ಗುರುವಾರ , ಜೂನ್ 17, 2021
27 °C

ಬೈಕ್‌ ಶೋ ರೂಂಗೆ ಬೆಂಕಿ: ತಪ್ಪಿದ ಅನಾಹುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಇಲ್ಲಿನ ಡೆಂಟಲ್‌ ಕಾಲೇಜು ರಸ್ತೆಯ ಋತ್ವಿ ಹೀರೋ ಬೈಕ್‌ ಶೋ ರೂಂಗೆ ಗುರುವಾರ ರಾತ್ರಿ ಬೆಂಕಿ ತಗುಲಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ ಪರಿಣಾಮ ಭಾರಿ ಅನಾಹುತ ತಪ್ಪಿದೆ.

ಶೋ ರೂಂ ಸಿಬ್ಬಂದಿ ಕೆಲಸ ಮುಗಿಸಿ ಬಾಗಿಲು ಹಾಕಿ ಹೋಗಿದ್ದರು. ರಾತ್ರಿ ವೇಳೆ ಅಂಡರ್‌ ಗ್ರೌಂಡ್‌ನಲ್ಲಿದ್ದ ಜನರೇಟರ್‌ನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕಿಟಕಿಯಲ್ಲಿ ಬೆಂಕಿ  ಹೊತ್ತಿಕೊಂಡಿದ್ದ ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬಾಗಿಲು ಒಡೆದು ಒಳ ಹೋಗಿ ಬೆಂಕಿ ನಂದಿಸಿದರು.

‘ಮಾಹಿತಿ ತಿಳಿದ ತಕ್ಷಣ ಬಂದೆವು. ಬಾಗಿಲು ಮುಚ್ಚಿದ್ದ ಕಾರಣ ಡೋರ್‌ ಲಾಕರ್‌ನಿಂದ ಬಾಗಿಲು ಒಡೆದು ಒಳಹೋಗಿ ಬೆಂಕಿ ನಂದಿಸಿದೆವು. ಇದರಿಂದ ಹೆಚ್ಚಿನ ಹಾನಿಯಾಗಿಲ್ಲ. ಬೈಕ್‌ ಹಾಗೂ ಶೋ ರೂಂಗೆ ಯಾವುದೇ ಹಾನಿಯಾಗಿಲ್ಲ. ಜನರೇಟರ್‌ನಲ್ಲಿನ ದೋಷದಿಂದ ಬೆಂಕಿ ತಗುಲಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಯಾವುದೇ ಅಪಾಯ ಸಂಭವಿಸಿಲ್ಲ’  ಎಂದು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಬಸವಪ್ರಭು ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.