ಹರಿಹರ: ‘ಸರ್ಕಾರದಿಂದ ಬಂದ ಅನುದಾನ ಮತ್ತು ಭಕ್ತರು ನೀಡಿದ ದೇಣಿಗೆಯಲ್ಲಿ ಕೋಟ್ಯಂತರ ಮೊತ್ತವನ್ನು ಗುರುಪೀಠದ ಮೂವರು ಟ್ರಸ್ಟಿಗಳು ದುರುಪಯೋಗ ಮಾಡಿಕೊಂಡ ಅನುಮಾನವಿದೆ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಆಡಳಿತಾಧಿಕಾರಿ ಡಾ.ಎಚ್.ಪಿ. ರಾಜಕುಮಾರ್ ಆರೋಪಿಸಿದರು.

‘ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ, ಸದಸ್ಯರಾದ ಚಂದ್ರಶೇಖರ್ ಪೂಜಾರ್, ಜ್ಯೋತಿ ಪ್ರಕಾಶ್ ಹಣ ದುರುಪಯೋಗ ಮಾಡಿಕೊಂಡ ಅನುಮಾನವಿದೆ. ಇವರಿಗೆ ಲೆಕ್ಕಪತ್ರ ಕೇಳಿದಾಗಲೆಲ್ಲ ಗುರುಪೀಠದ ಪೀಠಾಧಿಪತಿ ವಚನಾನಂದ ಶ್ರೀಗಳು ಪೀಠತ್ಯಾಗ ಮಾಡಬೇಕೆಂದು ಒತ್ತಾಯಿಸುತ್ತಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಗುರುಪೀಠದ ಆವರಣದ ಜಮೀನು ಖರೀದಿಗೆ ಮಾಜಿ ಸಚಿವರಾದ ಕರುಣಾಕರ ರೆಡ್ಡಿ, ಶಿವ ದೇವಸ್ಥಾನಕ್ಕೆ ದಿ.ಶಾಮನೂರು ಶಿವಶಂಕರಪ್ಪ, ಗುರುಧ್ಯಾನ ಮಂದಿರಕ್ಕೆ ಮಾಜಿ ಸಿ.ಎಂ. ಬಸವರಾಜ ಬೊಮ್ಮಾಯಿ ದೇಣಿಗೆ ನೀಡಿದ್ದಾರೆ. ಮಠದ ಸಮೀಪದಲ್ಲಿ 4 ಎಕರೆ ಜಮೀನು ಖರೀದಿಗೆ ಹರಿಹರ, ರಾಣೆಬೆನ್ನೂರು, ಸಮುದಾಯದ ಜನರ ನೆರವಿದೆ. ಅಲ್ಲದೆ, ಸರ್ಕಾರದ ಅನುದಾನ, ಭಕ್ತರ ದೇಣಿಗೆಯ ಲೆಕ್ಕ ಕೊಡಬೇಕಿದೆ’ ಎಂದು ಹೇಳಿದರು.

‘ನಿಯಮಾನುಸಾರ ಲೆಕ್ಕ ಕೇಳಲಾಗುತ್ತಿದೆ. ಮಠದ ಹೆಸರಲ್ಲಿ 4 ಬ್ಯಾಂಕ್ ಖಾತೆಗಳ ಬದಲಿಗೆ, 14 ಖಾತೆಗಳಿರುವುದು ಪರಿಶೀಲನೆ ವೇಳೆ ಗೊತ್ತಾಗಿದೆ. ಬ್ಯಾಂಕ್ ಖಾತೆ ನಿರ್ವಹಣೆಗೆ ಬಿ.ಸಿ.ಉಮಾಪತಿ ಹಾಗೂ ಚಂದ್ರಶೇಖರ್ ಪೂಜಾರ್ ಅವರ ಸಹಿಯೊಂದಿಗೆ ಆಡಳಿತಾಧಿಕಾ ಸಹಿ ಸೇರಿಸಿ ಎಂದರೂ ಸೇರಿಸಿಲ್ಲ’ ಎಂದರು.

‘ಗುರುಪೀಠದ ಆವರಣದ ಕಟ್ಟಡದ ನಿರ್ಮಾಣಕ್ಕಾಗಿ ನಾನು ವೈಯಕ್ತಿಕವಾಗಿ ₹ 15 ಲಕ್ಷ ಮೊತ್ತದ ದೇಣಿಗೆ ಚೆಕ್ ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಅವರಿಗೆ ನೀಡಿದ್ದೇನೆ. ಈವರೆಗೂ ರಶೀದಿ ನೀಡಿಲ್ಲ. ಗುರುಪೀಠದ ಇತರ ಆಸ್ತಿಗಳ ರಕ್ಷಣೆಗೆ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ’ ಎಂದು ಸಮುದಾಯದ ಮುಖಂಡ ಸೋಮಣ್ಣ ಬೇವಿನಮರದ ದೂರಿದರು.

‘ಶ್ರೀಗಳ ಪೀಠ ತ್ಯಾಗದ ಪ್ರಕ್ರಿಯೆ ನಡೆಸಿದರೆ ಈ ಮೂವರ ವಿರುದ್ಧ ಸಮುದಾಯದ ಜನರೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಅವರು ಹೇಳಿದರು.

2 ಎಕರೆ ಜಮೀನು ದುರುಪಯೋಗ

ಸುದ್ದಿಗೋಷ್ಠಿ ನಡೆಯುವಾಗಲೇ ಸಮುದಾಯದ ಮುಖಂಡ ಹೊನ್ನಾಳಿಯ ಪ್ರಶಾಂತ್ ಪ್ಯಾಟಿ ಎಂಬವರು ಏರುಧ್ವನಿಯಲ್ಲಿ ಮಾತನಾಡಿ ಸೋಮಣ್ಣ ಬೇವಿನಮರದ ಅವರು ಶಿಗ್ಗಾವಿಯಲ್ಲಿನ ಗುರುಪೀಠಕ್ಕೆ ಸೇರಿದ 2 ಎಕರೆ ಜಮೀನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ಆರೋಪಿಸಿದಾಗ ಕೆಲಕಾಲ ಗೊಂದಲ ಸೃಷ್ಟಿಯಾಯಿತು. ನಂತರ ಪೊಲೀಸರು ಅವರನ್ನು ಹೊರಕ್ಕೆ ಕಳಿಸಿದರು.

ಬೀದಿ ರಂಪ ಮಾಡಬೇಡಿ: ಆಗ್ರಹ

ಹೊನ್ನಾಳಿಯ ಪ್ರಶಾಂತ್ ಪ್ಯಾಟಿ ಶಶಿಧರ ಗೌಡ ಹಾಲೇಶ ಚಂದ್ರ ಪಾಟೀಲ್ ರಾಜುಗೌಡ ಎಂಬವರು ಗುರುಪೀಠದ ಆವರಣದಲ್ಲಿ ಪ್ರತ್ಯೇಕ ಸುದ್ದಿಗೋಷ್ಠಿ ನಡೆಸಿ ಎರಡೂ ಗುಂಪುಗಳು ಸಮನ್ವಯದಿಂದ ನಾಲ್ಕು ಗೋಡೆಗಳ ಮಧ್ಯದಲ್ಲಿ ಗೊಂದಲಗಳನ್ನು ಬಗೆಹರಿಸಿಕೊಳ್ಳಬೇಕು. ಇದನ್ನು ಹಾದಿ ಬೀದಿ ರಂಪಾಟ ಮಾಡಬಾರದೆಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.