ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಯುವಕರು ಚಂದಾ ವಸೂಲಿ, ಧ್ವಜ ಸ್ತಂಭ, ಮಂಟಪಗಳ ನಿರ್ಮಾಣದಲ್ಲಿ ತೊಡಗಿದ್ದರೆ, ಮೂರ್ತಿ ತಯಾರಕರು ಗಣೇಶನ ವಿಗ್ರಹಗಳಿಗೆ ಅಂತಿಮ ಸ್ಪರ್ಶ ಕೊಡುವಲ್ಲಿ ಮಗ್ನರಾಗಿದ್ದಾರೆ.
ಮಣ್ಣಿನ ವಿಗ್ರಹಗಳ ತಯಾರಿಕೆಗೆ ಒತ್ತು: ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹ ತಯಾರಿಕೆಯನ್ನು ಈಗಾಗಲೇ ನಿಷೇಧಿಸಲಾಗಿದ್ದು, ಬಹುತೇಕರು ಮಣ್ಣಿನ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಜನರೂ ಸಹ ಮಣ್ಣಿನ ವಿಗ್ರಹಗಳೇ ಬೇಕು ಎಂದು ಕೇಳಿ ಖರೀದಿಸುತ್ತಿದ್ದಾರೆ.
‘ಮಣ್ಣಿನ ಮೂರ್ತಿ ತಯಾರಿಕೆ ಪಿಒಪಿ ಮೂರ್ತಿ ತಯಾರಿಕೆಗಿಂತ ತುಸು ಹೆಚ್ಚು ಸಮಯ, ಶ್ರಮ ಬೇಡುತ್ತದೆ. ಪರಿಸರ ಸಂರಕ್ಷಣೆ ಜವಾಬ್ದಾರಿ ನಮ್ಮೆಲ್ಲರದ್ದೂ ಆಗಿದೆ. ಆದ್ದರಿಂದ ಬರೀ ಮಣ್ಣಿನ ವಿಗ್ರಹ ತಯಾರಿಸುತ್ತೇವೆ’ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕ ಆನಗೋಡು ಗ್ರಾಮದ ಮೇಘರಾಜ್.
‘ನಾವು ಮಣ್ಣಿನ ಗಣೇಶ ವಿಗ್ರಹಗಳನ್ನು ಮಾತ್ರವೇ ತಯಾರಿಸುತ್ತೇವೆ. ಮೂರ್ತಿ ತಯಾರಿಕೆ, ಬಣ್ಣ ಹಚ್ಚುವ ಕೆಲಸವೂ ಅಂತಿಮ ಹಂತಕ್ಕೆ ಬಂದಿದೆ. ಈಗಿರುವ ಮೂರ್ತಿಗಳಲ್ಲಿ ಬಹುತೇಕ ಬುಕಿಂಗ್ ಆಗಿವೆ’ ಎಂದು ಆನಗೋಡಿನ ಗಣೇಶ ಮೂರ್ತಿ ತಯಾರಕ ಕುಂಬಾರ ಗಿರೀಶ್ ಹೇಳಿದರು.
ಮಾಯಕೊಂಡ ಗ್ರಾಮದ ವಿನಾಯಕ ಸೇವಾ ಸಮಿತಿ ಯುವಕರು ಗಣೇಶ ಪ್ರತಿಷ್ಟಾಪನೆಗೆ ಧ್ವಜಸ್ತಂಭ ಪೂಜೆ ಸಲ್ಲಿಸಿದರು.