ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ನಿವೇದನೆಗೆ ಉಡುಗೊರೆ, ಹೂವಿಗೆ ಬೇಡಿಕೆ

ಪ್ರೇಮಿಗಳ ದಿನಾಚರಣೆ ಇಂದು; ಪ್ರೇಮ ನಿವೇದನೆಗೆ ಯುವ ಜೋಡಿಗಳ ಕಾತರ
Last Updated 14 ಫೆಬ್ರುವರಿ 2021, 3:23 IST
ಅಕ್ಷರ ಗಾತ್ರ

ದಾವಣಗೆರೆ: ಭಾನುವಾರಪ್ರೇಮಿಗಳ (ವ್ಯಾಲೆಂಟೈನ್ಸ್‌ ಡೇ) ದಿನ.ಮನ ಮೆಚ್ಚಿದ ಹುಡುಗ– ಹುಡುಗಿಗೆ ಗುಲಾಬಿ ಹೂವು ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳಲು ಪ್ರೇಮಿಗಳು ಸಜ್ಜಾಗಿದ್ದಾರೆ.

ನಗರದ ವಿವಿಧ ಅಂಗಡಿಗಳಲ್ಲಿ ಗುಲಾಬಿ ಹೂ, ಚಾಕೊಲೆಟ್, ಕೇಕ್‌ಗಳು ಹಾಗೂ ಉಡುಗೊರೆಗಳು ಬೆಣ್ಣೆದೋಸೆಯಂತೆ ಖರ್ಚಾಗಿವೆ.ಸುಂದರವಾದ ಕಾಣಿಕೆ ನೀಡಿ ಪ್ರಿಯತಮೆಯನ್ನು ಮೆಚ್ಚಿಸಲು ಗೆಳೆಯ– ಗೆಳೆತಿಯರು ಪ್ರೇಮದ ಹೆಸರಲ್ಲಿ ಪಾರ್ಟಿ ಮಾಡಲು ಯುವ ಮನಸ್ಸುಗಳು ಕಾತರಗೊಂಡಿವೆ.

ನಗರದ ವಿವಿಧ ಬೇಕರಿಗಳಲ್ಲಿ ಹೃದಯಾಕಾರದ ಕೇಕ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಗುಲಾಬಿ ಹೂಗಳ ಜೊತೆ ಚಾಕೊಲೆಟ್, ಟೆಡ್ಡಿಬೇರ್, ಕೇಕ್‌ಗಳನ್ನು ನೀಡಿ ಮನದ ಇಂಗಿತವನ್ನು ವ್ಯಕ್ತಪಡಿಸಲಿದ್ದು, ಪ್ರೇಮಿಗಳ ದಿನಕ್ಕೆ ತಕ್ಕಂತೆಯೇ ಉಡುಗೊರೆಗಳನ್ನು ವಿನ್ಯಾಸ ಮಾಡಿ ಇಡಲಾಗಿದೆ.

ರಾಮ್‌ ಅಂಡ್ ಕೊ ರಸ್ತೆಯಲ್ಲಿರುವ ಇಂದ್ರಪ್ರಸ್ಥ ಫ್ಲವರ್ ಅಂಡ್ ಡೆಕೊರೇಷನ್ ಮಳಿಗೆಯಲ್ಲಿಕೊಲ್ಹಾಪುರ ಹಾಗೂ ಬೆಂಗಳೂರಿನಿಂದ ಗುಲಾಬಿ, ಜರ್ಬೆರಾ, ಆರ್ಕಿಡ್ ಹಾಗೂ ಕಾರ್ನೇಷನ್ ಹೂಗಳನ್ನು ತರಿಸಲಾಗಿದ್ದು, ವಿವಿಧ ವಿನ್ಯಾಸಗಳಲ್ಲಿ ಬೊಕ್ಕೆಗಳನ್ನು ವಿನ್ಯಾಸ ಮಾಡಿ ಇಡಲಾಗಿದೆ.

‘ಪ್ರೇಮಿಗಳು ಹೂಗಳ ಜೊತೆಯಲ್ಲಿ ಚಾಕೊಲೆಟ್‌ಗಳನ್ನು ನೀಡುತ್ತಾರೆ. ಈಗಾಗಲೇ ಕೆಲವರು ಆರ್ಡರ್ ಕೊಟ್ಟು ಹೋಗಿದ್ದಾರೆ. ಪ್ರೇಮಿಗಳ ದಿನಕ್ಕಾಗಿಯೇ ವಿಶೇಷವಾಗಿ ಹೂವುಗಳನ್ನು ತರಿಸಿದ್ದೇವೆ’ ಎನ್ನುತ್ತಾರೆ ಮಳಿಗೆಯ ಅಭಿಷೇಕ್.

ಆಂಜನೇಯ ಬಡಾವಣೆಯಲ್ಲಿರುವ ಲಿಟ್ಲ್ ಆರ್ಚೀಸ್‌ನಲ್ಲಿ ಋತುಮಾನಗಳಿಗೆ ತಕ್ಕಂತೆ ಉಡುಗೊರೆಗಳನ್ನು ತಯಾರು ಮಾಡಲಾಗುತ್ತದೆ. ಗ್ರೀಟಿಂಗ್ಸ್‌ಗಳು ಇಲ್ಲಿ ಲಭ್ಯವಿವೆ. ಜನ್ಮದಿನ, ಹೊಸವರ್ಷ ಹಾಗೂ ಪ್ರೇಮಿಗಳ ದಿನಕ್ಕಾಗಿಯೇ ವಿಶೇಷ ಉಡುಗೊರೆಗಳು ಇಲ್ಲಿವೆ. ಹೃದಯಾಕಾರದ ಪಿಲ್ಲೊ, ಟೆಡ್ಡಿಬೇರ್, ಹೃದಯಾಕಾರದ ಬಲೂನು, ಕ್ಯಾಂಡಲ್‌ಗಳು, ಹೃದಯ ಆಕಾರದ ಚಿತ್ರಗಳನ್ನು ನೇತುಹಾಕಿ ಪ್ರೇಮಿಗಳನ್ನು ಸೆಳೆಯಲಾಗುತ್ತಿದೆ.

‘ವಾಟ್ಸ್‌ ಆ್ಯಪ್ ಹಾಗೂ ಫೇಸ್‌ಬುಕ್‌ಗಳು ಇದ್ದರೂ ಗ್ರೀಟಿಂಗ್ಸ್‌ನ ಮಹತ್ವ ಕಡಿಮೆಯಾಗಿ‌ಲ್ಲ. ಎರಡು ದಿವಸ ಖರೀದಿ ಜೋರಾಗಿಯೇ ಇದೆ’ ಎನ್ನುತ್ತಾರೆ ಅಂಗಡಿಯ ಮೋಹನ್.

‘ಪ್ರೇಮಿಗಳಿಗೆ ಗುಲಾಬಿ ಹೂವಿನ ಜೊತೆ ಚಾಕೊಲೆಟ್ ಕೊಡುವುದು ಈಗ ಟ್ರೆಂಡ್ ಆಗಿದೆ. ಈಗ ಹೆಚ್ಚಿನ ಹುಡುಗರು ತಮ್ಮ ಪ್ರೇಯಸಿಗೆ ‘ಪಾಪ್ ಹಾರ್ಟ್’ ಚಾಕೊಲೆಟ್ ಕೊಡುತ್ತಿದ್ದಾರೆ. ಎನ್ನುತ್ತಾರೆ ಚಾಕೊ ಕ್ಯಾಂಡಿಯ ಮಾಲೀಕ ಆರ್ಯನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT