ಗುರುವಾರ , ನವೆಂಬರ್ 14, 2019
19 °C

‘ಗಾಂಧಿ ಕನಸು ನನಸಾಗಿಸಲು ಜಾಗೃತಿ ಅಗತ್ಯ’

Published:
Updated:
Prajavani

ತ್ಯಾಗರ್ತಿ: ಗಾಂಧೀ ಸಂಕಲ್ಪ ಯಾತ್ರೆಯು ಪಕ್ಷಾತೀತ ಹಾಗೂ ಜಾತ್ಯಾತೀತ ಕಾರ್ಯಕ್ರಮವಾಗಿದ್ದು, ಗಾಂಧೀಜಿಯವರ ಗ್ರಾಮರಾಜ್ಯ ಹಾಗೂ ರಾಮರಾಜ್ಯದ ಕನಸನ್ನು ನನಸು ಮಾಡುವ ಉದ್ದೇಶದಿಂದ ಪ್ರಧಾನಿ ಮೋದಿಯವರ ಮಾರ್ಗದರ್ಶನದಂತೆ ಗಾಂಧೀಜಿಯವರ ಚಿಂತನೆಯನ್ನು ಹಳ್ಳಿಗಳಿಗೆ ತಲುಪಿಸಲಾಗುತ್ತಿದೆ’ ಎಂದು ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರ ಹೇಳಿದರು.

ತ್ಯಾಗರ್ತಿಯಲ್ಲಿ ಭಾನುವಾರ ನಡೆದ ಮಹಾತ್ಮಾ ಗಾಂಧೀ 150 ಅಂಗವಾಗಿ ಸ್ವದೇಶಿ ಸ್ವರಾಜ್ ಸ್ವಾವಲಂಬಿ ಮತ್ತು ಸ್ವಚ್ಛ ಭಾರತದ ಸಾಕಾರಕ್ಕಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ಪ್ರಕೃತಿಯನ್ನು ಉಳಿಸುವುದು, ಪ್ಲಾಸ್ಟಿಕ್ ತ್ಯಜಿಸುವುದು, ಗೋಮಾತೆಯನ್ನು ರಕ್ಷಣೆ ಮಾಡುವುದು ಗಾಂಧಿಜಿಯವರ ಆಲೋಚನೆಯಾಗಿದ್ದವು. ಈ ನಿಟ್ಟಿನಲ್ಲಿ ಜನರನ್ನು ಹೆಚ್ಚು ಜಾಗೃತಿಗೊಳಿಸಬೇಕಾಗಿದೆ’ ಎಂದರು.

ತ್ಯಾಗರ್ತಿಯ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಪರಿಸರ ಜಾಗೃತಿಗಾಗಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ಜಿಲ್ಲಾ ಬಿಜೆಪಿ ಮುಖಂಡ ದತ್ತಾತ್ರಿ, ಶಾಸಕ ಹರತಾಳು ಹಾಲಪ್ಪ ಮಾತನಾಡಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಪ್ರಸನ್ನ ಕೆರೆಕೈ, ಶಕ್ತಿಕೇಂದ್ರದ ಅಧ್ಯಕ್ಷ ಶ್ರೀಧರ್ ಸಂಪಳ್ಳಿ , ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ್ ಗಾಳಿಪುರ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸವಿತಾ ನಟರಾಜ್, ದೇವೇಂದ್ರಪ್ಪ, ಹಾಗೂ ಪ್ರಮುಖರಾದ ಎ.ಟಿ. ನಾಗರತ್ನ, ಗುರುರಾಜ್, ಕೃಷ್ಣಮೂರ್ತಿ ಹೊಸಂತೆ, ಶಿವು ತ್ಯಾಗರ್ತಿ, ಕೆ.ಬಿ. ಗಣಪತಿ ಇದ್ದರು.

ಪ್ರತಿಕ್ರಿಯಿಸಿ (+)