ಭಾನುವಾರ, ಅಕ್ಟೋಬರ್ 2, 2022
19 °C

ಸ್ವಾತಂತ್ರ್ಯದ ಅಮೃತಮಹೋತ್ಸವ: ಬಿಜೆಪಿಯಿಂದ ಬೃಹತ್‌ ಬೈಕ್‌ ರ್‍ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸ್ವಾತಂತ್ರ್ಯದ ಅಮೃತಮಹೋತ್ಸವದ ಪ್ರಯುಕ್ತ ಬಿಜೆಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬೃಹತ್‌ ಬೈಕ್‌ ರ‍್ಯಾಲಿ ಗುರುವಾರ ನಗರದಲ್ಲಿ ನಡೆಯಿತು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಬೈಕ್‌ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ‘ಸಮಾನತೆಯ ಮಹತ್ವವನ್ನು ಸಾರಲು, ರಾಷ್ಟ್ರಧ್ವಜದ ಪ್ರಾಮುಖ್ಯ ಹೇಳಲು ಈ ಬೈಕ್‌ ರ‍್ಯಾಲಿ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಅಮೃತಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಜಗದೀಶ್‌ ಹೇಳಿದರು.

ಬೇತೂರು ರಸ್ತೆಯಲ್ಲಿರುವ ವೆಂಕಟೇಶ್ವರ ವೃತ್ತದಲ್ಲಿ ಬೈಕ್ ರ‍್ಯಾಲಿ ಆರಂಭಗೊಳ್ಳಲಿದೆ. ಗಣೇಶ ಹೋಟೆಲ್‌ ರಸ್ತೆ, ಎಪಿಎಂಸಿ ಫ್ಲೈ ಓವರ್‌, ಹೊಸ ಬಸ್‌ನಿಲ್ದಾಣ, ಗಾಂಧಿ ಸರ್ಕಲ್‌, ರೈಲು ನಿಲ್ದಾಣ, ರೇಣುಕಾ ಮಂದಿರ, ಎವಿಕೆ ಕಾಲೇಜು ರಸ್ತೆ, ಗುಂಡಿ ಸರ್ಕಲ್‌, ಡೆಂಟಲ್‌ ಕಾಲೇಜು ರಸ್ತೆ, ವಿದ್ಯಾನಗರ, ನೂತನ ಕಾಲೇಜು ರಸ್ತೆ, ಬಿಐಇಟಿ, ಬಾಪೂಜಿ ಸ್ಕೂಲ್‌, ಲಕ್ಷ್ಮೀ ಫ್ಲೋರ್‌ ಮಿಲ್‌, ರಿಂಗ್‌ರಸ್ತೆಗಾಗಿ ಸಾಗಿ ಅಮರ್‌ ಜವಾನ್‌ ಸರ್ಕಲ್‌ನಲ್ಲಿ ಸಮಾಪನಗೊಂಡಿತು.

ಮೇಯರ್‌ ಜಯಮ್ಮ ಗೋಪಿನಾಯ್ಕ್‌, ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌, ಬಿಜೆಪಿ ಮುಖಂಡರಾದ ಡಾ.ಶಿವಯೋಗಿಸ್ವಾಮಿ, ಬಿ.ಜಿ. ಅಜಯ್‌ ಕುಮಾರ್‌, ರಾಜನಹಳ್ಳಿ ಶಿವಕುಮಾರ್‌, ಶ್ರೀನಿವಾಸ್‌ ದಾಸ್‌ಕರಿಯಪ್ಪ, ಯಶವಂತರಾವ್ ಜಾಧವ್‌, ಮಂಜನಾಯ್ಕ, ಡಿ.ಎಸ್‌. ಶಿವಶಂಕರ್‌, ಎಚ್‌.ಪಿ. ವಿಶ್ವಾಸ್‌, ಶಿವಪ್ರಕಾಶ್‌, ಯಲ್ಲೇಶ್‌, ಕೆ.ಎಂ. ವೀರೇಶ್‌, ರಾಜು ನೀಲಗುಂದ,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು