ಸಚಿವ ಎನ್.ಎಚ್. ಶಿವಶಂಕರೆಡ್ಡಿ ಭರವಸೆ ನೀಡಿದರು.

ಇಲ್ಲಿಗೆ ಸಮೀಪದ ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ರೈತರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಅವರು, ‘ಈಚೆಗೆ ನಡೆದ ಸಚಿವ ಸಂಪುಟದಲ್ಲಿ ಸಾಲ ಮನ್ನಾ ಆದೇಶಕ್ಕೆ ಒಪ್ಪಿಗೆ ನೀಡಲಾಗಿದ್ದು, ರೈತರ ಮನೆ ಬಾಗಿಲಿಗೆ ಋಣಮುಕ್ತ ಆದೇಶ ಪತ್ರ ತಲುಪಿಸಲಾಗುವುದು’ ಎಂದರು.

‘ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಈ ಕುರಿತು ಮಾರುಕಟ್ಟೆ ವ್ಯವಸ್ಥೆ ಬದಲಾಯಿಸಲು ಚಿಂತನೆ ನಡೆಸಿದ್ದೇವೆ. ಎಲ್ಲಾ ಕಾಲಕ್ಕೂ ಸಾಲ ಮನ್ನಾ ಅಸಾಧ್ಯ. ಹಾಗಾಗಿ ರೈತರು ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅರ್ಧಿಕವಾಗಿ ಸದೃಢರಾಗಬೇಕೆಂದು’ ಸಲಹೆ ನೀಡಿದರು.

‘ಕೃಷಿಹೊಂಡ, ಬಾಡಿಗೆ ಅದಾರಿತ ಕೃಷಿ ಯಂತ್ರಧಾರೆ ಸೇರಿ ಹಲವು ರೈತಪರ ಯೋಜನೆಗಳನ್ನು ಸರ್ಕಾರ ರೂಪಿಸಿದೆ. ಆಯಾ ಭಾಗದ ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯಬೇಕು. ಪ್ರತಿ ವರ್ಷವೂ ಒಂದೇ ತರಹದ ಬೆಳೆ ಬಿತ್ತನೆ ಮಾಡುವುದನ್ನು ರೈತರು ಕೈಬಿಡಬೇಕು. ಈಚೆಗೆ ಕಾಣಿಸಿಕೊಂಡಿರುವ ಸೈನಿಕ ಹುಳು ಕೇವಲ ಮಕ್ಕೆಜೋಳ ಅಷ್ಟೆ ಅಲ್ಲ, ನೂರಕ್ಕೂ ಅಧಿಕ ಬೆಳೆಗಳನ್ನು ನಾಶ ಮಾಡುತ್ತಿದೆ. ಇದರ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಮಾತನಾಡಿ, ‘ಹೈನುಗಾರಿಕೆ ಸೇರಿ ಕುಲಕಸುಬುಗಳಲ್ಲಿ ತೊಡಗಿಸಿಕೊಂಡಾಗ ಜೀವನ ನಿರ್ವಹಣೆ ಸುಲಭವಾಗುತ್ತದೆ. ಆಗ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ’ ಎಂದು ಹೇಳಿದರು.

ವಿಶ್ವ ಬ್ಯಾಂಕ್ ನೆರವಿನ ಸುಜಲಾ ಜಲಾನಯನ ಯೋಜನೆ ಭೂ ರಹಿತ 3 ಜನ ಫಲಾನುಭವಿಗಳಿಗೆ ತಲಾ 3 ಕುರಿಗಳನ್ನು ವಿತರಿಸಲಾಯಿತು. ಗೊಲ್ಲರಹಟ್ಟಿ ಬಳಿ ಬದು, ಕೃಷಿ ಹೊಂಡವನ್ನು ಸಚಿವರು ವೀಕ್ಷಿಸಿದರು.

ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಪಿ.ಎಲ್. ಪೋಮ್ಯನಾಯ್ಕ ಮಾತನಾಡಿದರು. ಲಕ್ಷ್ಮಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಟಿ. ಭರತ್, ಉಪ ನಿರ್ದೇಶಕರಾದ ಹಂಸವೇಣಿ, ಸ್ಪೂರ್ತಿ, ಸಹಾಯಕ ಕೃಷಿ ನಿರ್ದೇಶಕ ಆರ್. ತಿಪ್ಪೇಸ್ವಾಮಿ, ಪಿಡಿಒ ಈ.ಟಿ. ಉಮೇಶ್, ಕೃಷಿ ಅಧಿಕಾರಿಗಳಾದ ರಾಜು, ಶೇಖರಪ್ಪ, ನಾರಾನಗೌಡ, ನಾಗರಾಜ್, ಚನ್ನನಗೌಡ, ಭೀರಪ್ಪ, ಬನಸೋಡೆ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !