ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಸಿಬಿಗೆ ಗೂಡ್ಸ್‌ ರೈಲು ಡಿಕ್ಕಿ: ರೈಲು ಸಂಚಾರ ಸ್ಥಗಿತ

Last Updated 7 ನವೆಂಬರ್ 2019, 20:12 IST
ಅಕ್ಷರ ಗಾತ್ರ

ದಾವಣಗೆರೆ: ಇಲ್ಲಿನ ಡಿಸಿಎಂ ಟೌನ್‌ಶಿಪ್ ಬಳಿ ಗುರುವಾರ ಸಂಜೆ ಗೂಡ್ಸ್‌ ರೈಲು ಜೆಸಿಬಿಗೆ ಡಿಕ್ಕಿ ಹೊಡೆದಿದೆ.
ಜೆಸಿಬಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ರೈಲ್ವೆ ಹಳಿ ಜೋಡಣೆ ಕಾಮಗಾರಿ ನಡೆಯುತ್ತಿದ್ದು, ರೈಲು ಬರುತ್ತಿರುವುದನ್ನು ಗಮನಿಸಿದ ಜೆಸಿಬಿ ಚಾಲಕ ಹಾರಿದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಜೆಸಿಬಿ ಸಂಪೂರ್ಣ ಜಖಂಗೊಂಡಿದೆ.

ಜೆಸಿಬಿ ಡಿಕ್ಕಿ ಹೊಡೆದ ರಭಸಕ್ಕೆ ಜೆಸಿಬಿ ಸ್ವಲ್ಪ ದೂರ ತಳ್ಳಿಕೊಂಡು ಹೋಗಿತ್ತು. ಅಪಘಾತದಿಂದ ರೈಲು ಮಾರ್ಗಮಧ್ಯೆಯೇ ನಿಂತಿತ್ತು. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ರೈಲು ಸಂಚಾರ ಸ್ಥಗಿತಗೊಳಿಸಿದರು.

ಅವಘಡದಿಂದಾಗಿ 5 ಗಂಟೆಯಿಂದ ಈ ಮಾರ್ಗದಲ್ಲಿ ದಾವಣಗೆರೆಗೆ ಬರಬೇಕಿದ್ದ ಹಾಗೂ ಹೋಗುವ ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ. ರಾತ್ರಿ 10 ರವರೆಗೂ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇಂಟರ್‌ಸಿಟಿ ಎಕ್ಸ್‌ಪ್ರೆಸ್‌, ಅರಸಿಕೆರೆ–ಹುಬ್ಬಳ್ಳಿ, ಚಿತ್ರದುರ್ಗ–ಹರಿಹರ, ಬೆಂಗಳೂರು–ಹುಬ್ಬಳ್ಳಿ ಸೇರಿ ಹಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

‘ಅವಘಡದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಹಲವು ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ತೋಳಹುಣಸೆ, ಮಾಯಕೊಂಡ ರೈಲು ನಿಲ್ದಾಣದಲ್ಲಿ ರೈಲುಗಳು ನಿಂತಿವೆ. ಅಧಿಕಾರಿಗಳು ಪರಿಶೀಲನೆ ನಡೆಸಿ, ಈ ಮಾರ್ಗದಲ್ಲಿ ರೈಲು ಸಂಚರಿಸಲು ಯಾವುದೇ ತೊಂದರೆಗಳಿಲ್ಲ ಎಂದು ಅಧಿಕೃತ ಮಾಹಿತಿ ನೀಡುವವರೆಗೂ ರೈಲುಗಳನ್ನು ನಿಲ್ಲಿಸಲಾಗುವುದು. ಮಾಹಿತಿ ಬಳಿಕ ರೈಲುಗಳನ್ನು ಓಡಿಸಲಾಗುವುದು‘ ಎಂದು ರೈಲ್ವೆ ಸಬ್‌ ಇನ್‌ಸ್ಪೆಕ್ಟರ್‌ ದ್ಯಾವನಗೌಡರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT