ಹೊನ್ನಾಳಿ ತಾಲ್ಲೂಕು ಕೂಲಂಬಿ ಗ್ರಾಮ: ಒಂದೇ ಕುಟುಂಬದ ಐವರು ಆತ್ಮಹತ್ಯೆ ಯತ್ನ

7

ಹೊನ್ನಾಳಿ ತಾಲ್ಲೂಕು ಕೂಲಂಬಿ ಗ್ರಾಮ: ಒಂದೇ ಕುಟುಂಬದ ಐವರು ಆತ್ಮಹತ್ಯೆ ಯತ್ನ

Published:
Updated:

ಹೊನ್ನಾಳಿ: ತಾಲ್ಲೂಕಿನ ಕೂಲಂಬಿ ಗ್ರಾಮದ ಒಂದೇ ಕುಟುಂಬದ ಐವರು ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಗ್ರಾಮದ ಬಸವರಾಜಪ್ಪ (55), ಅವರ ಪತ್ನಿ ಸಾವಿತ್ರಮ್ಮ (45), ಪುತ್ರಿ ಕವಿತಾ (26) ಹಾಗೂ ಕವಿತಾ ಅವರ ಮಕ್ಕಳಾದ ಹೇಮಂತ (5) ಮತ್ತು ಗದಿಗೇಶ (3) ವಿಷ ಸೇವಿಸಿದವರು. ಕವಿತಾ ಅವರನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಹಾಗೂ ಉಳಿದ ನಾಲ್ವರನ್ನು ಬಾಪೂಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷ ಸೇವನೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ. ಕವಿತಾ ಅವರ ಪತಿ ರಾಜು ಪತ್ನಿ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಪತ್ನಿ ಕವಿತಾ ಮತ್ತು ಮಕ್ಕಳನ್ನು ತವರು ಮನೆಯಲ್ಲಿ ಬಿಟ್ಟು ಹೋಗಿದ್ದಾರೆ. ಈ ಸಂಬಂಧ ಕಲಹ ನಡೆದಿತ್ತು. ಇದರಿಂದ ನೊಂದು ಸಾಮೂಹಿಕವಾಗಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ.

ಕವಿತಾ ಅವರು ಶಿಕ್ಷಕಿ ತರಬೇತಿ ಪಡೆದಿದ್ದು, ಕುಂದೂರು ಕೂಲಂಬಿ ಭಾಗದ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಹಿಂದೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದರು.

ಹೊನ್ನಾಳಿ ಪೊಲೀಸ್ ಠಾಣೆಗೆ ಸಂಬಂಧಿಕರು ದೂರು ನೀಡಿದ್ದಾರೆ ಎಂದು ಸಿಪಿಐ ಜೆ. ರಮೇಶ್ ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !