ಹರಪನಹಳ್ಳಿ: ‘ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿಉಳುಮೆ ಮಾಡುವ ರೈತರನ್ನು ಒಕ್ಕಲೆಬ್ಬಿಸಿ, ಭೂಮಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು’ ಎಂದು ರಾಜ್ಯ ರೈತ ಸಂಘ (ಕೋಡಿಹಳ್ಳಿ ಚಂದ್ರಶೇಖರ ಬಣ) ರಾಜ್ಯ ಘಟಕದ ಕಾರ್ಯಾಧ್ಯಕ್ಷ ಬಿ.ವಿ. ಗೌಡ ಒತ್ತಾಯಿಸಿದರು.

‘ಕಂಡಿಕೇರಿ, ವಟ್ಲಹಳ್ಳಿ, ಅಲಗಿಲವಾಡ, ಕಡೆಕಲ್ ತಾಂಡ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಯನ್ನು ಸಂಪೂರ್ಣ ನಾಶ ಮಾಡಲಾಗಿದೆ. ರೈತರಿಗೆ ಅನ್ಯಾಯ ಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತಂದಿದ್ದಾರೆ’ ಎಂದು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಚಿನ್ನಸಮುದ್ರಿ ಶೇಖರನಾಯ್ಕ ಮಾತನಾಡಿ, ‘ಜಮೀನು ಖಾಲಿ ಮಾಡಲು ನೊಟೀಸ್ ನೀಡಲಾಗಿದ್ದು, ಬಿತ್ತನೆ ಮಾಡಿದ ರೈತರಿಗೆ ದಂಡ ಕಟ್ಟಲು ಗಡುವು ನೀಡಲಾಗಿದೆ. ಜಮೀನುಗಳಲ್ಲಿರುವ ಬೆಳೆ ನಾಶಪಡಿಸಿ, ಗಡಿ ಗುರುತು ಮಾಡಿರುವ ಅರಣ್ಯ ಇಲಾಖೆಗೆ ಉತ್ತರ ಕೊಡಲು, ಮೇ 18ರಂದು ಬೆಳಿಗ್ಗೆ 11 ಗಂಟೆಗೆ ಅಲಗಿಲವಾಡ ಕ್ರಾಸ್ನಲ್ಲಿ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.

ರೈತ ಅಭಿಮಾನಿ ಸಂಘದ ಅಧ್ಯಕ್ಷ ಶಿರಗಾನಹಳ್ಳಿ ವಿಶ್ವನಾಥ ಮಾತನಾಡಿ, ‘ಗುಡಿ ಗುರುತು ನೆಪದಲ್ಲಿ ನೂರಾರು ರೈತರನ್ನು ಒಕ್ಕಲೆಬ್ಬಿಸಿರುವ ಅಧಿಕಾರಿ ವರ್ತನೆ ಖಂಡನೀಯ’ ಎಂದು ಹೇಳಿದರು.

ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ತೆಲಿಗಿ ಸುರೇಶಪ್ಪ, ಶೇಖರನಾಯ್ಕ, ಹರಿಹರ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ, ಬೋಜ್ಯನಾಯ್ಕ, ರಾಜಾನಾಯ್ಕ, ವೆಂಕಟೇಶನಾಯ್ಕ, ಲಕ್ಷ್ಮಣ್ ನಾಯ್ಕ, ಭೀಮನಾಯ್ಕ, ಪುಟ್ಟನಾಯ್ಕ, ದೇಶ್ಯಾನಾಯ್ಕ, ಮಿಟ್ಯಾನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-25-1894981683

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.