ಗಂಜೀನಹಳ್ಳಿ (ನ್ಯಾಮತಿ): ಗ್ರಾಮದ ದೈವ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು.

ಮಂಗಳವಾರ ಬೆಳಿಗ್ಗೆ ಕೆಂಡಾರ್ಚನೆ ನಡೆದ ನಂತರ ರಾತ್ರಿ ವೀರಭದ್ರೇಶ್ವರ ಸ್ವಾಮಿ ಮತ್ತು ಭದ್ರಕಾಳಮ್ಮ ಧಾರಾಮುಹೂರ್ತ ಜರುಗಿತು. ನಂತರ ನೂತನ ರಥಕ್ಕೆ ಕಳಸ ಸ್ಥಾಪನೆ, ರಥಬಲಿ ಪೂಜೆ ನೆರವೇರಿಸಿ ಆಲಂಕೃತಗೊಂಡ ರಥದಲ್ಲಿ ವೀರಭದ್ರೇಶ್ವರಸ್ವಾಮಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಬುಧವಾರ ಬೆಳಿಗ್ಗೆ ವಿವಿಧ ಮಂಗಳವಾದ್ಯ, ಭಜನೆಯೊಂದಿಗೆ ನೂರಾರು ಭಕ್ತರ ಜಯಘೋಷದೊಂದಿಗೆ ರಥವನ್ನು ಎಳೆಯಲಾಯಿತು.

ಸೋಗಿಲು ಆಂಜನೇಯಸ್ವಾಮಿ ರಥೋತ್ಸವದ ನೇತೃತ್ವ ವಹಿಸಿದ್ದು, ನ್ಯಾಮತಿ ಮತ್ತು ದೊಡ್ಡೆತ್ತಿನಹಳ್ಳಿ ವೀರಭದ್ರೇಶ್ವರ ಸ್ವಾಮಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಮೆರುಗು ತಂದವು.

ಹರಕೆ ಹೊತ್ತ ಭಕ್ತರು ರಥದತ್ತ ಬಾಳೆಹಣ್ಣು, ಮೆಣಸು, ಮಂಡಕ್ಕಿ ಎಸೆದರು. ಗ್ರಾಮಸ್ಥರು ಮಂಗಳಾರತಿ ಮಾಡಿಸಿದರು. ಸಂಜೆ ಓಕಳಿ ಕಾರ್ಯಕ್ರಮದೊಂದಿಗೆ ಆರು ದಿನಗಳ ರಥೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.

ವೀರಭದ್ರಸ್ವಾಮಿಯ ಸೇವಾ ಸಮಿತಿ ಮತ್ತು ಗ್ರಾಮಸ್ಥರು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-44-864698742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.