ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 3.96 ಲಕ್ಷ ಮೌಲ್ಯದ ಬಂಗಾರ ಕಳ್ಳತನ

Last Updated 4 ಡಿಸೆಂಬರ್ 2019, 11:52 IST
ಅಕ್ಷರ ಗಾತ್ರ

ದಾವಣಗೆರೆ: ಆಂಜನೇಯ ಬಡಾವಣೆಯ 16ನೇ ಕ್ರಾಸ್‌ನ ಮನೆಯಲ್ಲಿ ₹3.96 ಲಕ್ಷ ಮೌಲ್ಯದ ಬಂಗಾರದ ಒಡವೆಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

ಬೆಳಗಾವಿಯಲ್ಲಿ ಸಿಇಟಿ ರೀಡರ್ ಆಗಿರುವ ಜಿ. ರುದ್ರಪ್ಪ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಸ್ವಂತ ಗ್ರಾಮವಾದ ಹೊಳಲ್ಕೆರೆ ತಾಲ್ಲೂಕಿನ ತಾಳೆಕಟ್ಟೆ ಗ್ರಾಮಕ್ಕೆ ಹೋಗಿದ್ದ ಮನೆಯ ಮುಂಬಾಗಿಲನ್ನು ಆಯುಧದಿಂದ ಮೀಟಿ ಮನೆಯ ಒಳಗೆ ನುಗ್ಗಿದ್ದಾರೆ. ಮನೆಯ ಹಿಂದಿನ ಬೆಡ್ ರೂಮ್‌ನ ಅಲ್ಮೇರಾ ಮತ್ತು ವಾರ್ಡರೋಬ್ ಹಾಗೂ ದೇವರ ಕೋಣೆಯಲ್ಲಿ ಇಟ್ಟಿದ್ದ ಒಡವೆಗಳನ್ನು ದೋಚಿದ್ದಾರೆ.

₹75 ಸಾವಿರ ಮೌಲ್ಯದ 25 ಗ್ರಾಂ ತೂಕದ ಕರಿಮಣಿ ಬಂಗಾರದ ಸರ, ₹45 ಸಾವಿರ ಮೌಲ್ಯದ ಮುತ್ತಿನ ಸರ, ₹60 ಸಾವಿರ ಮೌಲ್ಯದ 20 ಗ್ರಾಂ 2 ಬಂಗಾರದ ಬಳೆ, ಬಂಗಾರದ ಓಲೆ, ಜುಮುಕಿ, ಉಂಗುರ, ಬಂಗಾರದ ಸರ ಹಾಗೂ ಬೆಳ್ಳಿಯ ಸಾಮಾನುಗಳನ್ನು ಕದ್ದೊಯ್ದಿದ್ದಾರೆ.

ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಡಿಕೆ ಕಳವು

ಚನ್ನಗಿರಿ ತಾಲ್ಲೂಕಿನ ಖೇಣಿ ಮನೆಯಲ್ಲಿ ನೆಲ್ಲಿಹಂಕಲು ಗ್ರಾಮದ ಗಂಗಾಧರಪ್ಪ ಅವರಿಗೆ ಸೇರಿದ 680 ಕೆಜಿ ತೂಕದ ಅಡಿಕೆಯನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

ತೋಟದಲ್ಲಿ ಅಡಿಕೆ ಕೊಯಿಲು ಮಾಡಿಕೊಂಡು ಗೋದಾಮಿನಲ್ಲಿ ಇಟ್ಟಿದ್ದ 8 ಚೀಲ ರಾಶಿ ಅಡಿಕೆ ಮತ್ತು ಒಂದು ಚೀಲದಲ್ಲಿ ಇಟ್ಟಿದ್ದ ಗೊರಬಲು ಅಡಿಕೆಯನ್ನು ಕಳವು ಮಾಡಲಾಗಿದೆ. ಅಡಿಕೆಯ ಮೌಲ್ಯ ₹2.50 ಲಕ್ಷ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT