ಭಾನುವಾರ, ಆಗಸ್ಟ್ 1, 2021
28 °C

ನಗರದಲ್ಲಿ ಉತ್ತಮ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರ ಸೇರಿ ಜಿಲ್ಲೆಯ ಕೆಲವೆಡೆ ಶನಿವಾರ ಉತ್ತಮ ಮಳೆಯಾಯಿತು. ಹಲವು ದಿನಗಳಿಂದ ತುಂತುರು ಮಳೆ ಕಂಡಿದ್ದ ನಗರದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಆಗಾಗ ಸುರಿದ ಮಳೆ ತಂಪೆರೆಯಿತು.

ಬೆಳಿಗ್ಗೆಯಿಂದ ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆ ಸಂಜೆ ಹೊತ್ತಿಗೆ ಉತ್ತಮವಾಗಿ ಸುರಿಯಿತು. ಸಂಜೆ ವೇಳೆಗೆ 20 ನಿಮಿಷಗಳಿಗೂ ಹೆಚ್ಚು ಕಾಲ ಉತ್ತಮ ಮಳೆಯಾಯಿತು. ಮಳೆಯಿಂದ ಚರಂಡಿ ಇಲ್ಲದ ರಸ್ತೆಗಳಲ್ಲಿ ಕೊಂಚ ನೀರು ನಿಂತಿತ್ತು. ಪಿ.ಬಿ. ರಸ್ತೆ, ಜಯದೇವ ಸರ್ಕಲ್‌, ವಿನೋಬನಗರ, ನಿಟುವಳ್ಳಿ ಸೇರಿ ನಗರದ ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿತ್ತು. 

ವಾಹನ ಸವಾರರು ಮಳೆಯಲ್ಲೇ ಸಾಗುತ್ತಿದ್ದುದು ಕಂಡುಬಂತು. ಜಿಲ್ಲೆಯ ಚನ್ನಗಿರಿ ತಾಲ್ಲೂಕು, ಮಲೇಬೆನ್ನೂರು, ತ್ಯಾವಣಿಗೆ, ಸಾಸ್ವೆಹಳ್ಳಿ ಸೇರಿ ಕೆಲವೆಡೆ ತುಂತುರು ಮಳೆಯಾಯಿತು. ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ನ್ಯಾಮತಿ, ಹೊನ್ನಾಳಿ, ಚನ್ನಗಿರಿ ತಾಲ್ಲೂಕುಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.