ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನಾಲ್ವರು ಮಕ್ಕಳು, ಇಬ್ಬರು ವೃದ್ಧರು ಸೇರಿ ಒಂದೇ ದಿನ 21 ಮಂದಿಗೆ ಸೋಂಕು

Last Updated 3 ಮೇ 2020, 16:29 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಭಾನುವಾರಒಂದೇ ದಿನ21 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಜಿಲ್ಲೆಯಲ್ಲಿ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 29ಕ್ಕೆ ಏರಿದೆ. ಒಬ್ಬರು ಮೃತಪಟ್ಟಿದ್ದಾರೆ.

ಬಾಷಾನಗರ ಮತ್ತು ಜಾಲಿನಗರದಲ್ಲಿ ಪತ್ತೆಯಾದ ಸೋಂಕಿತರಿಬ್ಬರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿ ಇಂದು ಸೋಂಕು ದೃಢಪಟ್ಟವರುಇದ್ದರು.

ಖಚಿತಗೊಂಡ 21 ಪ್ರಕರಣಗಳಲ್ಲಿ ನಾಲ್ವರು ಮಕ್ಕಳು, ಇಬ್ಬರು ವೃದ್ಧರು ಸೇರಿದ್ದಾರೆ. 9 ಪುರುಷರು, 8 ಮಹಿಳೆಯರು ಇದರಲ್ಲಿ ಒಳಗೊಂಡಿದ್ದು, ಒಬ್ಬರು 70 ವರ್ಷದ ವೃದ್ಧರಾಗಿದ್ದು, ಮತ್ತೊಬ್ಬರು 62 ವರ್ಷದ ವೃದ್ಧೆ. ಉಳಿದ 14 ಮಂದಿ 20 ವರ್ಷ ದಾಟಿದವರು. ಅದರಲ್ಲಿ ಒಬ್ಬ ಮಹಿಳೆಗೆ 52 ವರ್ಷವಾಗಿದೆ. ಮತ್ಯಾರು 50 ವರ್ಷ ದಾಟಿಲ್ಲ.

ನಾಲ್ವರು ಮಕ್ಕಳಲ್ಲಿ 12 ವರ್ಷದ ಹುಡುಗಿಯೊಬ್ಬಳು ಮತ್ತು 11 ವರ್ಷ, 7 ವರ್ಷ ಮತ್ತು 6 ವರ್ಷದ ಮೂವರು ಹುಡುಗರು ಸೇರಿದ್ದಾರೆ. ಎಲ್ಲ 21 ಮಂದಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯವರೇ ಆಗಿದ್ದಾರೆ.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಸಂಸದ ಜಿ.ಎಂ ಸಿದ್ದೇಶ್ವರ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ ಮಾಹಿತಿ ನೀಡಿದರು.

ಹೊಸದಾಗಿ 21 ಪ್ರಕರಣಗಳು ಪಾಸಿಟಿವ್ ಆಗಿರುವ ಹಿನ್ನೆಲೆಯಲ್ಲಿ ದಾವಣಗೆರೆ ನಗರವನ್ನು ಕಂಟೈನ್‌ಮೆಂಟ್‌ ವಲಯದ ಮಾದರಿಯಲ್ಲಿ ಕಠಿಣ ನಿರ್ಬಂಧ ವಿಧಿಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT