ಗುರುವಾರ , ಆಗಸ್ಟ್ 22, 2019
23 °C

ಒಟಿಪಿ ನಂಬರ್ ಪಡೆದು ವೈದ್ಯಕೀಯ ವಿದ್ಯಾರ್ಥಿನಿಗೆ ವಂಚನೆ

Published:
Updated:

ದಾವಣಗೆರೆ: ಒಟಿಪಿ ನಂಬರ್ ಪಡೆದು ಎಂಬಿಬಿಎಸ್ ವಿದ್ಯಾರ್ಥಿನಿಗೆ ₹1,90,000 ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಕಲಬುರ್ಗಿ ಮೂಲದ ಡಾ.ಅರುಣಾ ವಂಚನೆಗೆ ಒಳಗಾದವರು. ವೈದ್ಯಕೀಯ ಅಧ್ಯಯನ ಮಾಡುತ್ತಿದ್ದ ಅರುಣಾ ಇಲ್ಲಿನ ಕಾವೇರಿ ಮೆಡಿಕಲ್ ಕಾಲೇಜು ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ.  ಜುಲೈ 18ರಂದು ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ‘ನಿಮ್ಮ ಎಂಟಿಎಂ ಕಾರ್ಡ್ ನಿಷ್ಕ್ರಿಯಗೊಂಡಿದ್ದು, (ಡಿಆಕ್ಟಿವೇಟ್‌) ನಿಮ್ಮ ಹಳೆಯ ಎಟಿಎಂ ಕಾರ್ಡ್‌ನ ಒಟಿಪಿ ನಂಬರ್ ಕೊಡಿ ಸಕ್ರಿಯಗೊಳಿಸುತ್ತೇವೆ (ಆಕ್ಟಿವೇಟ್) ಎಂದು ತಿಳಿಸಿದ್ದಾನೆ. ಅದನ್ನು ನಂಬಿದ ಅರುಣಾ ಅವರು ಒಟಿಪಿ ನಂಬರ್ ತಿಳಿಸಿದ್ದಾರೆ.

ಮೊನ್ನೆ ಬ್ಯಾಲೆನ್ಸ್ ಚೆಕ್ ಮಾಡಿದಾಗ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿದೆ. ಆ ನಂತರ ಬ್ಯಾಂಕ್‌ನಲ್ಲಿ ಸ್ಟೇಟ್‌ಮೆಂಟ್‌ನಲ್ಲಿ ಹಣ ಕಡಿತಗೊಂಡಿರುವುದು ಗೊತ್ತಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಸಿಇಎನ್‌ ಠಾಣೆಯ ಸಬ್ ಇನ್‌ಸ್ಪೆಕ್ಟರ್ ದೇವರಾಜು ತನಿಖೆ ಕೈಗೊಂಡಿದ್ದಾರೆ.

Post Comments (+)