ಶುಕ್ರವಾರ, ಮೇ 14, 2021
21 °C

ದಾವಣಗೆರೆ: ಕೊರೊನಾದಿಂದ ತಂದೆ, ಮಗಳು ಒಂದೇ ರಾತ್ರಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಮಗಳು ಕೊರೊನಾದಿಂದ, ತಂದೆ ಹೃದಯಾಘಾತದಿಂದ ಒಂದೇ ರಾತ್ರಿಯಲ್ಲಿ ಮೃತಪಟ್ಟಿದ್ದಾರೆ.

ನಗರದ ಶಿವಕುಮಾರಸ್ವಾಮಿ ಬಡಾವಣೆ ನಿವಾಸಿ, 30 ವರ್ಷಗಳಿಂದ ಖಾಸಗಿ ಬಸ್‌ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್‌ ಅಲಿಯಾಸ್‌ ಸೀಸ್ಕಡ್ಡಿ (55) ಮತ್ತು ಅವರ ಮಗಳು ಪೂಜಾ ಕೆ. (27) ಮೃತಪಟ್ಟವರು.

ಪೂಜಾ ಅವರನ್ನು ಇಲ್ಲಿನ ಜಯನಗರದ ಮಂಜುನಾಥ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ಮಂಜುನಾಥ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರೀಶಿಯನ್‌ ಆಗಿದ್ದರು. ಪೂಜಾ ಕೂಡ ಬೆಂಗಳೂರಿನಲ್ಲೇ ಇದ್ದರು. ಅಲ್ಲಿ ಕೊರೊನಾ ಸೋಂಕು ತಗುಲಿದ್ದರಿಂದ ಪೂಜಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ರಾತ್ರಿ 11ಕ್ಕೆ ಮೃತಪಟ್ಟಿದ್ದರು.

ಈ ವಿಚಾರವನ್ನು ತಂದೆಗೆ ತಿಳಿಸಿರಲಿಲ್ಲ. ಆದರೆ, ಬೆಳಗಾಗುವ ಮೊದಲೇ ಮಂಜುನಾಥ್‌ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

‘ಅಕ್ಕ ಮೃತಪಟ್ಟಿರುವುದು ಅಪ್ಪನಿಗೆ ಗೊತ್ತಿಲ್ಲ. ಅಪ್ಪ ನಿಧನರಾಗಿರುವುದು ಅಕ್ಕನಿಗೆ ಗೊತ್ತಿಲ್ಲ’ ಎಂದು ಪೂಜಾ ಅವರ ಸಹೋದರ ಸಾಗರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು