ಕೈಕೊಟ್ಟ ವ್ಯಾಪಾರಿ: ವಿಷ ಸೇವಿಸಿದ ರೈತ

7
ಮಲೇಬೆನ್ನೂರು: ಭತ್ತ ಬೆಳೆಗಾರರಿಗೆ ವ್ಯಾಪಾರಿಗಳಿಂದ ವಂಚನೆ

ಕೈಕೊಟ್ಟ ವ್ಯಾಪಾರಿ: ವಿಷ ಸೇವಿಸಿದ ರೈತ

Published:
Updated:
Deccan Herald

ಮಲೇಬೆನ್ನೂರು: ಇಲ್ಲಿನ ಇಂದಿರಾನಗರದ ವ್ಯಾಪಾರಿಗಳು ಬೆಳಗಾರರಿಂದ ಭತ್ತ ಕೊಂಡುಕೊಂಡು ಹಣ ನೀಡದ ಹಿನ್ನೆಲೆಯಲ್ಲಿ ಸಮೀಪದ ಭಾನುವಳ್ಳಿಯ ರೈತ ಶಿವಮೂರ್ತಿ ಭಾನುವಾರ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಅಸ್ವಸ್ಥಗೊಂಡ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಎರಡು ತಿಂಗಳ ಹಿಂದೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ನೂರಾರು ರೈತರಿಂದ ನಿಟ್ಟೂರು ರೇವಣಪ್ಪ, ರುದ್ರೇಶ್ ಎಂಬುವವರು ಭತ್ತ ಖರೀದಿ ಮಾಡಿದ್ದರು. ಆದರೆ, ಹಣ ನೀಡದೇ ರೈತರನ್ನು ಸತಾಯಿಸುತ್ತಿದ್ದರು. ಕೊನೆಗೆ ಊರು ಬಿಟ್ಟು ಹೋಗಿದ್ದರು ಎಂದು ಹಲವು ರೈತರು ಪೊಲೀಸ್ ಠಾಣೆಗೆ ಬಂದಿದ್ದರು. ಸ್ಥಳಕ್ಕೆ ಬಂದ ಶಾಸಕ ಎಸ್. ರಾಮಪ್ಪ ಕೆಲಕಾಲ ಸಂಧಾನ ನಡೆಸಿ ತೆರಳಿದರು.

ಆದರೆ, ಸಮಸ್ಯೆ ಪರಿಹಾರವಾಗದ ಕಾರಣ ರೈತರು ವ್ಯಾಪಾರಿಗಳ ಮನೆ ಎದುರು ಏಕಾಏಕಿ ಜಮಾಯಿಸಿದರು. ಕುಟುಂಬದವರು ವ್ಯಾಪಾರಿಗಳ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈ ಮೀರಿದ್ದು, ಶಿವಮೂರ್ತಿ ವಿಷ ಸೇವಿಸಿದರು. ತಕ್ಷಣ ಆತನನ್ನು ಆಂಬುಲೆನ್ಸ್‌ನಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು.

ವ್ಯಾಪಾರಿಗಳಿಗೆ ಭತ್ತ ನೀಡಿ ಲಾರಿ ಮೂಲಕ ರವಾನೆ ಮಾಡಿದ್ದೆವು. ಯಾಂತ್ರೀಕೃತ ತೂಕದ ಚೀಟಿಯೂ ಇದೆ ಎಂದು ಕುಣಿಬೆಳೆಕೆರೆ ರೇವಣಪ್ಪ, ಚಿಕ್ಕಪ್ಪ, ಚಂದ್ರಪ್ಪ, ಕನ್ನಪ್ಪ, ಹಾಲಪ್ಳರ ಕರಿಯಪ್ಪ, ಸುರೇಶ್, ಪುರಸಭೆ ಸದಸ್ಯ ಯೂಸೂಫ್ ಮಾಹಿತಿ ನೀಡಿದರು.

25 ವರ್ಷಗಳಿಂದ ನಿಟ್ಟೂರು ವ್ಯಾಪಾರಿಗಳಿಗೆ ಭತ್ತ ಕೊಡುತ್ತಿದ್ದೆವು. ಈವರೆಗೂ ಸರಿಯಾಗಿ ಹಣ ಪಾವತಿಸುತ್ತಿದ್ದರು. ಈ ಹಂಗಾಮಿನಲ್ಲಿ ಸುಮಾರು ₹ 1.50 ಕೋಟಿ ಮೋಸ ನಡೆದಿದೆ ಎಂದು ನೂರಾರು ರೈತರು ಲೆಕ್ಕ ನೀಡಿ ಆತಂಕ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !