ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫ್ಲೋರೈಡ್‌ ಅಂಶ ಪತ್ತೆಯಾದರೆ ನಿರು ಬಳಸಬೇಡಿ

ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ; ಸಂಸದೆ ಪ್ರಭಾ
Published : 26 ಸೆಪ್ಟೆಂಬರ್ 2024, 15:27 IST
Last Updated : 26 ಸೆಪ್ಟೆಂಬರ್ 2024, 15:27 IST
ಫಾಲೋ ಮಾಡಿ
Comments

ಹೊನ್ನಾಳಿ: ‘ಕತ್ತಿಗೆ ಗ್ರಾಮದಲ್ಲಿ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ಪತ್ತೆಯಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದು, ನೀರನ್ನು ಪರೀಕ್ಷೆಗಾಗಿ ಲ್ಯಾಬ್‍ಗೆ ಕಳಿಸಿಕೊಡಬೇಕು. ಅಲ್ಲಿ ಪ್ಲೋರೈಡ್ ಅಂಶ ಪತ್ತೆಯಾದರೆ, ಅದನ್ನು ಬಳಸದಂತೆ ಗ್ರಾಮಸ್ಥರಿಗೆ ಎಚ್ಚರಿಕೆ ಕೊಡಬೇಕು’ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್‌ ತಿಳಿಸಿದರು.

ಬುಧವಾರ ತಾಲ್ಲೂಕಿನ ಕೂಲಂಬಿ ಹಾಗೂ ಕತ್ತಿಗೆ ಗ್ರಾಮದಲ್ಲಿ ಎಸ್.ಡಿ.ಪಿ. ಯೋಜನೆಯಡಿ ಎರಡೂ ಗ್ರಾಮಗಳಿಗೆ ತಲಾ ₹ 3 ಕೋಟಿ ವೆಚ್ಚದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಒಂದು ವೇಳೆ ನೀರಿನಲ್ಲಿ ಫ್ಲೋರೈಡ್‌ ಅಂಶ ಪತ್ತೆಯಾದರೆ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಂಜೂರು ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡುವ ಬಗ್ಗೆ ಯೋಜನೆ ಹಾಕಿಕೊಳ್ಳಲಾಗಿದ್ದು, ಶಾಸಕರ ಅನುದಾನದಲ್ಲಿ 1 ಕೊಠಡಿ, ಸಂಸದರ ಅನುದಾನದಲ್ಲಿ 1 ಕೊಠಡಿ ಮತ್ತು ಗ್ರಾಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ರಚನೆ ಮಾಡಿದ ನಂತರ ಸಾಧ್ಯವಾದರೆ ಅವರಿಂದ ಒಂದು ಕೊಠಡಿಗೆ ಹಣ ಸಂಗ್ರಹಿಸಿ ಕೊಠಡಿಗಳನ್ನು ನಿರ್ಮಿಸೋಣ’ ಎಂದರು.

ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿದರು.  

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಓಬಮ್ಮ, ಉಪಾಧ್ಯಕ್ಷೆ ಜಯಮ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಡಿಎಚ್‌ಒ ಸುರೇಶ್ ಬಾರ್ಕಿ, ಕತ್ತಿಗೆ ಪಿಎಚ್‍ಸಿ ವೈದ್ಯಾಧಿಕಾರಿ ಡಾ.ಮಲ್ಲಿಕಾರ್ಜುನ್, ಟಿಎಚ್‍ಒ ಡಾ.ಎನ್.ಎಚ್.ಗಿರೀಶ್, ಹಿರಿಯ ಆರೋಗ್ಯ ನಿರೀಕ್ಷಕ ಶಿವಪದ್ಮ, ಪಿಡಿಒ ಮಂಗಳೇಶ್ ನಾಯ್ಕ, ಗುತ್ತಿಗೆದಾರ ಸಂತೋಷ್, ಪುಟ್ಟಸ್ವಾಮಿ, ಎಂಜಿನಿಯರ್ ಮಂಜುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT