‘ಭಾನುವಾರ 12 ಗಂಟೆಗೆ ಗಣೇಶನ ಮೂರ್ತಿಯ ವಿಸರ್ಜನಾ ಮೆರವಣಿಗೆ ಆರಂಭಗೊಳ್ಳಲಿದ್ದು, ಮಹಾಲಕ್ಷ್ಮಿ ಸಾಮಿಲ್ ವೃತ್ತದಿಂದ ಹಿರೇಕಲ್ಮಠ ವೃತ್ತಕ್ಕೆ ಸಾಗಿ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕೆನರಾಬ್ಯಾಂಕ್ ಪಕ್ಕದ ರಸ್ತೆ, ಪೇಟೆ ರಸ್ತೆ ಮೂಲಕ ತುಮ್ಮಿನಕಟ್ಟೆ ವೃತ್ತಕ್ಕೆ ಬಂದು ಅಲ್ಲಿಂದ ರಾಘವೇಂದ್ರ ಸ್ವಾಮಿ ಮಠದ ಸಮೀಪದ ತುಂಗಭದ್ರಾ ನದಿಯಲ್ಲಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದೆ’ ಎಂದು ಸಿಪಿಐ ಸುನೀಲ್‌ಕುಮಾರ್ ಹೇಳಿದರು.