ಶನಿವಾರ, ಜುಲೈ 2, 2022
22 °C
ಗಮನ ಸೆಳೆದ ಬೆಲ್ಲದ ಬಂಡಿಗಳ ಮೆರವಣಿಗೆ

ಗ್ರಾಮದೇವತೆ ಉತ್ಸವ: ಮೂರನೇ ದಿನವೂ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಹರ: ಗ್ರಾಮದೇವತೆ ಹಬ್ಬದ ಸಡಗರ, ಸಂಭ್ರಮ ಮೂರನೇ ದಿನವಾದ ಗುರುವಾರವೂ ಮುಂದುವರಿಯಿತು. ಭಕ್ತರು ದೇವಸ್ಥಾನ ರಸ್ತೆಯ ಚೌಕಿಮನೆ, ಮಹಜೇನಹಳ್ಳಿ, ಕಸಬಾ ಗ್ರಾಮದೇವತೆ ದೇವಸ್ಥಾನ ಮುಂದೆ ಸಾಲಲ್ಲಿ ನಿಂತು ಪೂಜೆ ಸಲ್ಲಿಸಿದರು.

 ನೂರಾರು ಮಹಿಳೆಯರು ತಮ್ಮ ಬೀಗರು, ಬಿಜ್ಜರೊಂದಿಗೆ ಹೊಸ ಬಟ್ಟೆ ಧರಿಸಿ ದೇವಿಗೆ ಹಣ್ಣು, ಕಾಯಿ ಮಾಡಿಸಿ ಪೂಜೆ ಮಾಡಿಸಿದರು.

ಚೌಕಿಮನೆ ಸೇರಿ ಊರಮ್ಮನ ದೇವಸ್ಥಾನಗಳ ಮುಂದೆ ಭಕ್ತರು ಸಾಲಲ್ಲಿ ಬ್ಯಾರಿಕೇಡ್ ಹಾಕಿದ್ದರಿಂದ ನೂಕು, ನುಗ್ಗಲು ಉಂಟಾಗಲಿಲ್ಲ. ಸಂಜೆಯಿಂದ ಭಕ್ತರ ಸಂಖ್ಯೆ ಅಧಿಕವಾಗಿತ್ತು.

ಖರೀದಿ ಭರಾಟೆ: ಚೌಕಿ ಮನೆ ಹಿಂಭಾಗದಲ್ಲಿ ನೂರಾರು ಅಂಗಡಿಗಳಲ್ಲಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಪರ ಊರು, ಸ್ಥಳಗಳಿಂದ ಬಂದಿರುವ ಅತಿಥಿಗಳೊಂದಿಗೆ ಜಾತ್ರೆಗೆ ತೆರಳಿ ಮಕ್ಕಳಿಗೆ ಆಟಿಕೆ, ಮಹಿಳೆಯರಿಗೆ ಬಳೆ, ಅಲಂಕಾರಿಕ ವಸ್ತುಗಳು, ಖಾರಾ, ಮಂಡಕ್ಕಿ, ತಿಂಡಿ, ತಿನಿಸುಗಳನ್ನು ಖರೀದಿಸುವ ದೃಶ್ಯ ಕಂಡುಬಂತು.

ನಗರದ ದೇವಸ್ಥಾನ ರಸ್ತೆ, ಚೌಕಿ ಮನೆ ಹಿಂಭಾಗ, ಮುಖ್ಯರಸ್ತೆ, ಶಿವಮೊಗ್ಗ ವೃತ್ತ ಹಾಗೂ ಇತರೆ ಆಯಕಟ್ಟಿನ ಸ್ಥಳಗಳಲ್ಲಿ ಬಳೆ, ಅಲಂಕಾರಿಕ, ಆಟಿಕೆ ವಸ್ತುಗಳ ಅಂಗಡಿಗಳನ್ನು ತೆರೆಯಲಾಗಿದ್ದು ಜನ ಜಂಗುಳಿ ಇತ್ತು. ಗಾಂಧಿ ಮೈದಾನದಲ್ಲಿ ಬೃಹತ್ ಜಾರು ಬಂಡಿ, ಜೋಕಾಲಿ ಇತರೆ ಆಟಿಕೆಗಳನ್ನು ಆಡಿದ ಮಕ್ಕಳು ಸಂತಸ ಪಟ್ಟರು.

ಕಸ ವಿಲೇವಾರಿ ಸವಾಲು: ಉತ್ಸವದ ನಿಮಿತ್ತ ಮಂಗಳವಾರದ ಸಿಹಿ ಊಟ, ಬುಧವಾರದಂದು ಭರ್ಜರಿ ಬಾಡೂಟ ನಡೆದಿದೆ. ಬಾಡೂಟಕ್ಕೆ ಬಳಸಿದ ಪ್ಲಾಸ್ಟಿಕ್ ತಟ್ಟೆ, ಲೋಟ ಇತರೆ ಪರಿಕರಗಳ ತ್ಯಾಜ್ಯ ಎಲ್ಲೆಡೆ ಕಂಡುಬಂತು.

ಜಾತ್ರೆಯಲ್ಲಿ ಮದ್ಯದ ಬಳಕೆಯೂ ಹೆಚ್ಚಾಗಿ ನಡೆದಿದೆ. ಬಾರ್ ಅಂಡ್ ರೆಸ್ಟೊರಂಟ್, ವೈನ್‌ಶಾಪ್ ಆವರಣ ಹಾಗೂ ಎಲ್ಲೆಡೆ ಖಾಲಿಯಾದ ಮದ್ಯದ ಪೌಚ್‌ಗಳು ಬಿದ್ದಿದ್ದವು. 

ಸಂಜೆಯಿಂದ ನಗರದಲ್ಲಿ ಎತ್ತಿನ ಬಂಡಿಯ ಮೆರವಣಿಗೆ ನಡೆಸಲಾಯಿತು. ಎತ್ತುಗಳನ್ನು ಅಲಂಕರಿಸಿ, ಬ್ಯಾಂಡ್, ಬಾಜಾಗಳೊಂದಿಗೆ ಸಾಗಿದ ಮೆರವಣಿಗೆ ಗಮನ ಸೆಳೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು