ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಷಾವಲಿ ದರ್ಗಾ ಉರುಸ್ 22ರಿಂದ ಆರಂಭ

Last Updated 20 ಫೆಬ್ರುವರಿ 2023, 4:57 IST
ಅಕ್ಷರ ಗಾತ್ರ

ಹರಿಹರ: ಇಲ್ಲಿನ ಹಿಂದೂ-ಮುಸ್ಲಿಮರ ಭಾವೈಕ್ಯದ ಕ್ಷೇತ್ರ ಹಜರತ್ ಸೈಯದ್ ನಾಡಬಂದ್ ಷಾವಲಿ ದರ್ಗಾದ ಉರುಸ್ ಫೆಬ್ರುವರಿ 22, 23 ಮತ್ತು 24ರಂದು ನಡೆಯಲಿದೆ ಎಂದು ದರ್ಗಾ ಸಮಿತಿ ಗೌರವಾಧ್ಯಕ್ಷ ಬಿ.ಕೆ.ಸೈಯದ್ ರಹಮಾನ್ ಹೇಳಿದರು.

ಫೆ.22ರಂದು ಮದ್ಯಾಹ್ನ 2.30ಕ್ಕೆ ಫಕೀರರು, ಭಕ್ತಾದಿಗಳಿಂದ ಸಂದಲ್ (ಗಂಧ) ಮೆರವಣಿಗೆ ನಡೆಯಲಿದೆ. ಫೆ.23ರಂದು ಬೆಳಿಗ್ಗೆಯಿಂದ ಸಂಜೆವರೆಗೆ ಫಾತೆಹಾ (ಪೂಜೆ), ವಿವಿಧ ಧಾರ್ಮಿಕ, ಸಾಮಾಜಿಕ ಪ್ರವಚನ ನಡೆಯಲಿದೆ. ರಾತ್ರಿ 10ರಿಂದ ನಾಗಪುರದ ಖಲೀಲ್ ಸೈಯದ್ ಮತ್ತು ಹೈದರಾಬಾದಿನ ಮೊಹ್ಮದ್ ಅಲಿ ಸಾದಿಖ್ ಚಿಸ್ತಿ ತಂಡದವರಿಂದ ನಾತ್-ಎ-ಖವಾಲಿ ನಡೆಯಲಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಫೆ.24 ರಂದು ಮಧ್ಯಾಹ್ನ 2ರಿಂದ ದರ್ಗಾದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಲಿದೆ. ಸಂಸದರು, ಸಚಿವರು, ಶಾಸಕರು, ಮಾಜಿ ಸಚಿವರು, ನಗರಸಭೆ ಸದಸ್ಯರು ಭಾಗವಹಿಸುವರು ಎಂದರು.

ದರ್ಗಾ ಸಮಿತಿಯ ಸೈಯದ್ ಆಸಿಫ್ ಜುನೈದಿ, ಅಲಿ ಅಹ್ಮದ್, ರಹಮತ್ ಉರ್ ರೆಹಮಾನ್, ಅಹ್ಮದ್ ಖಾನ್, ಇಬ್ರಾಹಿಂ ಸಾಬ್, ಸೈಯದ್ ಮಖ್‌ಬೂಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT